ತಾಜ್ ಮಹಲ್ ಪ್ರವೇಶ ದ್ವಾರ ಒಡೆದ ವಿಹೆಚ್‌ಪಿ ಕಾರ್ಯಕರ್ತರು..!

Published : Jun 13, 2018, 05:25 PM IST
ತಾಜ್ ಮಹಲ್ ಪ್ರವೇಶ ದ್ವಾರ ಒಡೆದ ವಿಹೆಚ್‌ಪಿ ಕಾರ್ಯಕರ್ತರು..!

ಸಾರಾಂಶ

ತಾಜ್ ಮಹಲ್‌ನ ಪಶ್ಚಿಮ ದ್ವಾರ ಒಡೆದ ವಿಹೆಚ್‌ಪಿ ಕಾರ್ಯಕರ್ತರು ಶಿವ ದೇಗುಲಕ್ಕೆ ಹೋಗಲು ಅಡ್ಡಿ ಎಂಬ ಕಾರಣಕ್ಕೆ ದ್ವಾರ ಧ್ವಂಸ ಪ್ರವೇಶ ದ್ವಾರ ಒಡೆಯುತ್ತಿರುವ ವಿಡಿಯೋ ಕ್ಯಾಮರಾದಲ್ಲಿ ಸೆರೆ ವಿಹೆಚ್‌ಪಿ ಕಾರ್ಯಕರ್ತರ ವಿರುದ್ದ ಪ್ರಕರಣ ದಾಖಲು   

ಆಗ್ರಾ(ಜೂ.13): ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರ ಗುಂಪೊಂದು ಕಳೆದ ಭಾನುವಾರ ತಾಜ್ ಮಹಲ್‌ನ ಪಶ್ಚಿಮ ದ್ವಾರವನ್ನು ಧ್ವಂಸಗೊಳಿಸಿದೆ. ತಾಜ್ ಮಹಲ್‌ನ ಪಶ್ಚಿಮ ದ್ವಾರವನ್ನು ಕಿತ್ತೆಸೆದ ಕಾರ್ಯಕರ್ತರ ವಿರುದ್ಧ ಭಾರತೀಯ ಪುರಾತತ್ವ ಇಲಾಖೆ (ಎಎಸ್ಐ) ಆಗ್ರಾ ಪೋಲೀಸರಿಗೆ ದೂರು ನೀಡಿದೆ.

ತಾಜ್ ಮಹಲ್‌ನ ನಿರ್ಬಂಧಿತ ಪ್ರದೇಶದಲ್ಲಿ 400 ವರ್ಷಗಳಷ್ಟು ಹಳೆಯದಾದ ಶಿವ ದೇಗುಲಕ್ಕೆ ಹೋಗುವ ಮಾರ್ಗವಿದೆ. ಈ ಮಾರ್ಗಕ್ಕೆ ಭವ್ಯ ಸೌಧದ ಆವರಣ ಅಡ್ಡಿಯಾಗಿದೆ ಎಂದು ಆರೋಪಿಸಿ ಪ್ರತಿಭಟನಾಕಾರರು ತಾಜ್ ಆವರಣದಲ್ಲಿ ದಾಂಧಲೆ ನಡೆಸಿದ್ದಾರೆ. ತಾಜ್ ಮಹಲ್ ಪಶ್ಚಿಮ ಪ್ರವೇಶ ದ್ವಾರವನ್ನು ಧ್ವಂಸಗೊಳಿಸಲು ಪ್ರಯತ್ನಿಸುತ್ತಿರುವ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಸುತ್ತಿಗೆ ಮತ್ತು  ಕಬ್ಬಿಣದ ರಾಡ್‌ಗಳನ್ನು ಬಳಸಿ ಬಾಗಿಲಿಗೆ ಹೊಡೆಯುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. 

ಇದೇ ವೇಳೆ ತಾಜ್ ಪಶ್ಚಿಮ ದ್ವಾರದ ನಂತರ ಸಿಗುವ ಬಸಾಯಿ ಘಾಟ್‌ನಲ್ಲಿರುವ ಸಿದ್ದೇಶ್ವರ ದೇವಸ್ಥಾನಕ್ಕೆ ಹೋಗಲು ಇನ್ನೊಂದು ಮಾರ್ಗವಿರುವುದಾಗಿ ಪೋಲೀಸರು ಸ್ಪಷ್ಟಪಡಿಸಿದರೂ ಸಹ  ವಿಎಚ್‍ಪಿ ಸದಸ್ಯರು ದ್ವಾರವನ್ನು ಒಡೆದು ಹಾಕಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಹೆಚ್‌ಪಿ ಕಾರ್ಯಕರ್ತರ ವಿರುದ್ದ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಹಾರಾಷ್ಟ್ರದಲ್ಲಿ ಬಿಜೆಪಿ ಗೆದ್ದರೂ ಸೂರ್ಯವಂಶಿ ಕುಟುಂಬಕ್ಕೆ ಅಘಾತ, ಆರಕ್ಕೆ 6 ಸದಸ್ಯರಿಗೆ ಸೋಲು
ಬಿಡದಿ ಟೌನ್ ಶಿಪ್ ಜಿದ್ದಿನಿಂದ ಅನುಷ್ಠಾನ ಮಾಡುತ್ತಿಲ್ಲ: ಶಾಸಕ ಎಚ್.ಸಿ.ಬಾಲಕೃಷ್ಣ