ತೆರಿಗೆ ಯುದ್ಧದ ಛಾಯೆ: ಮೋದಿ ಭೇಟಿ ಮಾಡಲು ಪಾಂಪಿಯೊ ಆಯೇ!

Published : Jun 26, 2019, 12:32 PM IST
ತೆರಿಗೆ ಯುದ್ಧದ ಛಾಯೆ: ಮೋದಿ ಭೇಟಿ ಮಾಡಲು ಪಾಂಪಿಯೊ ಆಯೇ!

ಸಾರಾಂಶ

ತಾರಕಕ್ಕೇರಿರುವ ಭಾರತ-ಅಮೆರಿಕ ನಡುವಿನ ತೆರಿಗೆ ಶೀಥಲ ಸಮರ| ಭಾರತಕ್ಕೆ ಆಗಮಿಸಿದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪಾಂಪಿಯೊ| ಪ್ರಧಾನಿ ಮೋದಿ ಜೊತೆ ಪಾಂಇಪಯೊ ಮಹತ್ವದ ಮಾತುಕತೆ| ಜಿ20 ಶೃಂಗಸಭೆಯಲ್ಲಿ ಟ್ರಂಪ್-ಮೋದಿ ಮುಖಾಮುಖಿ| ಪಾಂಪಿಯೊ ಗೌರವಾರ್ಥ ಭೋಜನಕೂಟ ಏರ್ಪಡಿಸಿದ ವಿದೇಶಾಂಗ ಸಚಿವ|

ನವದೆಹಲಿ(ಜೂ.26): ಭಾರತ-ಅಮೆರಿಕ ನಡುವಿನ ತೆರಿಗೆ ಶೀಥಲ ಸಮರ ತಾರಕಕ್ಕೇರಿದೆ. ಈ ಮಧ್ಯೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪಾಂಪಿಯೊ ಭಾರತಕ್ಕೆ ಆಗಮಿಸಿದ್ದು, ಮಹತ್ವದ ವಿಚಾರಗಳ ಕುರಿತು ಚರ್ಚೆ ನಡೆಸುವ ಸಾಧ್ಯತೆ ಇದೆ.

ಮೋದಿ-2 ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪಾಂಪಿಯೋ ಇದೇ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿದ್ದು, ತೆರಿಗೆ ಯುದ್ಧದ ಛಾಯೆಯ ನಡುವೆ ಪ್ರಧಾನಿ ಮೋದಿ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿದ್ದಾರೆ.

ಇದೇ ಜೂನ್ 28–29ರಂದು ಜಪಾನ್‌ನ ಒಸಾಕಾದಲ್ಲಿ ಜಿ20 ಶೃಂಗಸಭೆ ನಡೆಯಲಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಪ್ರಧಾನಿ ನರೇಂದ್ರ ಮೋದಿ ಈ ವೇಳೆ ಭೇಟಿಯಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಪಾಂಪಿಯೊ ಭೇಟಿ ಮಹತ್ವ ಪಡೆದುಕೊಂಡಿದೆ.

ಜಾಗತಿಕ ಉಗ್ರವಾದ, ಎಚ್‌1ಬಿ ವೀಸಾ ಸಮಸ್ಯೆ,  ಇರಾನ್ ತೈಲ ಖರೀದಿ ಮೇಲೆ ಅಮೆರಿಕದ ನಿರ್ಬಂಧದ ಪರಿಣಾಮಗಳ ಕುರಿತು ಪಾಂಪಿಯೊ ಮತ್ತು ಮೋದಿ ನಡುವೆ ಮಾತುಕತೆ ನಡೆದಿದೆ ಎನ್ನಲಾಗಿದೆ.

ಇದಕ್ಕೂ ಮೊದಲು ವಿದೇಶಾಂಗ ಸಚಿವ ಜೈಶಂಕರ್ ಆಯೋಜಿಸಿದ್ದ ಭೋಜನ ಕೂಟದಲ್ಲಿ ಪಾಂಪಿಯೊ ಭಾಗವಹಿಸಿದ್ದು, ಅಮೆರಿಕ-ಭಾರತ ನಡುವಿನ ಸಂಬಂಧ ವೃದ್ಧಿಗೆ ಹೊಸ ಮುನ್ನುಡಿ ಬರೆಯುವ ಮುನ್ಸೂಚನೆ ದೊರೆತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮದ್ಯ ಮಾರಾಟಕ್ಕೆ ಇಳಿದ ಯುವರಾಜ್‌ ಸಿಂಗ್‌, ಒಂದು ತಿಂಗಳ ಸಂಬಳಕ್ಕೆ ಬರುತ್ತೆ ಒಂದು ಬಾಟಲ್‌!
15 ವರ್ಷಗಳಿಂದ ನಾಪತ್ತೆ: ವಿಡಿಯೋ ವೈರಲ್ ಬಳಿಕ ಮರಳಿ ಕುಟುಂಬ ಸೇರಿದ ಮಾಜಿ ಯೋಧ