ವಾಟಾಳ್ ‘ಕರ್ನಾಟಕದ ಉಕ್ಕಿನ ಮನುಷ್ಯ'

By Suvarna Web DeskFirst Published Apr 16, 2017, 9:46 AM IST
Highlights

ಚಿತ್ರರಂಗಇಂದುಮಟ್ಟಕ್ಕೆಬೆಳೆಯಲುವಾಟಾಳ್ಅವರಕೊಡುಗೆಅಪಾರವಾದುದು. ವಾಟಾಳ್ಬಯಸಿದ್ದರೆಮುಖ್ಯಮಂತ್ರಿಆಗಬಹುದಿತ್ತು. ಆದರೆ, ಯಾವರಾಜಕೀಯಪಕ್ಷಗಳಆಮಿಷಕ್ಕೆಒಳಗಾಗದೆ, ಪಕ್ಷಾಂತರಗೊಳ್ಳದೆಕನ್ನಡಪರಚಳವಳಿಗೆತಮ್ಮನ್ನುಅರ್ಪಿಸಿಕೊಂಡರು.

ಬೆಂಗಳೂರು(ಏ.16):ಮುಂಬರುವ ಚುನಾವಣೆಯಲ್ಲಿ ಚಾಮರಾಜನಗರ ವಿಧಾನಸಭಾ ಕ್ಷೇತ್ರದಿಂದಲೇ ಕನ್ನಡ ಚಳವಳಿ ಹೋ ರಾಟಗಾರ ವಾಟಾಳ್‌ ನಾಗರಾಜ್‌ ಅವರನ್ನು ಗೆಲ್ಲಿ ಸಲು ಕನ್ನಡಪರ ಕಾರ್ಯಕರ್ತರು ಪ್ರಯತ್ನ ಮಾಡ ಬೇಕು ಎಂದು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ಹೇಳಿದರು.
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಜಾಗೃತಿ ವೇದಿಕೆ ಆಯೋಜಿಸಿದ್ದ ‘ಕರ್ನಾಟಕದ ಉಕ್ಕಿನ ಮನುಷ್ಯ' ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತ​ನಾಡಿದ ಅವರು, ವಾಟಾಳ್‌ ನಾಗರಾಜ್‌ ಅವರಿ ಲ್ಲದೆ ವಿಧಾನಸಭೆ ಇಂದು ತಬ್ಬಲಿ​ಯಾಗಿದೆ. ಕನ್ನಡ ನಾಡು, ನುಡಿ, ಜಲ ವಿಷಯದಲ್ಲಿ ಯಾರೊಬ್ಬರೂ ಚಕಾರವೆ​ತ್ತುತ್ತಿಲ್ಲ. ಕನ್ನಡ ಹಾಗೂ ಕನ್ನಡಿಗರ ಸಮಸ್ಯೆಗಳು ಇತ್ಯರ್ಥವಾಗುತ್ತಿಲ್ಲ. ಹಾಗಾಗಿ ಅವರನ್ನು ವಿಧಾನಸ​ಭೆಗೆ ಆಯ್ಕೆ ಮಾಡಿ ಕಳುಹಿಸುವಲ್ಲಿ ಕನ್ನಡಪರ ಹೋ​ರಾಟಗಾರರು, ಕಾರ್ಯಕರ್ತರು ಸಕ್ರಿ​ಯ​ವಾಗಿ ತೊಡಗಿಸಿಕೊಳ್ಳಬೇಕು ಎಂದರು.
ಚಿತ್ರರಂಗ ಇಂದು ಈ ಮಟ್ಟಕ್ಕೆ ಬೆಳೆಯಲು ವಾಟಾಳ್‌ ಅವರ ಕೊಡುಗೆ ಅಪಾರವಾದುದು. ವಾಟಾ​ಳ್‌ ಬಯಸಿ​ದ್ದರೆ ಮುಖ್ಯಮಂತ್ರಿ ಆಗಬಹು​ದಿತ್ತು. ಆದರೆ, ಯಾವ ರಾಜಕೀಯ ಪಕ್ಷಗಳ ಆಮಿಷಕ್ಕೆ ಒಳಗಾಗದೆ, ಪಕ್ಷಾಂತರಗೊಳ್ಳದೆ ಕನ್ನಡಪರ ಚಳವಳಿಗೆ ತಮ್ಮನ್ನು ಅರ್ಪಿ​ಸಿಕೊಂಡರು. ಚಾಮರಾಜನಗರದ ಜನತೆ ಹಣ, ಹೆಂಡಕ್ಕೆ ಪ್ರಾಮುಖ್ಯತೆ ನೀಡದೆ ಕನ್ನಡಪರ ಹೋರಾಟಗಾರನನ್ನು ಗೆಲ್ಲಿಸ​ಬೇಕು.

