
ವಾಷಿಂಗ್ಟನ್ : ಅಮೆರಿಕದಲ್ಲಿ ಕೆಲಸ ಮಾಡುವ ಭಾರತೀಯರು ಸೇರಿದಂತೆ ವಿದೇಶೀಯರಿಗೆ ನೀಡಿದ್ದ ಎಚ್1ಬಿ ವೀಸಾ ಪ್ರಮಾಣ ಕಡಿತಗೊಳಿಸುವ ವಿವಾದದ ನಂತರ ಡೊನಾಲ್ಡ್ ಟ್ರಂಪ್ ಸರ್ಕಾರ ಮತ್ತೊಂದು ವಿವಾದ ಸೃಷ್ಟಿಸಿದೆ.
ದೇಶದಲ್ಲಿ ಕಾರ್ಯನಿರ್ವಹಿಸುವ ಎಚ್1ಬಿ ವೀಸಾದಾರರ ಸಂಗಾತಿಗಳಿಗೆ ಹಾಗೂ 21 ವರ್ಷ ಮೇಲ್ಪಟ್ಟಮಕ್ಕಳಿಗೆ ನೀಡಲಾಗುವ ಎಚ್4 ‘ನೌಕರಿ ವೀಸಾ’ವನ್ನು ರದ್ದುಗೊಳಿಸುವುದಾಗಿ ಇಲ್ಲಿನ ಫೆಡರಲ್ ನ್ಯಾಯಾಲಯಕ್ಕೆ ಟ್ರಂಪ್ ಸರ್ಕಾರ ಹೇಳಿಕೆ ಸಲ್ಲಿಸಿದೆ.
ಎಚ್4 ವೀಸಾ ಅಡಿ ಸುಮಾರು 1.25 ಲಕ್ಷ ಸಂಗಾತಿಗಳು ಅಮೆರಿಕದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇವರಲ್ಲಿ ಸುಮಾರು 1 ಲಕ್ಷ ಜನರು ಭಾರತೀಯರೇ ಆಗಿದ್ದಾರೆ. ಟ್ರಂಪ್ ಸರ್ಕಾರವು ‘ಎಚ್4 ವೀಸಾ ನೀತಿಯನ್ನು ರದ್ದು ಮಾಡುವ ಪ್ರಕ್ರಿಯೆಯು ಭರದಿಂದ ಸಾಗಿದೆ.
ಹೊಸ ನಿಯಮವನ್ನು ಇನ್ನು 3 ತಿಂಗಳಲ್ಲಿ ಸಲ್ಲಿಸಲಾಗುತ್ತದೆ’ ಎಂದು ಕೊಲಂಬಿಯಾದ ಫೆಡರಲ್ ನ್ಯಾಯಾಲಯಕ್ಕೆ ತಿಳಿಸಿದೆ. ಹೀಗಾಗಿ ತಮ್ಮ ಹೊಟ್ಟೆಹೊರೆದುಕೊಳ್ಳಲು ಸಂಗಾತಿಯ ಜತೆಗೆ ನೌಕರಿ ಮಾಡುತ್ತಿದ್ದ ಭಾರತೀಯರಿಗೆ ಭಾರಿ ನಡುಕ ಆರಂಭವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.