
ಬೆಂಗಳೂರು(ಫೆ.19): ವಿಧ್ವತ್ ಮೇಲೆ ಹಲ್ಲೆ ಮಾಡಿ 36 ಗಂಟೆಗಳ ಬಳಿಕ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಹಾಜರಾಗಿರುವ ಮೊಹಮ್ಮದ್ ನಲಪಾಡ್'ಗೆ ಠಾಣೆಯಲ್ಲಿ ಭರ್ಜರಿ ರಾಜಾತಿಥ್ಯ ಸಿಕ್ಕಿದೆ.
ಠಾಣೆಗೆ ಹಾಜಾರಾಗಿರುವ ಶಾಸಕ ಎನ್ಎ ಹ್ಯಾರಿಸ್ ಪುತ್ರನನ್ನು ಸೆಲ್'ನಲ್ಲಿ ಇಡುವ ಬದಲು ಇನ್ಸ್'ಪೆಕ್ಟರ್ ಚೇಂಬರ್'ನಲ್ಲಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಗೂಂಡಾ ವರ್ತನೆ ತೋರಿದ ಆರೋಪಿಗೆ ಜ್ಯೂಸ್ ತಂದು ಕೊಟ್ಟಿದ್ದಾರೆ. ಹಾಗೆಯೇ ಟಿವಿಯಲ್ಲಿ ಹೊರಗಡೆ ನಡೆಯುತ್ತಿರುವ ಘಟನೆಗಳನ್ನು ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.
ಗೂಂಡಾ ವರ್ತನೆ ತೋರಿದ ಶಾಸಕನ ಪುತ್ರನನ್ನು ಶೀಘ್ರವೇ ಬಂಧಿಸಬೇಕೆಂದು ವಿರೋಧ ಪಕ್ಷಗಳ ಕಾರ್ಯಕರ್ತರು ಪೊಲೀಸ್ ಠಾಣೆಯೆದುರು ಇಂದು ಬೆಳಿಗ್ಗೆಯಿಂದಲೇ ಪ್ರತಿಭಟನೆ ನಡೆಸುತ್ತಿದ್ದಾರೆ. ಪೊಲೀಸರು ಕೂಡಾ ಪತ್ರಕರ್ತರನ್ನು ತಡೆಯಲು ಠಾಣೆಯ ಸುತ್ತ ಬ್ಯಾರೀಕೇಡ್ ನಿರ್ಮಿಸಿದ್ದರು.
ಶಾಸಕನ ಪುತ್ರನಿಗೆ ಈ ರೀತಿ ರಾಜಾತಿಥ್ಯ ನೀಡಿರುವ ಪೊಲೀಸರ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿದ್ದು, ಸಾಮಾನ್ಯ ವ್ಯಕ್ತಿಯಾಗಿದ್ದರೆ ಪೊಲೀಸರು ಇದೇ ರೀತಿ ನಡೆದುಕೊಳ್ಳುತ್ತಿದ್ದರ ಎಂಬ ಮಾತು ಕೇಳಿ ಬರುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.