ಕೇರಳ ಜಲಪ್ರವಾಹಕ್ಕೆ ಕೊಚ್ಚಿ ಹೋದ ಓಣಂ

By Web DeskFirst Published Aug 18, 2018, 6:06 PM IST
Highlights

ಕೇರಳ ಪ್ರತಿಷ್ಠಿತ ಓಣಂ ಹಬ್ಬಕ್ಕೂ ಜಲ ಪ್ರವಾಹ ಬಿಸಿ ತಟ್ಟಿದೆ.  ಕೇರಳದ ಪ್ರತಿಯೊಬ್ಬ ಸಂಭ್ರಮದಿಂದ ಆಚರಿಸೋ ಓಣಂ ಹಬ್ಬ ಈ ಬಾರಿ ರದ್ದಾಗಿದೆ. ಈ ಕುರಿತು ಕೇರಳ ಮುಖ್ಯಮಂತ್ರಿ ಹೇಳಿದ್ದೇನು? ಇಲ್ಲಿದೆ ನೋಡಿ.

ತಿರುವನಂತಪುರಂ(ಆ.18): ಜಲ ಪ್ರವಾಹಕ್ಕೆ ಕೇರಳ ತತ್ತರಿಸಿ ಹೋಗಿದೆ. ರಕ್ಷಣಾ ಕಾರ್ಯಗಳು ಭರದಿಂದ ಸಾಗಿದೆ. ದುರದೃಷ್ಟ ಅಂದರೆ ಭಾರಿ ಮಳೆ ಇನ್ನು ನಿಂತಿಲ್ಲ. ಹೀಗಾಗಿ ಕೇರಳ ಸಹಜ ಸ್ಥಿತಿಗೆ ಮರಳು ಕನಿಷ್ಠ ಒಂದು ತಿಂಗಳ ಅವಶ್ಯಕತೆ ಇದೆ. ಹೀಗಾಗಿ ರಾಜ್ಯದ ಓಣಂ ಹಬ್ಬವನ್ನ ಈ ಬಾರಿ ರದ್ದುಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

ಓಣಂ ಹಬ್ಬ ಆಚರಣೆ ಹಣವನ್ನ ಪ್ರವಾಹ ಪರಿಹಾರಕ್ಕಾಗಿ ಉಪಯೋಗಿಸಲಾಗುವುದು. ಓಣಂ ಹಬ್ಬದ ಆಚರಣೆ, ವಿಶೇಷ ಕಾರ್ಯಕ್ರಮಗಳಿಗೆ ಸರ್ಕಾರ ನಿಗಧಿಪಡಿಸಿದ್ದ ಹಣವನ್ನ ಪರಿಹಾರ ಕಾರ್ಯಕ್ಕೆ ವಿನಿಯೋಗಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಇದೇ ಆಗಸ್ಟ್ 25 ರಂದು ಕೇರಳ ಹಾಗೂ ಕೇರಳಿಗರಿಗೆ ಓಣಂ ಹಬ್ಬ. ಆದರೆ ಈ ಬಾರಿ ಭಾರಿ ಮಳೆ ಹಾಗೂ ಜಲಪ್ರವಾಹಕ್ಕೆ ಜನರ ಬದುಕು ಹೈರಾಣಾಗಿದೆ. ಜನರೂ ಕೂಡ ಓಣಂ ಹಬ್ಬ ಆಚರಿಸೋ ಪರಿಸ್ಥಿತಿಯಲ್ಲಿ ಇಲ್ಲ. ಕೇರಳ ಪ್ರವಾಹ ಹರಿಹಾರಕ್ಕೆ ಕೇಂದ್ರ ಸರ್ಕಾರ 500 ಕೋಟಿ ರೂಪಾಯಿ ಘೋಷಿಸಿದೆ. ತಕ್ಷಣವೇ ಕೇರಳ ಪರಿಸ್ಥಿತಿ ಹತೋಟಿಗೆ ಬರಲಿ ಅನ್ನೋದೆ ಎಲ್ಲರ ಹಾರೈಕೆ.

click me!