ವಿಶ್ವ ವಿಜಯಿ ಭಾರತಾಂಬೆಯ ಗುಣಗಾನ: ಅಮೆರಿಕನ್ ಯೋಧರಿಂದ ಜನಗಣಮನ!

By Web DeskFirst Published Sep 19, 2019, 12:57 PM IST
Highlights

ಭಾರತ ಹಾಗೂ ಅಮೆರಿಕ ಸೇನೆಯ ಜಂಟಿ ಸಮರಾಭ್ಯಾಸ| ಭಾರತದ ರಾಷ್ಟ್ರಗೀತೆಯನ್ನು ನುಡಿಸಿದ ಅಮೆರಿಕಾ ಸೇನಾ ಬ್ಯಾಂಡ್| ಮುಂದಿನ ದಿನಗಳಲ್ಲಿ ಉಭಯ ದೇಶದ ಸೇನೆ ಒಟ್ಟಾಗಿ ತಮ್ಮ ಶತ್ರುಗಳನ್ನು ಸದೆಬಡಿಯಲು ಸಜ್ಜಾಗಿರುವ ಮುನ್ಸೂಚನೆ

ನವದೆಹಲಿ[ಸೆ.19]: ಭಾರತ ಹಾಗೂ ಅಮೆರಿಕ ಸೇನೆಯ ಜಂಟಿ ಸಮರಾಭ್ಯಾಸದ ವೇಳೆ ಅಮೆರಿಕಾ ಸೈನಿಕರು, ಭಾರತೀಯ ಯೋಧರೊಂದಿಗೆ ಅಸ್ಸಾಂ ರೆಜಿಮೆಂಟ್’ನ ಮಾರ್ಚಿಂಗ್ ಹಾಡಾದ ‘ಬದ್ಲುರಾಮ್ ಕಾ ಬದನ್ ಜಮೀನ್ ಕೇ ನೀಚೆ ಹೈ’ ಹಾಡಿದ್ದ ವಿಡಿಯೋ ಭಾರೀ ವೈರಲ್ ಆಗಿತ್ತು. ಸದ್ಯ ಇದರ ಬೆನ್ನಲ್ಲೇ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ಇದರಲ್ಲಿ ಅಮೆರಿಕಾದ ಯೋಧರು ಭಾರತೀಯ ರಾಷ್ಟ್ರಗೀತೆ 'ಜನಗಣಮನ' ನುಡಿಸಿದ್ದಾರೆ.

ಬದ್ಲುರಾಮ್ ಕಾ ಬದನ್ ಜಮೀನ್ ಕೆ ನೀಚೆ ಹೈ: ಇಂಡೋ-ಯುಎಸ್ ಸೈನಿಕರ ಸ್ಟೆಪ್ಸ್!

ಭಾರತ ಹಾಗೂ ಅಮೆರಿಕ ಸೇನೆಯ ಜಂಟಿ ಸಮರಾಭ್ಯಾಸದ ಕೊನೆಯ ದಿನ ಬುಧವಾರದಂದು ಅಮೆರಿಕಾ ಸೇನಾ ಬ್ಯಾಂಡ್ ಭಾರತದ ರಾಷ್ಟ್ರಗೀತೆಯನ್ನು ನುಡಿಸಿದೆ. ಈ ಹಿಂದೆ ಭಾರತೀಯ ಯೋಧರಿಗೆ ಸಮರ್ಪಿತ ಹಾಡಿಗೆ ಅಮೆರಿಕಾ ಸೈನಿಕರು ಹಾಡಿರುವುದು, ಇದೀಗ ರಾಷ್ಟ್ರಗೀತೆ ನುಡಿಸಿರುವುದು ಹೊಸ ಸಂಕೇತ ನೀಡಿದೆ.

American Army band playing Jan gan man during the Indo US joint Exercise Yudh Abhyas 2019 at Joint Base Lewis, McCord, Washington. pic.twitter.com/crKHFUW8oe

— Rajeev Ranjan (@Rajeevranjantv)

ಈ ಎರಡೂ ವಿಡಿಯೋಗಳು ಭಾರತ ಹಾಗೂ ಅಮೆರಿಕಾ ಸೈನಿಕರ ನಡುವೆ ಮೂಡಿರುವ ಬಾಂಧವ್ಯದ ಸಂಕೇತವಾಗಿದೆ. ಇದು ಮುಂದಿನ ದಿನಗಳಲ್ಲಿ ಉಭಯ ದೇಶದ ಸೇನೆ ಒಟ್ಟಾಗಿ ತಮ್ಮ ಶತ್ರುಗಳನ್ನು ಸದೆಬಡಿಯಲು ಸಜ್ಜಾಗಿರುವ ಮುನ್ಸೂಚನೆ ಎಂದರೂ ತಪ್ಪಾಗಲ್ಲ. 

बदलूराम का बदन गाने पर थिरकते भारतीय और अमेरिकी सेना के जवान .. pic.twitter.com/dtdBulhXOz

— Rajeev Ranjan (@Rajeevranjantv)

ಸಪ್ಟೆಂಬರ್ 15ರಂದು ಅಮೆರಿಕದ ಮ್ಯಾಕ್ ಕಾರ್ಡ್’ನ ಜಾಯಿಂಟ್ ಬೇಸ್ ಲುಯಿಸ್’ನಲ್ಲಿ ನಡೆದ ಭಾರತ-ಅಮೆರಿಕ ನಡುವಿನ ಜಂಟಿ ‘ಯುದ್ಧಾಭ್ಯಾಸ’ ವೇಳೆ ಉಭಯ ಸೈನಿಕರು ಅಸ್ಸಾಂ ರೆಜಿಮೆಂಟ್’ನ ಮಾರ್ಚಿಂಗ್ ಹಾಡಿಗೆ ಸ್ಟೆಪ್ ಹಾಕಿದ್ದರು.

click me!