ಬಲಭಾಗದಲ್ಲಿ ಹೃದಯ, ಎಡಭಾಗದಲ್ಲಿ ಯಕೃತ್‌; ಇದೆಂಥಾ ವಿಚಿತ್ರ?

By Web DeskFirst Published Oct 4, 2019, 10:25 AM IST
Highlights

ಉತ್ತರಪ್ರದೇಶದಲ್ಲೊಬ್ಬ ವಿಶಿಷ್ಟವ್ಯಕ್ತಿ | ಅಂಗಾಂಗಳು ವಿರುದ್ಧ ಬದಿಯಲ್ಲಿ ಪತ್ತೆ | ಬಲಭಾಗದಲ್ಲಿ ಹೃದಯ, ಎಡಭಾಗದಲ್ಲಿ ಯಕೃತ್‌!

ಕುಷಿನಗರ್‌ (ಅ. 040: ಉತ್ತರ ಪ್ರದೇಶದ ಈ ವ್ಯಕ್ತಿ ಹೊರಗಿನಿಂದ ನೋಡಲು ಸಾಮಾನ್ಯನಂತೆ ಕಂಡರೂ, ಆತನ ದೇಹದ ಒಳಗಿರುವ ಅಂಗಾಂಗಳೆಲ್ಲಾ ವಿರುದ್ಧ ಬದಿಯಲ್ಲಿವೆ. ಸಾಮಾನ್ಯವಾಗಿ ದೇಹದ ಎಡಭಾಗದಲ್ಲಿ ಇರಬೇಕಾದ ಹೃದಯ ಬಲ ಭಾಗದಲ್ಲಿದೆ. ಬಲ ಭಾಗದಲ್ಲಿ ಇರಬೇಕಾದ ಪಿತ್ತಜನಕಾಂಗ ಮತ್ತು ಪಿತ್ತಕೋಶ ಎಡ ಭಾಗದಲ್ಲಿದೆ.

ಐಆರ್ ಅಇಟಿಸಿ ಐಪಿಒಗೆ 112 ಪಟ್ಟು ಬೇಡಿಕೆ!

ಪದ್ರೌನಾ ನಿವಾಸಿಯಾಗಿರುವ ಜಮಾಲುದ್ದೀನ್‌ ಎಂಬಾತ ಇತ್ತೀಚೆಗೆ ಹೊಟ್ಟೆನೋವು ಎಂದು ಗೋರಖ್‌ಪುರದ ವೈದ್ಯರೊಬ್ಬರ ಬಳಿ ತೆರಳಿದಾಗ ಆತನಲ್ಲಿ ಇಂಥದ್ದೊಂದು ‘ವಿಶೇಷತೆ’ ಇರುವ ಸಂಗತಿ ಬೆಳಕಿಗೆ ಬಂದಿದೆ. ಆತನ ಎಕ್ಸ್‌-ರೇ ಹಾಗೂ ಅಲ್ಟಾ್ರ ಸೌಂಡ್‌ ವರದಿಯನ್ನು ನೋಡಿದ ವೈದ್ಯರು ಅಚ್ಚರಿಗೆ ಒಳಗಾಗಿದ್ದಾರೆ.

ಜಮಾಲುದ್ದೀನ್‌ನನ್ನು ತಪಾಸಣೆಗೆ ಒಳಪಡಿಸಿದ ವೇಳೆ ಪಿತ್ತಕೋಶದಲ್ಲಿ ಕಲ್ಲು ಇರುವುದು ಕಂಡು ಬಂದಿದೆ. ಆದರೆ, ಅದು ಎಡ ಭಾಗದಲ್ಲಿ ಇರುವ ಕಾರಣ ಕಲ್ಲನ್ನು ಹೊರ ತೆಗೆಯುವುದು ಅತ್ಯಂತ ಕಷ್ಟಕರವಾಗಿತ್ತು. ಹೀಗಾಗಿ ಲ್ಯಾಪರೋಸ್ಕೋಪಿಕ್‌ ಯಂತ್ರಗಳ ಸಹಾಯದಿಂದ ಶಸ್ತ್ರ ಚಿಕಿತ್ಸೆ ನೆರವೇರಿಸಲಾಗಿದೆ. ಜಮಾಲುದ್ದೀನ್‌ ಈಗ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

click me!