
ವಾಷಿಂಗ್ಟನ್(ಮಾ.28): ಭಾರತ ಅಂತರಿಕ್ಷ ಬೇಹುಗಾರಿಕೆ ಪತ್ತೆ ಹಚ್ಚುವ ASAT ಕ್ಷಿಪಣಿ ತಂತ್ರಜ್ಞಾನ ಪರೀಕ್ಷಾರ್ಥ ಪ್ರಯೋಗ ನಡೆಸಿದ ಬೆನ್ನಲ್ಲೇ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.
ಭಾರತದ ಸಾಧನೆಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕ, ಅಂತರಿಕ್ಷ ರಕ್ಷಣೆಗೆ ಮುಂದಾಗಿರುವ ಭಾರತದ ಕ್ರಮ ಸ್ವಾಗತಾರ್ಹವಾದರೂ, ಅಂತರಿಕ್ಷವನ್ನು ಕಸದ ತೊಟ್ಟಿಯನ್ನಾಗಿ ಮಾಡದ ಹೊಣೆಗಾರಿಕೆಯೂ ನಮ್ಮ ಮೇಲಿದೆ ಎಂದು ಹೇಳಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಮೆರಿಕ ರಕ್ಷಣಾ ಕಾರ್ಯದರ್ಶಿ ಪ್ಯಾಟ್ರಿಕ್ ಶಾನ್ಹಾನ್, ASAT ಪರೀಕ್ಷಾರ್ಥ ಪ್ರಯೋಗದಿಂದ ಅಂತರಿಕ್ಷದಲ್ಲಿ ಉಳಿದುಕೊಳ್ಳುವ ಕಸವನ್ನು ಹಾಗೆ ಬಿಡುವುದು ಭವಿಷ್ಯಕ್ಕೆ ಅಪಾಯಕಾರಿ ಎಂದು ಅಭಿಪ್ರಾಯಪಟ್ಟಿದ್ದಾರೆ.
ಭಾರತದ ASAT ಪ್ರಯೋಗದ ಮೇಲೆ ಅಮೆರಿಕ ನಿಗಾವಹಿಸಿದ್ದು, ಬಾಹ್ಯಾಕಾಶ ಕಸ ಭವಿಷ್ಯದಲ್ಲಿ ಮನುಕುಲಕ್ಕೆ ಅಪಾಯ ತಂದೊಡ್ಡಬಲ್ಲದು ಎಂಬುದನ್ನು ಎಲ್ಲ ದೇಶಗಳೂ ಅರ್ಥ ಮಾಡಿಕೊಳ್ಳಬೇಕಿದೆ ಎಂದು ಪ್ಯಾಟ್ರಿಕ್ ಹೇಳಿದ್ದಾರೆ.
ಬಾಹ್ಯಾಕಾಶದಲ್ಲಿ ವಿಶ್ವದ ಪ್ರಬಲ ರಾಷ್ಟ್ರಗಳ ಉಪಸ್ಥಿತಿ ಇದ್ದು, ಇದೇ ಬಾಹ್ಯಾಕಾಶ ಪರಿಸರದ ನಾಶಕ್ಕೆ ಕಾರಣವಾಗಬಾರದು ಎಂಬುದು ಅಮೆರಿಕದ ನಿಲುವಾಗಿದೆ ಎಂದು ಪ್ಯಾಟ್ರಿಕ್ ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.