ವಿಡಿಯೋ: ಈ ಮಕ್ಕಳಿಗೆ ಅಲ್ಯೂಮಿನಿಯಂ ಪಾತ್ರೆಯೇ ದೋಣಿ!

By Web DeskFirst Published Sep 28, 2018, 5:31 PM IST
Highlights

ಅಧಿಕಾರಕ್ಕೆ ಬಂದ  ಎಲ್ಲ ಸರಕಾರಗಳು ಮಕ್ಕಳ ಶಿಕ್ಷಣಕ್ಕೆ ನಮ್ಮ ಮೊದಲ ಆಯ್ಕೆ ಎಂದು ಹೇಳುತ್ತಲೆ ಇದ್ದಾವೆ. ಆದೆ ಇಲ್ಲೊಂದು ಗ್ರಾಮದ ಮಕ್ಕಳಿಗೆ ಶಾಲೆಗೆ ಹೋಗುವುದೇ ದೊಡ್ಡ ಸಾಹಸವಾಗಿದೆ.

ಬಿಸ್ವಾನಾಥ್[ಸೆ.28] ಈಗ ನೋಡುತ್ತಿರುವುದು ಅಸ್ಸಾಂ ರಾಜ್ಯದ ಬಿಸ್ವಾನಾಥ್ ಜಿಲ್ಲೆಯ ದೃಶ್ಯ.  ಸರಿಯಾದ ರಸ್ತೆ ಸಂಪರ್ಕವೂ ಇಲ್ಲದ ಈ ಪ್ರದೇಶದಲ್ಲಿ ಮಕ್ಕಳು ದಿನನಿತ್ಯ ಶಾಲೆಗೆ ತೆರಳುವುದೇ ದೊಡ್ಡ ಸಾಹಸವಾಗಿದೆ.

ನದಿಯೊಂದನ್ನು ದಾಟಿ ಶಾಲೆಗೆ ಹೋಗಬೇಕು. ಆದರೆ ಸೇತುವೆ ಭಾಗ್ಯ ಈ ಊರಿಗೆ ಇಲ್ಲ. ಅದರಿರಲಿ ದೋಣಿ, ತೆಪ್ಪ ಯಾವುದಾದರೂ ಇದೆಯೇ? ಅದು ಇಲ್ಲ. ಸದ್ಯ ಇವರಿಗೆ ಅಮ್ಯೂಮಿನಿಯಂ ಪಾತ್ರೆಯೆ ದೋಣಿ೦ತೆಪ್ಪ-ಸೇತುವೆ ಎಲ್ಲ.

ಮಕ್ಕಳು ಅಲ್ಯೂಮಿನಿಯಂ ಪಾತ್ರೆ ಬಳಸಿ ಹೊಳೆ ದಾಟುತ್ತಿರುವ ದೃಶ್ಯ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ. ಇನ್ನು ಮೇಲಾದರೂ ಸಂಬಂಧಿಸಿದ ಸರಕಾರ ಪರಿಹಾರ ಕ್ರಮ ಕೈಗೊಳ್ಳುತ್ತದೆಯೋ ಕಾದು ನೋಡಬೇಕಿದೆ.

 

 

 


 

Students of a primary govt school in Assam's Biswanath district cross the river using aluminium pots to reach their school. pic.twitter.com/qeH5npjaBJ

— ANI (@ANI)
click me!