
ಕೋಲಾರ(ಮಾ.23): 23 ವರ್ಷದ ಯುವಕನ ಹೊಟ್ಟೆಯಲ್ಲಿ ಸ್ತ್ರೀಯರ ಗರ್ಭಕೋಶ ಪತ್ತೆಯಾಗಿ ವೈದ್ಯರನ್ನೇ ಅಚ್ಚರಿ ಮೂಡಿಸಿರುವ ಘಟನೆ ಕೋಲಾರದ ಗಡಿ ಆಂಧ್ರ ಚಿತ್ತೂರಿನಲ್ಲಿ ನಡೆದಿದೆ.
ವಿ.ಕೋಟ ಮಂಡಲಂನ ಮುರಗಂದೊಡ್ಡಿ ಗ್ರಾಮದ 23 ವರ್ಷದ ಮುರುಗೇಶ್ ಎಂಬ ಯುವಕನ ಹೊಟ್ಟೆಯಲ್ಲಿ ಸ್ತ್ರೀಯರ ಗರ್ಭಕೋಶ ಪತ್ತೆಯಾಗಿದೆ. ಎರಡು ದಿನದ ಹಿಂದಷ್ಟೆ ಹೊಟ್ಟೆ ನೋವಿಗೆಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಯುವಕನಿಗೆ ಶಸ್ತ್ರ ಚಿಕಿತ್ಸೆ ವೇಳೆ ಹೊಟ್ಟೆಯಲ್ಲಿ ಗರ್ಭಕೋಶ ಇರುವುದು ಗೊತ್ತಾಗಿದೆ. ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಗರ್ಭಕೋಶ ಹೊರತೆಗೆದಿರುವ ಪ್ರಿಯಾ ನರ್ಸಿಂಗ್ ಹೋಮ್ನ ಸುಧೀರ್ ನೇತೃತ್ವದ ವೈದ್ಯರ ತಂಡ, ಹತ್ತು ಲಕ್ಷ ಜನರಲ್ಲಿ ಒಬ್ಬರಲ್ಲಿ ಕಂಡುಬರುವ ಅಪರೂಪದ ಪ್ರಕರಣ ಎಂದು ಸ್ಪಷ್ಟ ಪಡಿಸಿದ್ದಾರೆ.
ತಮಿಳುನಾಡಿನ ಹೊಸೂರು ಮೂಲದ ಅಮರನಾಥ ಎಂಬುವವರಿಗೆ ಕಳೆದ 15 ದಿನಗಳ ಹಿಂದಷ್ಟೆ ಇದೇ ರೀತಿಯ ಶಸ್ತ್ರ ಚಿಕಿತ್ಸೆ ನೀಡಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.