
ನ್ಯೂಯಾರ್ಕ್(ಆ.21]: ಮಹಾತ್ಮಾ ಗಾಂಧೀಜಿಯವರ ಶಾಂತಿಯುತ ಸ್ವಾತಂತ್ರ್ಯ ಹೋರಾಟ ಜಗತ್ತಿನ ಸಾಕಷ್ಟು ಹೋರಾಟಗಾರರಿಗೆ ಸ್ಫೂರ್ತಿಯಾಗಿದೆ.
ನಾಗರಿಕ ಹಕ್ಕುಗಳಿಗಾಗಿ ಅಂತಹ ಶಾಂತಿಯುತ ಚಳವಳಿಯನ್ನು ನೀಡಿದ ಕಾರಣಕ್ಕಾಗಿ, ಗಾಂಧೀಜಿಯವರಿಗೆ ಅಮೆರಿಕದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಸಂಸದೀಯ ಚಿನ್ನದ ಪದಕ’ವನ್ನು ಮರಣೋತ್ತರವಾಗಿ ನೀಡುವುದಕ್ಕೆ ಒತ್ತಾಯಿಸುವ ಐತಿಹಾಸಿಕ ಪ್ರಸ್ತಾಪವನ್ನು ಅಲ್ಲಿನ ಪ್ರಭಾವಿ ಸಂಸದೆಯೊಬ್ಬರು ಮಂಡಿಸಲು ನಿರ್ಧರಿಸಿದ್ದಾರೆ.
ಭಾರತದ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ನ್ಯೂಯಾರ್ಕ್’ನಲ್ಲಿ ನಡೆದ ಕರೋಲಿನ್ ಮ್ಯಾಲೊನಿ ಈ ವಿಷಯ ಘೋಷಿಸಿದ್ದಾರೆ. ಈಗಾಗಲೇ ಪದಕ ಸ್ವೀಕರಿಸಿದ ನ್ಯಾಯಕ್ಕಾಗಿ ಅಹಿಂಸಾತ್ಮಕ ನಾಯಕತ್ವ ನೀಡಿದ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್, ನೆಲ್ಸನ್ ಮಂಡೇಲಾರಂತಹ ಹಲವಾರು ನಾಯಕರಿಗೆ ಗಾಂಧಿ ಪ್ರಭಾವ ಬೀರಿದ್ದಾರೆ. ಹೀಗಾಗಿ ಶೀಘ್ರವೇ ಅವರಿಗೆ ಪದಕ ನೀಡುವುದಕ್ಕೆ ಸಂಬಂಧಿಸಿ ಶಾಸನ ಮಂಡಿಸಲಿಚ್ಛಿಸಿದ್ದೇನೆ, ಅದು ಯಶಸ್ವಿಯಾಗಲಿದೆ ಎಂಬ ವಿಶ್ವಾಸವಿದೆ ಎಂದು ಕರೋಲಿನ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