
ಬೆಂಗಳೂರು (ನ.22): ಹಕ್ಕುಬಾಧ್ಯತಾ ಸಮಿತಿಯ ಶಿಫಾರಸಿನ ಮೇರೆಗೆ ಪತ್ರಕರ್ತರಾದ ರವಿ ಬೆಳೆಗೆರೆ ಮತ್ತು ಅನಿಲ್‌ರಾಜ್ ವಿರುದ್ಧ ಸದನ ಕೈಗೊಂಡ ಹಕ್ಕುಚ್ಯುತಿ ನಿರ್ಣಯ ಮರು ಪರಿಶೀಲನೆ ಮಾಡಬೇಕು ಎಂಬ ಪತ್ರಕರ್ತರ ಪರ ವಕೀಲರ ಪ್ರಸ್ತಾಪವನ್ನು ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ತಿರಸ್ಕರಿಸಿದ್ದಾರೆ. ಮಂಗಳವಾರ ಮರು ಪರಿಶೀಲನಾ ಪ್ರಸ್ತಾಪವನ್ನು ಸದನ ಕೈಬಿಡುವ ಮೂಲಕ ಪತ್ರಕರ್ತರಿಗೆ ವಿಧಿಸಿರುವ ಜೈಲು ಶಿಕ್ಷೆ ಮತ್ತು ದಂಡದ ತೀರ್ಪು ಜೀವಂತವಾಗಿ ಉಳಿದುಕೊಂಡಂತಾಯಿತು.
‘ಹಾಯ್ ಬೆಂಗಳೂರು’ ಪತ್ರಿಕೆ ಸಂಪಾದಕ ರವಿ ಬೆಳಗೆರೆ ಮತ್ತು ‘ಯಲಹಂಕ ವಾಯ್ಸ್’ ಸಂಪಾದಕ ಅನಿಲ್‌ರಾಜ್ ಅವರು ಸದನದ ಶಿಕ್ಷೆಯನ್ನು ಮರು ಪರಿಶೀಲನೆ ಮಾಡುವಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ಸಭಾಧ್ಯಕ್ಷರು ಚರ್ಚೆಗೆ ಸದನದ ಮುಂದಿ ಟ್ಟರು. ಈ ವೇಳೆ ಹಕ್ಕುಬಾಧ್ಯತಾ ಸಮಿತಿಯ ಶಿಫಾರಸಿನ ಮೇರೆಗೆ ಸದನ ಕೈಗೊಂಡಿದ್ದ ತೀರ್ಮಾನಕ್ಕೆ ಬದ್ಧವಾಗಿರಬೇಕು ಎಂದು ಸದನದ ಸದಸ್ಯರು ಆಗ್ರಹಿಸಿದರು. ಪೊಲೀಸರಿಗೆ ಶಿಫಾರಸು: ಪತ್ರಕರ್ತರಾದ ರವಿ ಬೆಳೆಗೆರೆ ಮತ್ತು ಅನಿಲ್‌ರಾಜ್ ವಿರುದ್ಧ ಸದನ ಕೈಗೊಂಡ ಹಕ್ಕುಚ್ಯುತಿ ನಿರ್ಣಯ ಮರು ಪರಿಶೀಲನೆ ಪ್ರಸ್ತಾಪವನೆ ತಿರಸ್ಕಾರಗೊಂಡಿರುವ ಬೆನ್ನಲ್ಲೇ ವಿಧಾನಸಭೆಯ ಸಚಿವಾಲಯದಿಂದ ಪೊಲೀಸ್ ಮಹಾನಿರ್ದೇಶಕರು, ಪೊಲೀಸ್ ಆಯುಕ್ತರು ಹಾಗೂ ಕಾರಾಗೃಹದ ಮುಖ್ಯಸ್ಥರಿಗೆ ಪತ್ರ ಬರೆಯಲಾಗಿದ್ದು, ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.