ಸಸ್ಯಾಹಾರದ ಬದಲು ಮಾಂಸಾಹಾರ ನೀಡಿಕೆ : ಏರ್'ಲೈನ್ಸ್ ಕಂಪನಿಗೆ ದಂಡ

Published : Sep 11, 2018, 03:31 PM ISTUpdated : Sep 19, 2018, 09:22 AM IST
ಸಸ್ಯಾಹಾರದ ಬದಲು ಮಾಂಸಾಹಾರ ನೀಡಿಕೆ : ಏರ್'ಲೈನ್ಸ್ ಕಂಪನಿಗೆ ದಂಡ

ಸಾರಾಂಶ

ಆಗಸ್ಟ್ 20, 2016 ರಂದು ಚೆನ್ನೈನಿಂದ ಮುಂಬೈಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಊಟದ ಸಮಯದಲ್ಲಿ ಭಾನುಪ್ರಸಾದ್ ಅವರು ಏಷ್ಯನ್ ಸಸ್ಯಾಹಾರವನ್ನು ಆರ್ಡ್'ರ್ ಮಾಡಿದ್ದರು. ಆದರೆ ಅವರಿಗೆ ಮಾಂಸಾಹಾರವನ್ನು ನೀಡಲಾಗಿತ್ತು.  ಒಂದೆರಡು ಚಮಚ ಸೇವಿಸಿದ ನಂತರ  ಅಸ್ವಸ್ಥಗೊಂಡು ವಾಂತಿ ಮಾಡಿಕೊಂಡಿದ್ದರು. 

ಅಹಮದಾಬಾದ್ [ಸೆ.11]: ಶಾಕಾಹಾರಿ ವ್ಯಕ್ತಿಯೊಬ್ಬರಿಗೆ ಸಸ್ಯಾಹಾರದ ಬದಲು ಮಾಂಸಾಹಾರ ಊಟ ನೀಡಿದ್ದಕ್ಕಾಗಿ ಜೆಟ್ ಏರ್ ಲೈನ್ ಸಂಸ್ಥೆಗೆ ರಾಜ್ ಕೋಟ್ ಜಿಲ್ಲಾ ಗ್ರಾಹಕರ ನ್ಯಾಯಾಲಯ 65 ಸಾವಿರ ರೂ. ದಂಡ ವಿಧಿಸಿದೆ.

ಭಾನುಪ್ರಸಾದ್ ಜಾನಿ ಎಂಬುವವರು  ಜೆಟ್ ಏರ್'ವೇಸ್ ವಿಮಾನದಲ್ಲಿ ಆಗಸ್ಟ್ 20, 2016 ರಂದು ಚೆನ್ನೈನಿಂದ ಮುಂಬೈಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಊಟದ ಸಮಯದಲ್ಲಿ ಭಾನುಪ್ರಸಾದ್ ಅವರು ಏಷ್ಯನ್ ಸಸ್ಯಾಹಾರವನ್ನು ಆರ್ಡ್'ರ್ ಮಾಡಿದ್ದರು. ಆದರೆ ಅವರಿಗೆ ಮಾಂಸಾಹಾರವನ್ನು ನೀಡಲಾಗಿತ್ತು. ಊಟ ಸೇವಿಸಿದ ನಂತರ  ಅಸ್ವಸ್ಥಗೊಂಡು ವಾಂತಿ ಮಾಡಿಕೊಂಡಿದ್ದರು. 

ಬ್ರಾಹ್ಮಣ ಸಮುದಾಯದ ತಾನು ಶುದ್ಧ ಶಾಕಾಹಾರಿಯಾಗಿದ್ದು ಇಲ್ಲಿಯವರೆಗೂ ಮಾಂಸಾಹಾರ ಸೇವಿಸಿಲ್ಲ. ಇದರಿಂದ ನಿತ್ಯ ತನ್ನ ಪತ್ನಿಯ ಜೊತೆ ಜಗಳವಾಗುತ್ತಿದೆ. ಆದ ಕಾರಣ  ತನಗೆ  7. 25 ಲಕ್ಷ ರೂ. ಪರಿಹಾರ ನೀಡಬೇಕೆಂದು ಗ್ರಾಹಕರ ಕೋರ್ಟಿನಲ್ಲಿ ದಾವೆ ಹೂಡಿದ್ದರು. ಮನವಿ ಪರಿಗಣಿಸಿದ ಕೋರ್ಟ್  65 ಸಾವಿರ ಪರಿಹಾರವನ್ನು ಭಾನುಪ್ರಸಾದ್ ಅವರಿಗೆ ನೀಡಬೇಕೆಂದು ಆದೇಶಿಸಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು