ಮೋದಿ ಮಾತಿನಲ್ಲೆ ಕೈಲಾಸ ತೋರಿಸುತ್ತಾರೆ; ನಾವು ಕೆಲಸ ಮಾಡಿ ತೋರಿಸುತ್ತೇವೆ:ಸಿಎಂ

Published : Aug 30, 2017, 10:30 PM ISTUpdated : Apr 11, 2018, 12:54 PM IST
ಮೋದಿ ಮಾತಿನಲ್ಲೆ ಕೈಲಾಸ ತೋರಿಸುತ್ತಾರೆ; ನಾವು ಕೆಲಸ ಮಾಡಿ ತೋರಿಸುತ್ತೇವೆ:ಸಿಎಂ

ಸಾರಾಂಶ

‘‘ನಾವು ಚಿಕ್ಕವರಾಗಿದ್ದಾಗ ಜಾತ್ರೆಗಳಲ್ಲಿ ತಮಾಷೆ ಪೆಟ್ಟಿಗೆ ಮೂಲಕ ದೆಹಲಿ ನೋಡು, ಮುಂಬೈ ನೋಡು, ಕಲ್ಕತ್ತಾ ನೋಡು ಎಂದು ಎಂದು ತೋರಿಸಿ ಕಾಸು ಕಿತ್ತುಕೊಳ್ಳುತ್ತಿದ್ದರು.  ನಾವು ನೋಡುವಷ್ಟರಲ್ಲಿ ಅದು ಮುಂದಕ್ಕೆ ಹೊರಟು ಹೋಗಿರುತ್ತಿತ್ತು. ಅದೇ ರೀತಿ ಪ್ರಧಾನಿ ನರೇಂದ್ರ ಮೋದಿ ಮಾತಿನಲ್ಲೆ ಕೈಲಾಸ ತೋರಿಸುತ್ತಾರೆ....ಆದರೆ ನಾವು ಕೆಲಸ ಮಾಡಿ ತೋರಿಸುತ್ತೇವೆ. ನಮ್ಮದು ಕಾಮ್ ಕಿ ಬಾತ್ ಬಾತ್.......’’ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿ ಬಗ್ಗೆ ವ್ಯಂಗ್ಯವಾಡಿದ್ದು ಹೀಗೆ.

ಚಾಮರಾಜನಗರ/ಗುಂಡ್ಲುಪೇಟೆ (ಆ.30): ‘‘ನಾವು ಚಿಕ್ಕವರಾಗಿದ್ದಾಗ ಜಾತ್ರೆಗಳಲ್ಲಿ ತಮಾಷೆ ಪೆಟ್ಟಿಗೆ ಮೂಲಕ ದೆಹಲಿ ನೋಡು, ಮುಂಬೈ ನೋಡು, ಕಲ್ಕತ್ತಾ ನೋಡು ಎಂದು ಎಂದು ತೋರಿಸಿ ಕಾಸು ಕಿತ್ತುಕೊಳ್ಳುತ್ತಿದ್ದರು. 
ನಾವು ನೋಡುವಷ್ಟರಲ್ಲಿ ಅದು ಮುಂದಕ್ಕೆ ಹೊರಟು ಹೋಗಿರುತ್ತಿತ್ತು. ಅದೇ ರೀತಿ ಪ್ರಧಾನಿ ನರೇಂದ್ರ ಮೋದಿ ಮಾತಿನಲ್ಲೆ ಕೈಲಾಸ ತೋರಿಸುತ್ತಾರೆ....ಆದರೆ ನಾವು ಕೆಲಸ ಮಾಡಿ ತೋರಿಸುತ್ತೇವೆ. ನಮ್ಮದು ಕಾಮ್ ಕಿ ಬಾತ್ ಬಾತ್.......’’
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿ ಬಗ್ಗೆ ವ್ಯಂಗ್ಯವಾಡಿದ್ದು ಹೀಗೆ.
 
