ಇತಿಹಾಸದ ಪುಟ ಸೇರಲಿದೆಯಾ ನ್ಯಾನೋ ಕಾರು..?

Published : Apr 16, 2017, 08:05 AM ISTUpdated : Apr 11, 2018, 01:11 PM IST
ಇತಿಹಾಸದ ಪುಟ ಸೇರಲಿದೆಯಾ ನ್ಯಾನೋ ಕಾರು..?

ಸಾರಾಂಶ

ಟಾಟಾ ನ್ಯಾನೋ ಯೋಜನೆಯಿಂದ ಕಂಪನಿಗೆ 6,400 ಕೋಟಿ ರುಪಾಯಿ ನಷ್ಟವಾಗಿದೆ ಎಂದು ಟಾಟಾ ಕಂಪನಿ ಪದಚ್ಯುತ ಮುಖ್ಯಸ್ಥ ಸೈರಸ್‌ ಮಿಸ್ತ್ರಿ ಹೇಳಿದ್ದರು.

ನವದೆಹಲಿ(ಏ.16): ವಿಶ್ವದ ಅತಿ ಅಗ್ಗದ ಕಾರು ಎಂಬ ಪ್ರಚಾರದೊಂದಿಗೆ ರಸ್ತೆಗಿಳಿದಿದ್ದ ಟಾಟಾ ನ್ಯಾನೋ ಕಾರಿನ ಅಂತಿಮ ಪಯಣ ಆರಂಭ​ವಾಗಿದೆಯೇ? ಹೌದು. ಅಂಕಿ-ಅಂಶಗಳನ್ನು ಗಮನಿಸಿದಾಗ ಇದು ನಿಜವಾಗಲಿದೆ ಎಂದೆನಿಸುತ್ತಿದೆ.

ಮಾರ್ಚ್ 2009ರಲ್ಲಿ ಮಾರುಕಟ್ಟೆ ಪ್ರವೇಶಿಸಿದ ನ್ಯಾನೋ ಕಾರಿನ ಮಾರಾಟ ಈಗ ಪಾತಾಳಕ್ಕೆ ಕುಸಿದಿದೆ. ಮಾರ್ಚ್ 2017ರಲ್ಲಿ ಇಡೀ ದೇಶದಲ್ಲಿ ಕೇವಲ 174 ಕಾರುಗಳು ಮಾರಾಟವಾಗಿವೆ. ಇದೇ ರೀತಿ 2016ರ ಏಪ್ರಿಲ್‌ನಿಂದ 2017ರ ಮಾರ್ಚ್ ವರೆಗೆ ಕೇವಲ 7591 ನ್ಯಾನೋ ಕಾರುಗಳು ಮಾರಾಟವಾಗಿವೆ.

2015-16ರಲ್ಲಿ 21,012 ಕಾರು ಮಾರಾಟವಾ​ಗಿದ್ದವು. ಹೀಗಾಗಿ ಈಗ ಮಾರಾಟದ ಕುಸಿತದ ಪ್ರಮಾಣ ಶೇ.63ರಷ್ಟಿದೆ. 1 ಲಕ್ಷ ರುಪಾಯಿ ಕಾರು ಎಂದೇ ಖ್ಯಾತಿ ಪಡೆದಿರುವ ನ್ಯಾನೋ ಉದ್ಘಾಟನೆಗೊಂಡಾಗ 2 ಲಕ್ಷ ಬುಕ್ಕಿಂಗ್‌'ಗಳಾಗಿದ್ದವು. ಅಂತಾರಾಷ್ಟ್ರೀಯ ಮಟ್ಟ​ದಲ್ಲೂ ಸುದ್ದಿ ಮಾಡಿತ್ತು. ಆದರೆ ಕಾರಿನ ತಾಂತ್ರಿಕತೆಯಲ್ಲಿ ದೋಷಗಳು, ಕೆಲವೊಮ್ಮೆ ಕಾರಿನಲ್ಲಿ ಏಕಾಏಕಿ ಆದ ಬೆಂಕಿ ದುರಂತಗಳ ಕಾರಣ, ನ್ಯಾನೋ ಬಗ್ಗೆ ಜನರಲ್ಲಿ ಅಪನಂಬಿಕೆ ಮೂಡತೊಡಗಿ ಜನಪ್ರಿಯತೆ ಇಳಿಯಿತು. ಹೀಗಾಗಿ ನ್ಯಾನೋ ಉತ್ಪಾದನೆಗೆಂದೇ ನಿರ್ಮಿಸಲಾಗಿದ್ದ ಗುಜರಾತ್‌'ನ ಸಾನಂದ್‌ ನ್ಯಾನೋ ಕಾರು ನಿರ್ಮಾಣ ಘಟಕ ಈಗ ಟಾಟಾದ ಟಿಯಾಗೋ ಹ್ಯಾಚ್‌'ಬ್ಯಾಕ್‌ ಮತ್ತು ಟೈಗರ್‌ ಸೆಡಾನ್‌ ಕಾರುಗಳ ಉತ್ಪಾದನೆಯಲ್ಲಿ ಬ್ಯುಸಿಯಾಗಿದೆ.

ಮಾಸಿಕ 20 ಸಾವಿರ ನ್ಯಾನೋ ಕಾರು ಉತ್ಪಾದನೆ ಸಾಮರ್ಥ್ಯ ಹೊಂದಿದ್ದ ಸಾನಂದ್‌ ಘಟಕದಲ್ಲಿ ನ್ಯಾನೋ ಉತ್ಪಾದನೆ ಈಗ ಶೇ.20ಕ್ಕಿಳಿದಿದೆ. ಟಾಟಾ ನ್ಯಾನೋ ಯೋಜನೆಯಿಂದ ಕಂಪನಿಗೆ 6,400 ಕೋಟಿ ರು. ನಷ್ಟವಾಗಿದೆ ಎಂದು ಟಾಟಾ ಕಂಪನಿ ಪದಚ್ಯುತ ಮುಖ್ಯಸ್ಥ ಸೈರಸ್‌ ಮಿಸ್ತ್ರಿ ಹೇಳಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

4 ಲಕ್ಷ ಬೆಲೆ ಬಾಳುವ ಸೆ*ಕ್ಸ್​ ಡಾಲ್ಸ್​ ಮಾರಾಟ: ಕರ್ನಾಟಕ ನಂ.1: ಅಂಥದ್ದೇನಿದೆ? ಮಾಲೀಕರೇ ಹೇಳಿದ್ದಾರೆ ನೋಡಿ!
ಸಿಎಂ ಗದ್ದುಗೆಗಾಗಿ ಡಿಕೆಶಿ ರಹಸ್ಯ ಪೂಜೆ, ಆಂದ್ಲೆ ಜಗದೀಶ್ವರಿ ಸನ್ನಿಧಿಯಲ್ಲಿ 'ಹಿಂಗಾರ ಪ್ರಸಾದ'ಕ್ಕೆ ಮೊರೆ! ಗೋಕರ್ಣ ಆತ್ಮಲಿಂಗಕ್ಕೆ ಪಂಚಾಮೃತ ಅಭಿಷೇಕ