ಆ 5 ಕ್ಕೆ ಉಪರಾಷ್ಟ್ರಪತಿ ಚುನಾವಣೆ; ಅಂದು ರಾತ್ರಿಯೇ ಫಲಿತಾಂಶ

By Suvarna Web DeskFirst Published Jun 30, 2017, 6:11 PM IST
Highlights

ಆ.5 ರಂದು ಉಪರಾಷ್ಟ್ರಪತಿ ಹುದ್ದೆಗೆ ಚುನಾವಣೆ ನಡೆಯಲಿದೆ. ಚುನಾವಣಾ ಆಯೋಗ ಉಪರಾಷ್ಟ್ರಪತಿ ಚುನಾವಣಾ ದಿನಾಂಕವನ್ನು ಗುರುವಾರ ಪ್ರಕಟಿಸಿದೆ. ಆಡಳಿತಾರೂಢ ಎನ್’ಡಿಎ ಲೋಕಸಭೆಯಲ್ಲಿ  ಬಹುಮತ ಹೊಂದಿದ್ದು, ರಾಷ್ಟ್ರಪತಿ ಚುನಾವಣಾ ವೇಳೆ ಎಐಎಡಿಎಂಕೆ ಮತ್ತು ಬಿಜೆಡಿ ಮತ್ತಿತರ ಪಕ್ಷಗಳು ಬೆಂಬಲಿಸಿವೆ.  ಹೀಗಾಗಿ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎನ್’ಡಿಎ ಅಭ್ಯರ್ಥಿ ಗೆಲ್ಲುವ ಸಾಧ್ಯತೆ ಇದೆ.

ನವದೆಹಲಿ (ಜೂ.30): ಆ.5 ರಂದು ಉಪರಾಷ್ಟ್ರಪತಿ ಹುದ್ದೆಗೆ ಚುನಾವಣೆ ನಡೆಯಲಿದೆ. ಚುನಾವಣಾ ಆಯೋಗ ಉಪರಾಷ್ಟ್ರಪತಿ ಚುನಾವಣಾ ದಿನಾಂಕವನ್ನು ಗುರುವಾರ ಪ್ರಕಟಿಸಿದೆ. ಆಡಳಿತಾರೂಢ ಎನ್’ಡಿಎ ಲೋಕಸಭೆಯಲ್ಲಿ  ಬಹುಮತ ಹೊಂದಿದ್ದು, ರಾಷ್ಟ್ರಪತಿ ಚುನಾವಣಾ ವೇಳೆ ಎಐಎಡಿಎಂಕೆ ಮತ್ತು ಬಿಜೆಡಿ ಮತ್ತಿತರ ಪಕ್ಷಗಳು ಬೆಂಬಲಿಸಿವೆ.  ಹೀಗಾಗಿ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎನ್’ಡಿಎ ಅಭ್ಯರ್ಥಿ ಗೆಲ್ಲುವ ಸಾಧ್ಯತೆ ಇದೆ.

ಉಪರಾಷ್ಟ್ರಪತಿ ಚುನಾವಣೆಗೆ ಜು.4 ರಂದು ಆಯೋಗ ಅಧಿಸೂಚನೆ ಹೊರಡಿಸಲಿದ್ದು, ನಾಮಪತ್ರ ಸಲ್ಲಿಕೆಗೆ ಜು.18 ಕೊನೆಯ ದಿನಾಂಕವಾಗಿದೆ. ಜು. 19 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಜು.21 ನಾಮಪತ್ರ ಹಿಂತೆಗೆಯಲು ಕೊನೆಯ ದಿನವಾಗಿದೆ. ಒಂದು ವೇಳೆ ರಾಜಕೀಯ ಪಕ್ಷಗಳು ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡದಿದ್ದರೆ ಆ.5 ರಂದು ಚುನಾವಣೆ ನಡೆಯಲಿದ್ದು, ಅಂದು ಸಂಜೆಯೇ ಮತಗಳ ಎಣಿಕೆ ನಡೆಯಲಿದೆ. ಉಪರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸುವವರು 20 ಪ್ರಸ್ತಾಪಕರು ಮತ್ತು 20 ಅನುಮೋದಕರು ಸಂಸತ್ ಸದಸ್ಯರಾಗಿರಬೇಕೆಂಬ ನಿಯಮವಿದೆ.

click me!