ಹೆಚ್ಡಿಕೆ ವಿರುದ್ಧ ಪೋಸ್ಟ್ : ಮೌನ ಮುರಿದ ದರ್ಶನ್

Published : Jun 13, 2018, 05:05 PM IST
ಹೆಚ್ಡಿಕೆ ವಿರುದ್ಧ ಪೋಸ್ಟ್ : ಮೌನ ಮುರಿದ ದರ್ಶನ್

ಸಾರಾಂಶ

HDK ವಿರುದ್ಧ ಅವಹೇಳನಕಾರಿ ಪೋಸ್ಟ್'ಗೆ ದರ್ಶನ್ ಸ್ಪಷ್ಟನೆ ನಟನ ಹೆಸರಿನಲ್ಲಿ ಫೇಸ್'ಬುಕ್'ನಲ್ಲಿ ಸಿಎಂ ವಿರುದ್ಧ ಬರಹ ಸೈಬರ್ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ  

ಬೆಂಗಳೂರು[ಜೂ.13]: ನಟ ದರ್ಶನ್ ಹೆಸರಿನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಫೇಸ್'ಬುಕ್'ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿರುವುದಕ್ಕೆ ಸ್ವತಃ ದರ್ಶನ್ ಸ್ಪಷ್ಟೀಕರಣ ನೀಡಿದ್ದಾರೆ. 

ತಮ್ಮ ಪೇಸ್'ಬುಕ್ ಪುಟದಲ್ಲಿ ಬರೆದುಕೊಂಡಿರುವ ಅವರು ' ಇತ್ತೀಚಿಗೆ ತಿಳಿದು ಬಂದಿರುವಂತೆ ನನ್ನ ಹೆಸರಲ್ಲಿ ಕೆಲವು ಕಿಡಿಗೇಡಿಗಳ ಅನೇಕ ನಕಲಿ ಫೇಸ್ ಬುಕ್ ಖಾತೆಗಳಿವೆ. ಈ ಖಾತೆಗಳಿಂದ ಕೆಲವು ವ್ಯಕ್ತಿಗಳ ಮೇಲೆ ಅವಹೇಳನಕಾರಿ ಹೇಳಿಕೆಗಳು ನೀಡಿರುವುದು ನಮ್ಮ ಗಮನಕ್ಕೆ ಬಂದಿದೆ.

ಸೈಬರ್ ಕ್ರೈಂ ಡಿಪಾರ್ಟ್ಮೆಂಟ್ ಈ ರೀತಿ ಸೋಶಿಯಲ್ ಮೀಡಿಯಾ ದುರ್ಬಳಕೆ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈ ಕೊಳ್ಳುವುದಾಗಿ ಹೇಳಿದ್ದಾರೆ. ದಯಮಾಡಿ ಯಾರೂ ಇಂತಹ ಕೆಲಸಗಳಲ್ಲಿ ತೊಡಗಬೇಡಿ ಎಂದು ಕಳಕಳಿಯ ವಿನಂತಿ ಸಿದ್ದಾರೆ.

ಕಪ್ಪು ಎಂದು ಅಣಕ
ಈ ಸಲ ಕಪ್ ನಮ್ದೇ ಅಂತ ಅಂತಿದ್ದವ್ರು  ಹೇಳುತ್ತಿದ್ದವ್ರು ಆ ಕಪ್ಪು ಇದೇ ಅಂತ ಹೇಳೋಕೇನಾಗಿತ್ತೋ  ಎಂದು ಸಿಎಂ ಕುಮಾರಸ್ವಾಮಿ ಅವರ ಕಪ್ಪು ಬಣ್ಣದ ಚಿತ್ರ ಪೋಸ್ಟ್ ಹಾಕಿ ಅಣಕಿಸಿದ್ದರು.

ಈ ಪೋಸ್ಟ್ ವಿರುದ್ಧ ಅಖಿಲ ಕರ್ನಾಟಕ ಹೆಚ್ಡಿಕೆ ಅಭಿಮಾನಿಗಳ ಸೇವಾ ಸಂಘ ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್  ಅವರಿಗೆ ದೂರು ನೀಡಿತ್ತು. ಪ್ರಕರಣ ದಾಖಲಿಸಿರುವ ಪೊಲೀಸರು ಸೈಬರ್ ಪೊಲೀಸರ ನೆರವಿನಿಂದ ತನಿಖೆ ಆರಂಭಿಸಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌
ನಮ್ಮ ಹಣ ನಮಗೆ ಬೇಕಾದವರಿಗೆ ನೀಡುತ್ತೇವೆ: ನ್ಯಾಷನಲ್ ಹೆರಾಲ್ಡ್ ಕೇಸಲ್ಲಿ ಸಮನ್ಸ್‌ಗೆ ಡಿಕೆಶಿ ಆಕ್ರೋಶ