ಭಾರತದ ಸೌಂದರ್ಯವನ್ನು ಕೊಂಡಾಡಿದ ಗಿಲ್ಲಿ

By Suvarna Web DeskFirst Published Jun 30, 2017, 5:54 PM IST
Highlights

ನಾನು ಪ್ರತಿಬಾರಿ ಭಾರತಕ್ಕೆ ಭೇಟಿ ನೀಡಿದಾಗಲೂ ನನ್ನ ಸಾಂಸ್ಕೃತಿಕ ಅನುಭವ ಶ್ರೀಮಂತಗೊಳ್ಳುತ್ತಾ ಬರುತ್ತಿದೆ ಎಂದು 45 ವರ್ಷದ ಗಿಲ್'ಕ್ರಿಸ್ಟ್ ಅಭಿಪ್ರಾಯ ಪಟ್ಟಿದ್ದಾರೆ.

ನವದೆಹಲಿ(ಜೂ.30): ಆಸ್ಟ್ರೇಲಿಯಾ ತಂಡ ಕಂಡ ಯಶಸ್ವಿ ವಿಕೆಟ್ ಕೀಪರ್ ಬ್ಯಾಟ್ಸ್'ಮನ್ ಆ್ಯಡಂ ಗಿಲ್'ಕ್ರಿಸ್ಟ್ ತಮ್ಮ ಇತ್ತೀಚಿನ ಭಾರತ ಪ್ರವಾಸವನ್ನು ಮುಕ್ತಕಂಠದಿಂದ ಕೊಂಡಾಡಿದ್ದಾರೆ.

ದೆಹಲಿ ವಿಶ್ವವಿದ್ಯಾಲಯದ ಕಿರೋರಿ ಮಾಲ್ ಕಾಲೇಜಿನಲ್ಲಿ 'ಲೈಫ್ ಆ್ಯಸ್ ಎ ಸ್ಪೋರ್ಟ್ಸ್'ಪರ್ಸನ್' ವಿಚಾರದ ಕುರಿತಂತೆ ಮಾತನಾಡಿದ ಮಾಜಿ ಎಡಗೈ ಬ್ಯಾಟ್ಸ್'ಮನ್, ಭಾರತವೇನು ಎಂದು ನನ್ನ ಕುಟುಂಬ, ಸಹೋದ್ಯೋಗಿಗಳಿಗೆ ಹಾಗೂ ಸ್ನೇಹಿತರಿಗೆ ವರ್ಣಿಸಲು ಕಷ್ಟವಾಗುತ್ತದೆ. ನನಗನಿಸುತ್ತದೆ ಇದೇ ಭಾರತದ ಸೌಂದರ್ಯವೆಂದು. ಇಲ್ಲಿನ ಸಾಂಸ್ಕೃತಿಕ ಮೌಲ್ಯಗಳನ್ನು ವಿವರಿಸುವುದು ನಿಜಕ್ಕೂ ಕಷ್ಟ. ಇಲ್ಲಿನ ಸಂಸ್ಕೃತಿ ಉಳಿದೆಲ್ಲ ಸಂಸ್ಕೃತಿಗಳಿಗಿಂತ ಭಿನ್ನ ಎಂದು ಗಿಲ್'ಕ್ರಿಸ್ಟ್ ಅಭಿಪ್ರಾಯಪಟ್ಟಿದ್ದಾರೆ.

ನಾನು ಪ್ರತಿಬಾರಿ ಭಾರತಕ್ಕೆ ಭೇಟಿ ನೀಡಿದಾಗಲೂ ನನ್ನ ಸಾಂಸ್ಕೃತಿಕ ಅನುಭವ ಶ್ರೀಮಂತಗೊಳ್ಳುತ್ತಾ ಬರುತ್ತಿದೆ ಎಂದು 45 ವರ್ಷದ ಗಿಲ್'ಕ್ರಿಸ್ಟ್ ಅಭಿಪ್ರಾಯ ಪಟ್ಟಿದ್ದಾರೆ.

ನನ್ನ ದೇಶದಲ್ಲೇ ನನ್ನನ್ನು ಸರಿಯಾಗಿ ಗುರುತಿಸುವುದಿಲ್ಲ. ಆದರೆ ಭಾರತೀಯರು ನನ್ನ ಮಾತನ್ನು ಕೇಳಲು ಇಷ್ಟು ಮಂದಿ ಸೇರಿರುವುದನ್ನು ನೋಡಿದರೇ ಸಂತೋಷವೆನಿಸುತ್ತದೆ ಎಂದು ಗಿಲ್'ಕ್ರಿಸ್ಟ್ ಹೇಳಿದ್ದಾರೆ.    

click me!