
ತಮಿಳುನಾಡು(ಮಾ.23): ತಮಿಳುನಾಡಿನಲ್ಲಿ ಎಐಎಡಿಎಂಕೆ ಪಕ್ಷದ ಚಿಹ್ನೆಗಾಗಿ ಪನ್ನೀರ್ ಸೆಲ್ವಂ ಹಾಗೂ ಶಶಿಕಲಾ ನಡುವೆ ನಡೆದ ಸಮರದಲ್ಲಿ ಇಬ್ಬರಿಗೂ ಹಿನ್ನಡೆಯಾಗಿದೆ.
ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಸಾವಿನಿಂದ ತೆರವಾಗಿದ್ದ ಆರ್.ಕೆ. ನಗರ ಕ್ಷೇತದ ಚುನಾವಣೆ ಹಿನ್ನಲೆ, ಪಕ್ಷದ ಹೆಸರು ಹಾಗೂ ಚಿಹ್ನೆಗಾಗಿ ಪನ್ನೀರ್ ಸೆಲ್ವಂ ಬಣ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿತ್ತು. ಇದರ ವಿರುದ್ಧವಾಗಿ ಶಶಿಕಲಾ ಬಣದಿಂದ ಆರ್.ಕೆ.ನಗರದಲ್ಲಿ ಸ್ಪರ್ಧಿಸುತ್ತಿರುವ ಶಶಿಕಲಾ ಸಂಬಂಧಿ ದಿನಕರನ್ ಕೂಡ ಚುನಾವಣಾ ಆಯೋಗದ ಮೊರೆ ಹೋಗಿದ್ದರು. ಇದೀಗ, ನಾಮಪತ್ರ ಸಲ್ಲಿಸಲು ಇಂದೇ ಕೊನೆ ದಿನವಾದ್ದರಿಂದ ಚುನಾವಣಾ ಆಯೋಗ, ಪಕ್ಷದ ಚಿಹ್ನೆಯನ್ನ ಫ್ರೀಜ್ ಮಾಡಿದೆ. ಆದ್ದರಿಂದ ಎರಡೂ ಬಣದ ಅಭ್ಯರ್ಥಿಗಳು ಪಕ್ಷದ ಹೆಸರು ಅಥವಾ ಪಕ್ಷದ ಚಿಹ್ನೆಯಡಿ ಸ್ಪರ್ಧೆ ಮಾಡಲು ಅವಕಾಶವಿಲ್ಲ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.
ಹೀಗಾಗಿ ಇಂದು ಬೆಳಗ್ಗೆ 10 ಗಂಟೆಯ ಒಳಗಾಗಿ ಹೊಸ ಚಿಹ್ನೆಯನ್ನ ಚುನಾವಣಾ ಆಯೋಗಕ್ಕೆ ಸಲ್ಲಿಸಲು ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಇನ್ನು, ಎಂಜಿಆರ್ ನಿಧನವಾದ ಬಳಿಕ 29 ವರ್ಷಗಳ ಹಿಂದೆಯೂ ತಮಿಳುನಾಡಿನಲ್ಲಿ ಇದೇ ಪರಿಸ್ಥಿತಿ ಉದ್ಭವಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.