ಎಣ್ಣೆ ಇಲ್ಲಾಂದ್ರೆ ಎಲೆಕ್ಷನ್ ಗೆಲ್ಲಕ್ಕಾಗಲ್ಲ: ಮದ್ಯ ಸಿಗದ ರಾಜ್ಯದ ಎಂಪಿ!

Published : Sep 28, 2018, 05:31 PM IST
ಎಣ್ಣೆ ಇಲ್ಲಾಂದ್ರೆ ಎಲೆಕ್ಷನ್ ಗೆಲ್ಲಕ್ಕಾಗಲ್ಲ: ಮದ್ಯ ಸಿಗದ ರಾಜ್ಯದ ಎಂಪಿ!

ಸಾರಾಂಶ

ಹೆಂಡ ಹಂಚದೇ ಚುನಾವಣೆ ಗೆಲ್ಲಲಾಗಲ್ಲ! ಬಿಜೆಪಿಗೆ ಮುಜುಗರ ತಂದಿತ್ತ ಸಂಸದನ ಹೇಳಿಕೆ! ಗುಜರಾತ್ ಪಂಚಮಹಲ್ ಕ್ಷೇತ್ರದ ಬಬಿಜೆಪಿ ಸಂಸದ! ಮದ್ಯ ಹಂಚದೇ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ! ಪ್ರತಾಪ್ ಸಿಂಗ್ ಚೌಹಾಣ್ ವಿವಾದಾತ್ಮಕ ಹೇಳಿಕೆ 

ವಡೋದರಾ(ಸೆ.28): ‘ಹೆಂಡ ಹಂಚದೆ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವೇ ಇಲ್ಲ..’ಇದು ಕರ್ನಾಟಕದ ಅಥವಾ ದೇಶದ ಇನ್ಯಾವುದೋ ರಾಜ್ಯದ ಸಂಸದ ಹೇಳಿದ ಮಾತಲ್ಲ. ಬದಲಿಗೆ ಮದ್ಯವೇ ಸಿಗದ ಗುಜರಾತ್ ರಾಜ್ಯದ ಸಂಸದರೊಬ್ಬರು ನೀಡಿದ ಹೇಳಿಕೆ ಇದು.

ಹೌದು, ಮದ್ಯ ಹಂಚದೇ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವೇ ಇಲ್ಲ ಎಂದು ಗುಜರಾತ್ ನ ಪಂಚಮಹಲ್ ಸಂಸದ ಪ್ರಭಾತ್ ಸಿಂಗ್ ಚೌಹಾಣ್ ಹೇಳಿದ್ದಾರೆ. 2009 ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ತಮ್ಮ ಇದೇ ಕಾರಣ ಎಂದು ಚೌಹಾಣ್ ಹೇಳಿದ್ದಾರೆ.

2009 ರಲ್ಲಿ ತಾನು ಕಾಂಗ್ರೆಸ್ ನ ಶಂಕರ್ ಸಿಂಗ್ ವಘೇಲಾ ವಿರುದ್ಧ ಚುನಾವಣೆಯಲ್ಲಿ ಗೆಲ್ಲಲು ಮದ್ಯ ಹಂಚಿದ್ದೇ ಕಾರಣ ಎಂದು ಹೇಳುವ ಮೂಲಕ ಚೌಹಾಣ್ ಬಿಜೆಪಿಗೆ ಮುಜುಗರ ತಂದಿತ್ತಿದ್ದಾರೆ.

ಈ ಬಾರಿಯೂ ಪಂಚಮಹಲ್ ಕ್ಷೇತ್ರದಿಂದ ತಮಗೆ ಟಿಕೆಟ್ ಪಕ್ಕಾ ಆಗಿದ್ದು, ಈ ಬಾರಿಯೂ ತಾವೇ ಚುನಾವಣೆಯಲ್ಲಿ ಗೆಲ್ಲುವುದು ಎಂದು ಚೌಹಾಣ್ ಭರವಸೆ ವ್ಯಕ್ತಪಡಿಸಿದ್ದಾರೆ. ಈ ನಡುವೆ ಮದ್ಯ ನಿಷೇಧ ಇರುವ ಗುಜರಾತ್ ರಾಜ್ಯದಲ್ಲಿ ಬಿಜೆಪಿ ಸಂಸದ ಅದ್ಹೇಗೆ ಮದ್ಯ ಹಂಚಿದ್ದರು ಎಂಬುದೇ ಎಲ್ಲರೂ ಕೇಳುತ್ತಿರುವ ಪ್ರಶ್ನೆಯಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೈಸೂರು ರನ್‌ವೇಯಲ್ಲಿ ಸಿದ್ದು, ಡಿಕೆ ಜತೆ ರಾಗಾ ಪ್ರತ್ಯೇಕ ಚರ್ಚೆ
ಸಂಕ್ರಾಂತಿ ದಿನ ನಮ್ಮ ಮೆಟ್ರೋಗೆ ಮತ್ತೊಂದು ರೈಲು ಸೇರ್ಪಡೆ, ಪ್ರಯಾಣಿಕರಿಗೆ ಗುಡ್ ನ್ಯೂಸ್