 

ಕನ್ನಡ ನೆಲ-ಜಲ ವಿಚಾರದಲ್ಲಿ ವಾಟಾಳ್‌ ಅವರು ಕೈಗೊಂಡ ನಿರ್ಣಯಕ್ಕೆ ಎಲ್ಲಾ ಕನ್ನಡಿಗರು ಬದ್ಧರಾಗಬೇಕು ಎಂ ದರು. ಕೇಂದ್ರದ ಮಾಜಿ ಸಚಿವ ಎಂ.ವಿ. ರಾಜಶೇಖರನ್‌ ಅವರು ವಾಟಾಳ್‌ ನಾಗ ರಾಜ್‌ ಅವರಿಗೆ ಕರ್ನಾಟಕದ ಉಕ್ಕಿನ ಮನುಷ್ಯ ಪ್ರಶಸ್ತಿ ಪ್ರದಾನ ಮಾಡಿದರು. ರಾಜ್ಯ ಕನ್ನಡ ಜಾಗೃತಿ ವೇದಿಕೆಯ ಅಧ್ಯಕ್ಷ ಕೆ. ಮಂಜುನಾಥ್‌ ದೇವ, ಕನ್ನಡ ಸೇನೆ ಅಧ್ಯಕ್ಷ ಕೆ.ಆರ್‌. ಕುಮಾರ್‌, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಶಿವರಾ ಮೇಗೌಡ, ಕನ್ನಡ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಗಿರೀಶ್‌ಗೌಡ, ಪಾರ್ಥ ಸಾರಥಿ, ಚಿತ್ರ ಸಾಹಿತಿ ಸಿ.ಬಿ. ಶಿವಶಂಕರ್‌, ಕನ್ನಡಪರ ಹೋರಾಟಗಾರ ವೆಂಕಟೇಶ್‌, ಕರ್ನಾಟಕ ವಿಚಾರ ವೇದಿಕೆ ಅಧ್ಯಕ್ಷ ಪಾಲನೇತ್ರ, ಆನೇಕಲ್‌ ವಿಧಾತ ವಿದ್ಯಾಸಂಸ್ಥೆ ಸಂಸ್ಥಾಪಕ ತಾನಂ ಕುಮಾರಸ್ವಾಮಿ ಇನ್ನಿತರರು ಉಪಸ್ಥಿತರಿದ್ದರು.

 

ರಾಜ್ಯದ ಮೂಲೆ ಮೂಲೆಗೆ ಹೋದರೂ ಜನರು ಪ್ರೀತಿ, ಅಭಿಮಾನದಿಂದ ಬರಮಾಡಿಕೊಳ್ಳುತ್ತಾರೆ. ಅದಕ್ಕಿಂತ ದೊಡ್ಡ ಪ್ರಶಸ್ತಿ ಬೇರೊಂದಿಲ್ಲ. ಮುಂಬರುವ 2018ರ ಚುನಾವಣೆಗೆ ಕನ್ನಡಪರ ಅಭ್ಯರ್ಥಿ ಗೆಲ್ಲಿಸಲು ರೈತರು, ಕನ್ನಡ ಸಂಘಟನೆಗಳು, ಪ್ರಗತಿಪರರೆಲ್ಲ ಒಗ್ಗಟ್ಟಾಗಬೇಕು. ಎಲ್ಲೆಲ್ಲೂ ಕನ್ನಡ ಮೊಳಗಬೇಕು. ವಿಧಾನಸೌಧದ ಮೇಲೆ ಕನ್ನಡ ಧ್ವಜ ಹಾರಾಡಬೇಕು. ಮಹಾತ್ಮ ಗಾಂಧಿಯವರು ಕೈಗೊಂಡ ಉಪ್ಪಿನ ಸತ್ಯಾಗ್ರಹದಂತೆ ಮನೆ ಮನೆಗೂ ಉಪ್ಪನ್ನು ಹಂಚುವ ಮೂಲಕ ಪ್ರಚಾರ ಮಾಡುತ್ತೇನೆ. ಚುನಾವಣೆಯಲ್ಲಿ ಕನಿಷ್ಠ ಸ್ಥಾನಗಳನ್ನು ಗೆಲ್ಲದಿದ್ದಲ್ಲಿ ಹೋರಾಟದಿಂದ ಹಿಂದೆ ಸರಿಯುತ್ತೇನೆ.
-ವಾಟಾಳ್‌ ನಾಗರಾಜ್‌, ಕನ್ನಡ ಚಳವಳಿ ಹೋರಾಟಗಾರ

 

click me!