ಗೇಮ್‌ ಚೇಂಜರ್‌ ಆಗಲಿದೆ ‘ಕಾವೇರಿ ಕೂಗು’

By Web Desk  |  First Published Sep 19, 2019, 12:19 PM IST

ನದಿಗಳ ವಿಷಯಕ್ಕೆ ಬಂದರೆ ನಾವೆಲ್ಲರೂ ದಬ್ಬಾಳಿಕೆಕಾರರು. ಈ ನಾಶಕ್ಕೆ ನಾವೆಲ್ಲರೂ ಕಾರಣಕರ್ತರು. 50 ವರ್ಷದ ಹಿಂದೆ ನಾನು ನೋಡಿದ ಕಾವೇರಿ ಸ್ವಚ್ಛಂದವಾಗಿ ಹರಿಯುತ್ತಿದ್ದಳು. ಮುಂದಿನ ಪೀಳಿಗೆಗೆ ಅಂಥದ್ದೇ ಕಾವೇರಿಯನ್ನು ನಾವು ನೀಡಬೇಕು - ಜಗ್ಗಿ ವಾಸುದೇವ್ 


ನದಿಗಳನ್ನು ಹೇಗೆ ನೋಡಬೇಕು ಎಂದು ಜನರಲ್ಲಿ ಅರಿವು ಮೂಡಿಸುವ ಆಂದೋಲನವೇ ರಾರ‍ಯಲಿ ಫಾರ್‌ ರಿವರ್‌. ಸ್ವತಃ ನಾನು ಕಳೆದ 30 ದಿನಗಳಲ್ಲಿ 9,300 ಕಿ.ಮೀ. ಡ್ರೈವ್‌ ಮಾಡಿಕೊಂಡು ಸಂಚರಿಸಿದೆ. ಆ ಸಮಯದಲ್ಲಿ 142 ಕಾರ‍್ಯಕ್ರಮಗಳು ಮತ್ತು 180 ಸಂದರ್ಶನಗಳಲ್ಲಿ ಮಾತನಾಡಿದೆ.  ಕೊನೆಗೆ ಇಡೀ ಚಳವಳಿಯೇ ರಾಷ್ಟ್ರೀಯ ಚಳವಳಿಯ ಸ್ವರೂಪ ಪಡೆಯಿತು. ಈ ಆಂದೋಲನಕ್ಕೆ 16.2 ಕೋಟಿ ಜನರು ಕೈಜೋಡಿಸಿದರು. 30 ದಿನದಲ್ಲಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಜನಬೆಂಬಲ ಸಿಕ್ಕ ಜಗತ್ತಿನ ಮೊದಲ ಚಳವಳಿ ಇದು.

ರ್ಯಾಲಿ ಫಾರ್‌ ರಿವರ್‌ಗೆ ಸಿಕ್ಕ ಬೆಂಬಲ

Tap to resize

Latest Videos

undefined

ಒಮ್ಮೆ ಈ ಚಳವಳಿಗೆ ಅಗಾಧ ಪ್ರಮಾಣದ ಜನಬೆಂಬಲ ದೊರಕುತ್ತಿದ್ದಂತೇ ಸರ್ಕಾರವೂ ಇದನ್ನು ಮೂಲೆಗುಂಪು ಮಾಡಲಿಲ್ಲ. ರಾರ‍ಯಲಿ ಫಾರ್‌ ರಿವರ್‌ ಕುರಿತ 760 ಪುಟಗಳ ಶಿಫಾರಸನ್ನು ಕೇಂದ್ರ ಸರ್ಕಾರದ ಮುಂದೆ ಸಲ್ಲಿಸಿದೆವು. ಪ್ರಧಾನಿ ನರೇಂದ್ರ ಮೋದಿಯವರು ಆಸಕ್ತಿಯಿಂದ ನಮ್ಮ ಮಾತು ಆಲಿಸಿದರು. ಶಿಫಾರಸನ್ನು ಪರಿಶೀಲಿಸಲು ಅವರು ನೂತನ ಸಮಿತಿ ರಚಿಸಿದರು. ಅದಾದ ಬಳಿಕ ನಾನು ನೀತಿ ಆಯೋಗಕ್ಕೆ ಹೋದೆ. ಶಿಫಾರಸನ್ನು ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಿದರು. ಖಾಸಗಿ ಸಂಸ್ಥೆಯೊಂದರ ಹೆಸರನ್ನು ಸರ್ಕಾರದ ಯೋಜನೆಗೆ ಇಡುವ ಯಾವುದೇ ಘಟನೆ ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಘಟಿಸಿರಲಿಲ್ಲ. ಆದರೆ ಸರ್ಕಾರ ಅದನ್ನು ಮಾಡಿತು.

