ಮೈನವಿರೇಳಿಸುವ ಮಂಗಳ ಗ್ರಹದ ಹೊಸ ಫೋಟೋಗಳು! ಅಂಗಾರಕನ ಅಂಗಳ ಕೇವಲ ಕೆಂಪಲ್ಲ, ಸಪ್ತ ಬಣ್ಣಗಳೂ ಇವೆ! ಮಣ್ಣಿನಲ್ಲಿ ವಿವಿಧ ಬಣ್ಣಗಳ ಮಿಶ್ರಣದ ಮಾಹಿತಿ ಲಭ್ಯ! ಮಂಗಳ ಗ್ರಹದಲ್ಲಿ ನೀರಿನ ಮೂಲ ಇತ್ತೆಂಬುದಕ್ಕೆ ಸಿಕ್ಕಿದೆ ಸಾಕ್ಷಿ
ವಾಷಿಂಗ್ಟನ್(ಸೆ.11): ಅಂಗಾರಕನ ಅಂಗಳ ಕೆದಕುತ್ತಿರುವ ನಾಸಾದ ಮಾರ್ಸ್ ರೆಕಾನಿಸನ್ಸ್ ಆರ್ಬಿಟರ್ ಮಂಗಳ ಗ್ರಹದ 2540 ಕ್ಕೂ ಹೆಚ್ಚು ಹೊಸ ಫೋಟೋಗಳನ್ನು ಕಳುಹಿಸಿದೆ.
undefined
ಈ ಹೊಸ ಚಿತ್ರಗಳಿಂದ ಮಂಗಳ ಗ್ರಹದ ಕುರಿತು ಮಾನವನ ಜ್ಞಾನ ವೃದ್ಧಿಯಾಗಿದೆಯಷ್ಟೇ ಅಲ್ಲದೇ, ಮಂಗಳ ಗ್ರಹದ ಬಣ್ಣ ಕೆಂಪು ಎಂಬುದರ ಕುರಿತು ಹಲವು ಪ್ರಶ್ನೆಗಳನ್ನು ಎತ್ತಿದೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಈ ಫೋಟೋಗಳನ್ನು ಎಡಿಟ್ ಮಾಡಲಾಗಿದ್ದು, ನೈಜ ಫೋಟೋಗಳ ತದ್ರೂಪ ಇವು ಎಂದು ನಾಸಾ ತಿಳಿಸಿದೆ.
ಕಾರಣ ನಾಸಾದ ಮಾರ್ಸ್ ರೆಕಾನಿಸನ್ಸ್ ಆರ್ಬಿಟರ್ ಕ್ಯಾಮರಾ ಮಣ್ಣುಗಳ ಸೂಕ್ಷ್ಮ ಅಧ್ಯಯನ ನಡೆಸಿದಾಗ, ಕೆಂಪು ಮಾತ್ರವಲ್ಲದೇ ಅದರಲ್ಲಿ ಇತರ ಬಣ್ಣಗಳ ಮಿಶ್ರಣ ಕೂಡ ಕಂಡುಬಂದಿದೆ.
ಬಹುಮುಖ್ಯವಾಗಿ ಮಂಗಳ ಗ್ರಹದಲ್ಲಿರುವ ಬೃಹತ್ ಕುಳಿಗಳು ಮತ್ತು ಅದರಲ್ಲಿ ಹಿಂದೊಮ್ಮೆ ನೀರು ಇದ್ದ ಕುರಿತೂ ಈ ಫೋಟೋಗಳ ಮೂಲಕ ಮಾಹಿತಿ ಲಭಿಸಿದೆ ಎನ್ನಲಾಗಿದೆ.
ಮಂಗಳ ಗ್ರಹದ ಮಣ್ಣು, ಕಲ್ಲು ಮತ್ತು ಈ ಕುಳಿಗಳ ಪ್ರದೇಶದಲ್ಲಿ ನೀರಿನ ಅಂಶ ಪತ್ತೆಯಾಗಿರುವುದು ಈ ಗ್ರಹ ಹಿಂದೊಮ್ಮೆ ನೀರಿನ ಮೂಲ ಹೊಂದಿತ್ತು ಎಂಬುದನ್ನು ಮತ್ತೆ ಮತ್ತೆ ಸಾಬೀತುಪಡಿಸುತ್ತದೆ ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ.