ಆ್ಯಂಟಿ ಬಯಾಟಿಕ್ ಬಗ್ಗೆ ಹುಷಾರು..! ಎರ್ರಾಬಿರ್ರಿ ಆ್ಯಂಟಿ ಬಯಾಟಿಕ್ ಬಳಸೋ ಮುನ್ನ ಈ ಸ್ಟೋರಿ ಓದಿ

By Suvarna Web DeskFirst Published Feb 19, 2018, 1:51 PM IST
Highlights

ಇತ್ತೀಚಿನ ದಿನಗಳಲ್ಲಿ ಅತೀ ಹೆಚ್ಚು ದುರ್ಬಳಕೆ ಆಗುವ ಔಷಧಿಗಳಲ್ಲಿ ಆ್ಯಂಟಿ ಬಯಾಟಿಕ್‌'ಗೆ ಅಗ್ರಸ್ಥಾನ. ಬ್ಯಾಕ್ಟೀರಿಯಾ ಸೋಂಕು ತಗುಲಿದಾಗ ದೇಹದ ರಕ್ಷಣಾ ವ್ಯವಸ್ಥೆ ಕುಸಿದು ಹೋಗಿ ದೇಹದಲ್ಲಿ ಸೋಂಕು ಹರಡುತ್ತಿರುವಾಗ ಇದನ್ನು ನಿಯಂತ್ರಿಸಲು ವೈದ್ಯರು ಅನಿವಾರ್ಯವಾಗಿ ಆಂಟಿ ಬಯೋಟಿಕ್‌ಬಳಸುತ್ತಾರೆ. ಆದರೆ ಈ ಆ್ಯಂಟಿ ಬಯಾಟಿಕ್ ಅನ್ನು ವೈದ್ಯರ ಸಲಹೆ ಇಲ್ಲದೆ ಯಾವತ್ತೂ ಸೇವಿಸಬಾರದು. ಆಂಟಿ ಬಯೋಟಿಕ್ ಬಳಸುವಾಗ ಈ ಕೆಳಗಿನ ಅಂಶಗಳನ್ನು ಯಾವತ್ತೂ ನೆನಪಿನಲ್ಲಿಡಬೇಕು.

1. ಆ್ಯಂಟಿ ಬಯಾಟಿಕ್ ಅನ್ನು ವೈದ್ಯರು ಸೂಚಿಸಿದ ಪ್ರಮಾಣದಲ್ಲಿ ಸೂಚಿಸಿದ ಸಮಯದಲ್ಲಿಯೇ ತೆಗೆದುಕೊಳ್ಳಿ. ಬೇಗ ಗುಣವಾಗಲಿ ಎಂದು ಹೆಚ್ಚು ಡೋಸ್ ತಗೊಳ್ಳೋದು, ಸೈಡ್ ಎಫೆಕ್ಟ್ ಜಾಸ್ತಿ ಅಂತ ಕಡಿಮೆ ಪ್ರಮಾಣದಲ್ಲಿ ಸೇವಿಸೋದು ದೇಹಕ್ಕೆ ಹಾನಿಯುಂಟು ಮಾಡುತ್ತದೆ.

2. ಕೆಲವರು ರೋಗ ಕಡಿಮೆಯಾಗಿದೆ ಅಂತ ಆ್ಯಂಟಿ ಬಯಾಟಿಕ್ ನಿಲ್ಲಿಸಿಬಿಡುತ್ತಾರೆ. ಆದರೆ ವೈದ್ಯರು ಇನ್ನೂ ಹೆಚ್ಚು ತೆಗೆದುಕೊಳ್ಳಲು ಹೇಳಿರುತ್ತಾರೆ. ಹೀಗೆ ಅರ್ಧದಲ್ಲಿ ಔಷಧಿ ನಿಲ್ಲಿಸಿದಲ್ಲಿ ರೋಗ ಮರುಕಳಿಸಬಹುದು ಮತ್ತು ರೋಗಾಣುಗಳು ಪ್ರತಿಬಂಧಕತೆ ಬೆಳೆಸಿಕೊಳ್ಳುತ್ತದೆ.

3. ಆ್ಯಂಟಿ ಬಯಾಟಿಕ್ ಔಷಧಿಯನ್ನು ಯಾವುದೇ ಕಾರಣಕ್ಕೂ ಇತರರೊಂದಿಗೆ ಹಂಚಿಕೊಳ್ಳಬಾರದು. ನಿಮ್ಮ ದೇಹದ ಪ್ರಕೃತಿ ತೂಕ, ವಯಸ್ಸು ಮತ್ತು ದೇಹದ ಸ್ಥಿತಿಯನ್ನು ಅಭ್ಯಸಿಸಿ ವೈದ್ಯರು ಆ್ಯಂಟಿ ಬಯಾಟಿಕ್ ಅನ್ನು ಆಯ್ಕೆ ಮಾಡಿರುತ್ತಾರೆ.

4. ಆ್ಯಂಟಿ ಬಯಾಟಿಕ್‌ಎನ್ನುವುದು ಎರಡು ಅಲುಗಿನ ಕತ್ತಿಯಂತೆ, ಸರಿಯಾಗಿ ಸರಿಯಾದ ಪ್ರಮಾಣದಲ್ಲಿ ಸಕಾಲದಲ್ಲಿ ಸೇವಿಸಿದಲ್ಲಿ ಜೀವರಕ್ಷಕ ಔಷಧಿ ಮತ್ತು ಅನಗತ್ಯವಾಗಿ ಅತಿಯಾಗಿ ಎರ್ರಾಬಿರ್ರಿಯಾಗಿ ಸೇವಿಸಿದಲ್ಲಿ ಜೀವಕ್ಕೆ ಕುತ್ತು ತರಬಹುದು.

5. ಸಾಮಾನ್ಯ ವೈರಾಣು ಸೋಂಕಿಗೆ ಆ್ಯಂಟಿ ಬಯಾಟಿಕ್ ಔಷಧಿ ಅಗತ್ಯವಿಲ್ಲ. ಸಾಮಾನ್ಯ ನೆಗಡಿ ಮತ್ತು ಶೀತಕ್ಕೆ ಸ್ವಯಂ ವೈದ್ಯರಾಗಿ ಆ್ಯಂಟಿ ಬಯಾಟಿಕ್ ಬಳಸುವುದು ಮೂರ್ಖತನದ ಪರಮಾವಧಿ. ಇದರಿಂದ ತದ್ವಿರುದ್ದ ಪರಿಣಾಮ ಉಂಟಾಗಬಹುದು.

- ಡಾ. ಮುರಲೀ ಮೋಹನ್ ಚೂಂತಾರು

click me!