ವಿಡಿಯೋಕಾನ್ ಸೇರಿ 40 ಕಂಪನಿ ಪಾಪರ್ !

Published : Aug 30, 2017, 11:34 PM ISTUpdated : Apr 11, 2018, 12:49 PM IST
ವಿಡಿಯೋಕಾನ್ ಸೇರಿ 40 ಕಂಪನಿ ಪಾಪರ್ !

ಸಾರಾಂಶ

ವಿಡಿಯೋಕಾನ್, ಜೇಪಿ ಅಸೋಸಿಯೇಟ್ಸ್, ಉತ್ತಮ ಗಾಲ್ವಾ, ವೀಸಾ ಸ್ಟೀಲ್, ನಾಗಾರ್ಜುನ ಆಯಿಲ್,ಇಸ್ಪಾತ್ ಕೋಟೆಡ್ ಸೇರಿ 40 ಕಂಪನಿಗಳು ಪಟ್ಟಿಯಲ್ಲಿ ಇವೆ.

ಮುಂಬೈ(ಆ.30): ಭಾರತೀಯ ರಿಸರ್ವ್ ಬ್ಯಾಂಕ್ ಮಂಗಳವಾರ ಮತ್ತೆ 40 ಕಂಪನಿಗಳ 2ನೇ ಪಟ್ಟಿಯನ್ನು ‘ಬಾಕಿದಾರ’ಪಟ್ಟಿಗೆ ಸೇರಿಸಿ ಕಂಪನಿ ಕಾನೂನು ನ್ಯಾಯಾಧಿಕರಣಕ್ಕೆ ಒಪ್ಪಿಸಿದೆ. ಇದರೊಂದಿಗೆ ದಿವಾಳಿ ಹಂತಕ್ಕೆ ಬಂದು ಸಾಲವನ್ನು ಬ್ಯಾಂಕ್‌ಗಳಿಗೆ ಮರುಪಾವತಿಸಲಾಗದ ಪಟ್ಟಿಗೆ ಈ ಕಂಪನಿಗಳು ಸೇರಿಕೊಂಡಂತಾಗಿದೆ. ವಿಡಿಯೋಕಾನ್, ಜೇಪಿ ಅಸೋಸಿಯೇಟ್ಸ್, ಉತ್ತಮ

ಗಾಲ್ವಾ, ವೀಸಾ ಸ್ಟೀಲ್, ನಾಗಾರ್ಜುನ ಆಯಿಲ್,ಇಸ್ಪಾತ್ ಕೋಟೆಡ್ ಸೇರಿ 40 ಕಂಪನಿಗಳು ಪಟ್ಟಿಯಲ್ಲಿ ಇವೆ. ಇವು ಬಹುತೇಕ ಮೂಲಸೌಕರ್ಯ ಹಾಗೂ ಇಂಧನ ವಲಯದ ಕಂಪನಿಗಳಾಗಿವೆ. 35-40 ಖಾತೆಗಳು ಕಟಬಾಕಿದಾರರ ಪಟ್ಟಿಯಲ್ಲಿದ್ದು, ಸ್ಟೇಟ್ ಬ್ಯಾಂಕ್ ಒಂದೇ 25-26 ಖಾತೆ ಹೊಂದಿದೆ ಎಂದು ಸಿಎನ್‌ಬಿಸಿ-ಟಿವಿ 18 ವರದಿ ಮಾಡಿದೆ. ಈ ವಿಷಯ ತಿಳಿಯುತ್ತಿದ್ದಂತೆಯೇ ವೀಸಾ ಸ್ಟೀಲ್ ಷೇರು ಶೇ.124, ವಿಡಿಯೋಕಾನ್ ಷೇರು ಶೇ.3ರಷ್ಟು ಕುಸಿದವು. ಈ ಹಿಂದೆ ಜೂನ್‌ನಲ್ಲಿ 12 ಇಂಥ ಖಾತೆಗಳನ್ನು ಗುರುತಿಸಿತ್ತು. ಪ್ರತಿ ಕಂಪನಿಯು 5 ಸಾವಿರ ಕೋಟಿ ರು.ನಂತೆ 1.75ಲಕ್ಷ ಕೋಟಿ ರು. ಬಾಕಿ ಉಳಿಸಿಕೊಂಡಿದ್ದವು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

India News Live: ದಿಲ್ಲಿ ಪ್ರತಿಭಟನೆ ಹೆಸರಲ್ಲಿ ಸಾರ್ವಜನಿಕ ಸ್ಥಳ ಅನಿರ್ದಿಷ್ಟಾವಧಿ ಆಕ್ರಮಿಸುವಂತಿಲ್ಲ; ಸುಪ್ರೀಂ ಗರಂ
Karnataka News Live: ಕಬ್ಬು ದರ ನಿಗದಿ ಸಂಧಾನ ಸಭೆ ವಿಫಲ, ರೈತರಿಂದ ₹3,500 ಪ್ರಸ್ತಾಪ ತಿರಸ್ಕಾರ; ಇಂದು ಮತ್ತೆ ಮಾತುಕತೆ