ರಾಷ್ಟ್ರ ಧ್ವಜ ಅರ್ಧಕ್ಕೆ ಹಾರಿಸಿದ ಮಾರಿಷಸ್‌

By Nirupama K SFirst Published Aug 18, 2018, 11:46 AM IST
Highlights

ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸಾವಿಗೆ ಕಂಬನಿ ಮಿಡಿಯದವರು ಯಾರು? ಈ ಅಜಾತ ಶತ್ರುವಿನ ನಿಧನಕ್ಕೆ ದೇಶ ವಿದೇಶಗಳಲ್ಲಿ ಜನರು ಕಂಬನಿ ಮಿಡಿದಿದ್ದಾರೆ. ಮಾರಿಷಸ್ ಅಟಲ್‌ಗೆ ಗೌರವ ಸೂಚಿಸಿದ್ದು ಹೇಗೆ?

ಪೋರ್ಟ್‌ ಲೂಯಿಸ್‌: ಭಾರತದ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ನಿಧನದ ಹಿನ್ನೆಲೆಯಲ್ಲಿ ಮಾರಿಷಸ್‌ ರಾಷ್ಟ್ರ ಧ್ವಜವನ್ನು ಅರ್ಧಕ್ಕೆ ಹಾರಿಸುವ ಮೂಲಕ ಗೌರವ ಸಲ್ಲಿಸಿದೆ. ಮಾರಿಷಸ್‌ ಹಾಗೂ ಭಾರತದ ರಾಷ್ಟ್ರ ಧ್ವಜವನ್ನು ಸರ್ಕಾರಿ ಕಚೇರಿಗಳಲ್ಲಿ ಅರ್ಧ ಮಟ್ಟಕ್ಕೆ ಹಾರಿಸಲು ಪ್ರಧಾನಿ ಪ್ರವಿಂದ್‌ ಕುಮಾರ್‌ ಜಗನ್ನಾಥ್‌ ಆದೇಶ ಹೊರಡಿಸಿದ್ದಾರೆ.

ಖಾಸಗಿ ಸಂಸ್ಥೆಗಳ ಕಚೇರಿಗಳಲ್ಲೂ ಧ್ವಜವನ್ನು ಅರ್ಧಕ್ಕೆ ಹಾರಿಸುವಂತೆ ಸೂಚನೆ ನೀಡಿದ್ದಾರೆ. ಇದೇ ವೇಳೆ, ವಾಜಪೇಯಿ ಅವರು ಮಾರಿಷಸ್‌ ಹಾಗೂ ಭಾರತದ ಸಂಬಂಧ ಸುಧಾರಣೆಗೆ ವಾಜಪೇಯಿ ಅವರು ನೀಡಿದ ಕೊಡುಗೆಯನ್ನು ಅವರು ಸ್ಮರಿಸಿದ್ದಾರೆ. ಭಾರತೀಯರ ದುಃಖದಲ್ಲಿ ಮಾರಿಷಸ್‌ ಕೂಡ ಭಾಗಿಯಾಗುತ್ತದೆ ಎಂದು ಹೇಳಿದ್ದಾರೆ.

click me!