ಕಾವೇರಿ ಕೂಗು ; ಸುವರ್ಣ ನ್ಯೂಸ್ ಜೊತೆ ಸದ್ಗುರು ಮಾತುಕತೆ

ರಾರ‍ಯಲಿ ವೇಳೆ ನಾನು ಡ್ರೈವ್‌ ಮಾಡಿಕೊಂಡು 16 ರಾಜ್ಯಗಳಿಗೆ ಭೇಟಿ ನೀಡಿದ್ದೇನೆ. ಈ 16 ರಾಜ್ಯಗಳಲ್ಲಿ 6 ಪ್ರತ್ಯೇಕ ರಾಜಕೀಯ ಪಕ್ಷಗಳು ಸರ್ಕಾರ ನಡೆಸುತ್ತಿವೆ. ಕಳೆದ ಮೂವತ್ತರಿಂದ ನಲವತ್ತು ವರ್ಷಗಳಲ್ಲಿ ಮೊದಲ ಬಾರಿಗೆ ಈ ಆರೂ ಪಕ್ಷಗಳು ಎದ್ದು ನಿಂತು ಇದನ್ನು ಬೆಂಬಲಿಸಿವೆ.

ಕಾವೇರಿ ಉಳಿವಿಗೆ ಕಾವೇರಿ ಕೂಗು

ರಾರ‍ಯಲಿ ಫಾರ್‌ ರಿವರ್‌ಗಿಂತ ಕಾವೇರಿ ಕೂಗು ಭಿನ್ನ ಅಭಿಯಾನ. ರಾರ‍ಯಲಿ ಫಾರ್‌ ರಿವರ್‌ ಕಾನೂನುಗಳ ಬದಲಾವಣೆಗೆ ಕರೆ ನೀಡಿದ ಜಾಗೃತಿ ಅಭಿಯಾನವಾಗಿತ್ತು. ಆದರೆ ಈಗ ತಳಮಟ್ಟದ ಬದಲಾವಣೆಗೆ ಕೈಜೋಡಿಸಿದ್ದೇವೆ. ಇಂಥದ್ದೇ ಚಳವಳಿ ಮಹಾರಾಷ್ಟ್ರದ ಯವತ್ಮಾಲ್‌ ಪ್ರದೇಶದಲ್ಲಿ ಈಗಾಗಲೇ ಪ್ರಗತಿಯಲ್ಲಿದೆ.

ಕಾವೇರಿ ಕೂಗು; ಪುನೀತ್ ಜೊತೆ ಸದ್ಗುರು ಮಾತುಕತೆ

ವಾಘರಿ (ಗೋದಾವರಿ ನದಿಯ ಉಪನದಿ) ನದಿತೀರದ 54 ಕಿ.ಮೀ. ಪ್ರದೇಶದಲ್ಲಿ ಕಾರ‍್ಯರೂಪಕ್ಕೆ ಬಂದಿದೆ. ವಾಘರಿ ಮತ್ತು ಕಾವೇರಿ ಕೂಗು ಎರಡು ನಿರ್ದಿಷ್ಟನದಿಗಳ ಉಳಿವಿಗೆ ಕೈಗೊಂಡು ಹೋರಾಟ. ವಾಘರಿಗಿಂತ ಕಾವೇರಿ ದುಪ್ಪಟ್ಟು ಉದ್ದವಿರುವ ನದಿ. ಹಾಗಾಗಿ ಕಾವೇರಿ ಕೂಗು ಸರ್ಕಾರ, ರೈತರು ಮತ್ತು ನಮ್ಮ ನಡುವಿನ ಒಡಂಬಡಿಕೆಯಾಗಿದೆ.

ಕಾವೇರಿ ಕೂಗು ಅಭಿಯಾನವನ್ನು ಕಾರ‍್ಯಗತ ಮಾಡಿಯೇ ಮಾಡುತ್ತೇವೆ ಎಂಬುದು ಸ್ಪಷ್ಟ. ಇಸ್ರೋದ ಮಾಜಿ ಅಧ್ಯಕರು, ವರ್ಡ್‌ ವೈಡ್‌ ಫಂಡ್‌ ಫಾರ್‌ ನೇಚರ್‌-ಇಂಡಿಯಾ ಸಿಇಒ, ಸುಪ್ರೀಂಕೋರ್ಟ್‌ನ ಮಾಜಿ ನ್ಯಾಯಮೂರ್ತಿ, ಬಯೋಕಾನ್‌ ಲಿ. ಅಧ್ಯಕ್ಷರು, ದೇಶದ ಪ್ರಮುಖ ನೀರಾವರಿ ತಜ್ಞರು ಮತ್ತು ಫಾರ್ಮರ್‌ ಪ್ರೊಡ್ಯೂಸರ್‌ ಆರ್ಗನೈಶನ್‌ ಮೂವ್‌ಮೆಂಟ್‌ ಸಂಸ್ಥಾಪಕರನ್ನು ಒಳಗೊಂಡ ಸಮಿತಿ ರಚಿಸಿ ಮಾತುಕತೆ ನಡೆಸಿದ್ದೇವೆ. ಇದು ದೇಶದ ಅತ್ಯುತ್ಕೃಷ್ಟಜನರನ್ನು ಹೊಂದಿರುವ ಸಮಿತಿ. ಹಾಗೆಯೇ ನಮ್ಮೊಂದಿಗೆ ಸಾವಿರಾರು ಸ್ವಯಂಸೇವಕರು ಕೈಜೋಡಿಸುವ ಭರವಸೆ ನೀಡಿದ್ದಾರೆ. ಹಾಗಾಗಿ ಈ ಅಭಿಯಾನವು ಸುಸಜ್ಜಿತವಾಗಿ ಕಾರ‍್ಯರೂಪಕ್ಕೆ ಬರುವಂತೆ ಮಾಡಿಯೇ ಮಾಡುತ್ತೇವೆ.

