
ಮಿಯಾಮಿ (ನ.29): ಬರೋಬ್ಬರಿ 50 ವರ್ಷಗಳ ಬಳಿಕ ಅಮೆರಿಕದಿಂದ ಕ್ಯೂಬಾಗೆ ನೇರ ವಿಮಾನಯಾನ ಸೇವೆ ಶುರುವಾಗಿದೆ. ನಿನ್ನೆ ಅಮೆರಿಕದ ಮಿಯಾಮಿಯಿಂದ ಬೆಳಗ್ಗೆ 7.30ರ ಹೊತ್ತಿಗೆ ಕ್ಯೂಬಾದತ್ತ ಪ್ರಯಾಣ ಬೆಳೆಸಿದ್ದ ಪ್ರಯಾಣಿಕ ವಿಮಾನ ಇಂದು ಕ್ಯೂಬಾದ ಹವಾನಾ ತಲುಪಿದ್ದು, ಕ್ಯೂಬಾದಿಂದ ನೇರವಾಗಿ ಪ್ರಯಾಣಿಕರನ್ನು ಹೊತ್ತು ಅಮೆರಿಕಕ್ಕೆ ಬರಲಿದೆ.
ಸಾಂಪ್ರದಾಯಿಕ ಎದುರಾಳಿ ದೇಶಗಳ ನಡುವೆ 50 ವರ್ಷಗಳ ಬಳಿಕ ನೇರ ಪ್ರಯಾಣಿಕ ವಿಮಾನಯಾನ ಸೇವೆ ಆರಂಭವಾಗಿದೆ. ಪ್ರಸ್ತುತ ಆರಂಭವಾಗಿರುವ ವಿಮಾನ ಸೇವೆ ಕ್ಯೂಬಾದ ಪ್ರಮುಖ 9 ನಗರಗಳಿಗೆ ವಿಸ್ತಾರವಾಗಿದ್ದು, ಪ್ರತಿನಿತ್ಯ ಸುಮಾರು 110 ವಿಮಾನಗಳು ಕ್ಯೂಬಾಕ್ಕೆ ಹಾರುತ್ತಿವೆ.
ಈ ಪೈಕಿ 20 ವಿಮಾನಗಳು ಕ್ಯೂಬಾ ರಾಜಧಾನಿ ಹವಾನಾ ಹಾಗೂ ಅಮೆರಿಕದ ಮಿಯಾಮಿ ನಡುವೆ ಸಂಚಾರ ನಡೆಸುತ್ತಿವೆ. ಕ್ಯೂಬಾದ ಕ್ರಾಂತಿಕಾರಿ ನಾಯಕ ಫಿಡೆಲ್ ಕ್ಯಾಸ್ಟ್ರೋ ನಿಧನದ ಮರು ದಿನವೇ ಅಮೆರಿಕ ಕ್ಯೂಬಾ ದೇಶಕ್ಕೆ ನೇರ ವಿಮಾನಯಾನ ಸೇವೆ ಆರಂಭಿಸಿರುವುದು ಅಚ್ಚರಿಗೆ ಕಾರಣವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.