ಜಿಲ್ಲೆಯ ತೆರಕಣಾಂಬಿಯಲ್ಲಿ  ಏರ್ಪಡಿಸಲಾಗಿದ್ದ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು ರಾಜ್ಯ ಬಿಜೆಪಿ ಮುಖಂಡರ ಮೇಲೂ ವಾಗ್ದಾಳಿ ನಡೆಸಿದರು.  ರಾಜ್ಯ ಬಿಜೆಪಿ ಮುಖಂಡರ ಮೇಲೂ ವಾಗ್ದಾಳಿ ನಡೆಸಿದ ಅವರು, ಬಿಜೆಪಿಯವರಿಗೆ ದೆಹಲಿಯಲ್ಲಿ ಒಂದು ನಾಲಿಗೆ, ಕರ್ನಾಟಕದಲ್ಲಿ ಒಂದು ನಾಲಿಗೆ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಬಳಿಗೆ ನಿಯೋಗ ಹೋಗಿದ್ದಾಗ ತುಟಿ ಬಿಚ್ಚದ ಅನಂತಕುಮಾರ್, ಜಗದೀಶ್ ಶೆಟ್ಟರ್, ಶೋಭ ಕರಂದ್ಲಾಜೆ, ಕರ್ನಾಟಕಕ್ಕೆ ಬಂದಾಗ ಕೌರವನ ಪಾತ್ರ ಮಾಡುತ್ತಿದ್ದಾರೆ ಎಂದರು.  ಅವರು ನಾವು ಪ್ರಣಾಳಿಕೆಯಲ್ಲಿ ನೀಡಿದ್ದ 165 ಭರವಸೆಗಳಲ್ಲಿ 155 ಈಡೇರಿಸಿದ್ದು ಮುಂದಿನ ಏಳು ತಿಂಗಳಲ್ಲಿ ಉಳಿದವನ್ನೂ ನೆರವೇರಿಸುತ್ತೇವೆ. ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಚಾಮರಾಜನಗರ ಜಿಲ್ಲೆಯಲ್ಲಿ ಮಾತ್ರವಲ್ಲ ತುಮಕೂರು, ಹಾಸನ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕೈಗೆತ್ತಿಕೊಳ್ಳುತ್ತಿದೆ ಎಂದರು. ಚಾಮರಾಜನಗರ ತಾಲೂಕಿನ 166 ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ನೀರು ಪೂರೈಸುವ ಸೇವೆಗೆ ಅಕ್ಟೋಬರ್‌ನಲ್ಲಿ ಚಾಲನೆ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ತಿಳಿಸಿದರು.
 
ಸಮೀಕ್ಷೆಗಿಂತಲೂ ಅಧಿಕ ಸ್ಥಾನ: 
ಕಳೆದ ಚುನಾವಣೆಯಲ್ಲಿ 119 ಸ್ಥಾನವನ್ನು ಕಾಂಗ್ರೆಸ್ ಪಕ್ಷ ಗೆಲ್ಲಲಿದೆ ಎಂದು ಸಮೀಕ್ಷೆ ಹೇಳಿತ್ತು ನಾವು 121 ಸ್ಧಾನ ಗೆದ್ದೆವು. 2018  ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 130  ಸ್ದಾನ ಗೆಲ್ಲಲಿದೆ ಎಂದು ಸಮೀಕ್ಷೆಯಿಂದ ಗೊತ್ತಾಗಿದೆ. ಹೀಗಾಗಿ ನಾವು 130 ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವ ಮೂಲಕ ಮತ್ತೇ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶ್ವಾಸ ವ್ಯಕ್ತಪಡಿಸಿದರು. ಮತ್ತೇ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಹೇಳಿರುವುದರಿಂದ ಇದರ ಬಗ್ಗೆ ಬಿಜೆಪಿಯವರು ಟೀಕೆ ಮಾಡುತ್ತಿದ್ದಾರೆ. ಅವರಿಗೆ ಸೋಲು ಖಚಿತ ಎಂಬುದು ಗೊತ್ತಾಗಿದೆ ಎಂದು ವ್ಯಂಗ್ಯವಾಡಿದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Bengaluru: 70 ವರ್ಷದ ಪತಿಯ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ 67 ವರ್ಷದ ನಿವೃತ್ತ ಪ್ರಾಧ್ಯಾಪಕಿ!
ನಾಳೆಯಿಂದಲೇ ಖಾಸಗಿ-ಸರ್ಕಾರಿ ಶೇ.50 ಉದ್ಯೋಗಿಗಳಿಗೆ ರಷ್ಟು ವರ್ಕ್ ಫ್ರಮ್ ಹೋಮ್ ಕಡ್ಡಾಯ