
ಲಕ್ನೋ (ನ.29): ತಮ್ಮ ಬ್ಯಾಂಕ್ ಖಾತೆಗಳ ಎಲ್ಲ ವಹಿವಾಟಿನ ವಿವರ ನೀಡಬೇಕೆಂದು ಬಿಜೆಪಿಯ ಎಲ್ಲ ಸಂಸದರು ಹಾಗೂ ಶಾಸಕರಿಗೆ ಪ್ರಧಾನಿ ಮೋದಿ ಹೇಳುವ ಮುನ್ನ ತಮ್ಮ ಖಾತೆಯ ಮಾಹಿತಿ ಘೋಷಿಸಲಿ ಎಂದು ಮಮತಾ ಬ್ಯಾನರ್ಜಿ ದಿಟ್ಟತನ ತೋರಿಸಿದ್ದಾರೆ.
ಮೋದಿಯವರು ಸರ್ವಾಧಿಕಾರಿ ಧೋರಣೆ ತಾಳಿದ್ದು ಇವರು ತುಘಲಕ್ ಹಾಗೂ ಹಿಟ್ಲರ್ ನನ್ನೇ ಮೀರಿಸಿದ್ದಾರೆ. ಜನಸಾಮಾನ್ಯರ ಸಾಂವಿಧಾನಿಕ ಹಕ್ಕನ್ನು ಹಗುರವಾಗಿ ಪರಿಗಣಿಸಿದ್ದಾರೆ. ನೋಟು ನಿಷೇಧ ವಿರುದ್ಧದ ಹೋರಾಟ ಮುಂದುವರೆಯುವುದು ಎಂದು ದೀದಿ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಮಾಧ್ಯಮ ವರದಿಯನ್ನು ಆಧರಿಸಿ, ನೋಟು ನಿಷೇಧ ಕ್ರಮವನ್ನು ಘೋಷಿಸುವ ಮುನ್ನ ಭಾರೀ ಪ್ರಮಾಣದ ಆಸ್ತಿಯನ್ನು ಬಿಜೆಪಿ ಹೆಸರಿನಲ್ಲಿ, ಬಿಜೆಪಿ ಅಧ್ಯಕ್ಷರ ಹೆಸರಿನಲ್ಲಿ ಖರೀದಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.