ಸರ್ಕಾರದ ಬೆಂಬಲ ಅತ್ಯಗತ್ಯ

ಸರ್ಕಾರ ನಮ್ಮ ರೈತರಿಗೆ ಪ್ರೋತ್ಸಾಹ ನೀಡಿದಿದ್ದರೆ ಈ ಅಭಿಯಾನ ಫಲ ನೀಡದು. ಕರ್ನಾಟಕ ಸರ್ಕಾರ ಮತ್ತು ತಮಿಳುನಾಡು ಸರ್ಕಾರಗಳು ಸಹಕಾರ ನೀಡುವ ಭರವಸೆ ನೀಡಿವೆ. ಇದಕ್ಕೆ ಸರ್ಕಾರ ನೀಡಬೇಕಾದ ಆರ್ಥಿಕ ಸಹಕಾರವು ತೀರಾ ಚಿಕ್ಕದಾಗಿದೆ. ಹಲವು ಮೂಲಗಳಿಂದ ಈಗಾಗಲೇ ಸಾಕಷ್ಟುಹಣ ಹರಿದುಬಂದಿದೆ. ಆದರೆ ಅದನ್ನು ಮರುಹಂಚಿಕೆ ಮಾಡಬೇಕಷ್ಟೆ.

ಜೀವನದಿ ಉಳಿವಿಗೆ ‘ಕಾವೇರಿ ಕೂಗು’; ನೀವೇನು ಮಾಡ್ಬಹುದು?

ಕಾವೇರಿ ಕೂಗು ಬರೀ ನದಿ ಉಳಿವಿಗೆ ನಡೆಸುತ್ತಿರುವ ಆಂದೋಲನವಲ್ಲ. ಇದರಿಂದ ರೈತರ ಆದಾಯವೂ ದ್ವಿಗುಣವಾಗಲಿದೆ. ದೇಶದ ಪಾರಿಸರಿಕ ವ್ಯವಸ್ಥೆಯೂ ಪರಿಸರ ಸ್ನೇಹಿಯಾಗಲಿದೆ. ಕಾವೇರಿ ಅದರ ಮೊದಲ ಹೆಜ್ಜೆ. ಕಾವೇರಿ ನದಿ ತೀರದಲ್ಲಿ ಕಾಡು ಬೆಳಸುವ ಈ ಅಭಿಯಾನಕ್ಕೆ ಮುಂದಿನ 12 ವರ್ಷದಲ್ಲಿ ಯಶಸ್ಸು ದೊರೆತರೆ ಇದು ಭಾರತ ಮತ್ತು ಜಗತ್ತಿನ ಗೇಮ್‌ ಚೇಂಜರ್‌ ಎಂದೆನಿಸಿಕೊಳ್ಳಲಿದೆ.

ನದಿಗಳ ವಿಷಯಕ್ಕೆ ಬಂದರೆ ನಾವೆಲ್ಲರೂ ದಬ್ಬಾಳಿಕೆಕಾರರು. ಈ ನಾಶಕ್ಕೆ ನಾವೆಲ್ಲರೂ ಕಾರಣಕರ್ತರು. ಹಾಗಾಗಿ ಸ್ವಾತಂತ್ರ್ಯ ಹೋರಾಟಕ್ಕಿಂತ ದೊಡ್ಡ ಮಟ್ಟದ ಹೋರಾಟದ ಅಗತ್ಯವಿದೆ. ಏಕೆಂದರೆ ಇಲ್ಲಿ ಶತ್ರುಗಳು ನಾವೇ. ಹಾಗಾಗಿ ಈ ಹೋರಾಟಕ್ಕೆ ಹೆಚ್ಚೆಚ್ಚು ಶ್ರಮ, ಪ್ರಾಮಾಣಿಕತೆ, ವಿಧೇಯತೆ, ಛಲ ಬೇಕು.

ಏಕೆಂದರೆ ನಮ್ಮೊಳಗಿರುವ ಶತ್ರು ಅಷ್ಟುಸುಲಭವಾಗಿ ತೊಲಗುವುದಿಲ್ಲ. 50 ವರ್ಷದ ಹಿಂದೆ ನಾನು ನೋಡಿದ ಕಾವೇರಿ ಸ್ವಚ್ಛಂದವಾಗಿ ಹರಿಯುತ್ತಿದ್ದಳು. ಮುಂದಿನ 25 ವರ್ಷದಲ್ಲಿ ನಮ್ಮ ಮುಂದಿನ ಪೀಳಿಗೆಗೆ ಅಂಥದ್ದೇ ಕಾವೇರಿಯನ್ನು ನಾವು ನೀಡಬೇಕು.

- ಸದ್ಗುರು ಜಗ್ಗಿ ವಾಸುದೇವ್

click me!