6 ಮುಸ್ಲಿಂ ದೇಶಗಳ ನಾಗರಿಕರಿಗೆಅಮೆರಿಕ ಪ್ರವಾಸ ನಿಷೇಧ ಜಾರಿ

By Suvarna Web DeskFirst Published Jul 1, 2017, 1:23 AM IST
Highlights

ಆದರೆ ನಿಷೇಧದಲ್ಲಿ ಸುಪ್ರೀಂಕೋರ್ಟ್ ಕೊಂಚ ಸಡಿಲಿಕೆ ಮಾಡಿದೆ. ನಿಷೇಧಕ್ಕೆ ಒಳಗಾಗಿರುವ ದೇಶಗಳಿಂದ ಪ್ರಯಾಣ ಕೈಗೊಳ್ಳುವ ನಾಗರಿಕರು ಅಮೆರಿಕದ ಯಾವುದೇ ಪ್ರಜೆ ಜೊತೆಗೆ ನಂಟು ಹೊಂದಿದ್ದರೆ ಅವರಿಗೆ ಮುಂದಿನ ಆದೇಶದವರೆಗೆ ವೀಸಾ ನೀಡಬಹುದಾಗಿದೆ

ವಾಷಿಂಗ್ಟನ್(ಜು.01): 6 ಮುಸ್ಲಿಂ ಬಾಹುಳ್ಯದ ದೇಶಗಳ ವಲಸಿಗರಿಗೆ ಅಮೆರಿಕದ ಟ್ರಂಪ್ ಸರ್ಕಾರ ಹೇರಿದ್ದ ನಿಷೇಧ ಗುರುವಾರದಿಂದಲೇ ಜಾರಿಗೆ ಬಂದಿದೆ. ಆದರೆ ನಿಷೇಧದಲ್ಲಿ ಸುಪ್ರೀಂಕೋರ್ಟ್ ಕೊಂಚ ಸಡಿಲಿಕೆ ಮಾಡಿದೆ. ನಿಷೇಧಕ್ಕೆ ಒಳಗಾಗಿರುವ ದೇಶಗಳಿಂದ ಪ್ರಯಾಣ ಕೈಗೊಳ್ಳುವ ನಾಗರಿಕರು ಅಮೆರಿಕದ ಯಾವುದೇ ಪ್ರಜೆ ಜೊತೆಗೆ ನಂಟು ಹೊಂದಿದ್ದರೆ ಅವರಿಗೆ ಮುಂದಿನ ಆದೇಶದವರೆಗೆ ವೀಸಾ ನೀಡಬಹುದಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.

ನಿಷೇಧ ನೀತಿ ಘೋಷಣೆಯಾದಾಗ, ಜನವರಿಯಲ್ಲಿ ಕಂಡು ಬಂದಿದ್ದಷ್ಟು ಪ್ರತಿರೋಧ ಸದ್ಯಕ್ಕೆ ಪ್ರಕಟವಾಗಿಲ್ಲವಾದರೂ, ಕೆಲವೆಡೆ ಪ್ರತಿಭಟನೆಗಳು ನಡೆದಿವೆ. ಆದರೆ ದೇಶದ ಕೆಲವು ಪ್ರಮುಖ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಕೆಲವರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಲಾಗಿದೆ. ಕೆಲವರನ್ನು ಅವರು ಬಂದಿದ್ದ ದೇಶಕ್ಕೇ ಹಿಂದೆ ಕಳುಹಿಸಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಮಾನವ ಹಕ್ಕುಗಳ ಹೋರಾಟಗಾರರು ವಿಮಾನ ನಿಲ್ದಾಣಗಳಲ್ಲಿ ನಿಗಾವಿರಿಸಿದ್ದಾರೆ.

ಈ ಹಿಂದೆ ಟ್ರಂಪ್ ಹೊರಡಿಸಿದ್ದ ನಿಷೇಧದ ಆದೇಶಕ್ಕೆ ಹಲವು ಕೋರ್ಟ್‌ಗಳು ತಡೆ ನೀಡಿದ್ದವು. ಆದರೆ ಈ ತಡೆಯನ್ನು ಇತ್ತೀಚೆಗೆ ಸುಪ್ರೀಂಕೋರ್ಟ್ ತೆರವುಗೊಳಿಸಿತ್ತು.

click me!