ಮಾತು ಮರೆತ ಸರ್ಕಾರ; ಸಿಎಂ ವಿರುದ್ಧ ತಿರುಗಿಬಿದ್ದ ಸಾಲುಮರದ ತಿಮ್ಮಕ್ಕ

By Suvarna Web DeskFirst Published Jan 11, 2018, 9:21 AM IST
Highlights

ಈ ಹಿಂದೆ ಜೀವನಕ್ಕಾಗಿ 10 ಎಕರೆ ಜಮೀನು ಹಾಗೂ 5 ಕೊಟಿ ಪರಿಹಾರ ನೀಡೋದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ ಇದುವರೆಗೂ ಆ ಭರವಸೆಗಳನ್ನು ಈಡೇರಿಲ್ಲ.

ಬೆಂಗಳೂರು(ಜ.11):ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಸಾಲು ಮರದ ತಿಮ್ಮಕ್ಕ ಗರಂ ಆಗಿದ್ದಾರೆ. ಹುಸಿ ಭರವಸೆ ನೀಡಿದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಈ ಮೊದಲು ಸರ್ಕಾರ ವೈದ್ಯಕೀಯ ವೆಚ್ಚದ ಹೆಸರಿನಲ್ಲಿ ಭರಿಸಿದ್ದ ಹತ್ತು ಲಕ್ಷ ರೂಪಾಯಿ ಹಣವನ್ನು ಸಾಲು ಮರದ ತಿಮ್ಮಕ್ಕ ವಾಪಾಸ್ ನೀಡಲು ಮುಂದಾಗಿದ್ದು, ಈ ಕಾರಣಕ್ಕಾಗಿ ಸರ್ಕಾರ ಪತ್ರ ಬರೆದಿದ್ದಾರೆ. ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ತಿಮ್ಮಕ್ಕನಿಗೆ ಸರ್ಕಾರ ವೈದ್ಯಕೀಯ ವೆಚ್ಚ ಭರಿಸೋದಾಗಿ ಹೇಳಿತ್ತು.

ಈ ಹಿಂದೆ ಜೀವನಕ್ಕಾಗಿ 10 ಎಕರೆ ಜಮೀನು ಹಾಗೂ 5 ಕೊಟಿ ಪರಿಹಾರ ನೀಡೋದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ ಇದುವರೆಗೂ ಆ ಭರವಸೆಗಳನ್ನು ಈಡೇರಿಲ್ಲ. ಇತ್ತೀಚೆಗೆ ಅಂದರೆ ಅಕ್ಟೋಬರ್ 29 ರಂದು ಸಾಲು ಮರದ ತಿಮ್ಮಕ್ಕನನ್ನು ಸಿಎಂ ಕರೆಸಿ 10 ಲಕ್ಷ ವೈದ್ಯಕೀಯ ವೆಚ್ಚ ಅಂತಾ ಪರಿಹಾರ ಧನ ನೀಡಿದ್ದರು. ಅದರ ಜೊತೆಗೆ ಎಲ್ಲಾ ಭರವಸೆಗಳನ್ನು ಈಡೇರುಸೋದಾಗಿ ಹೇಳಿದ್ದರು. ಇದುವರೆಗೂ ಚೆಕ್ ಹೊರತುಪಡಿಸಿ ಉಳಿದ ಭರವಸೆಯನ್ನು ಸರ್ಕಾರ ಈಡೇರಿಸಿಲ್ಲ.

ಎರಡು ತಿಂಗಳಲ್ಲಿ 4 ಬಾರಿ ಆಸ್ಫತ್ರೆಗೆ ದಾಖಲಾಗಿದ್ದೆ ಆಗ ಸಂಸದ ರಾಜೀವ್ ಚಂದ್ರಶೇಖರ್ ಖದ್ದು ಬಂದು ಆಸ್ಫತ್ರೆಯ ವೆಚ್ಚ ಭರಿಸಿದ್ದಾರೆ. ನನಗೆ ವೃದ್ಧಾಪ್ಯ ವೇತನವೂ ಬೇಡ . ನಾನು ಕಳೆದ 3 ತಿಂಗಳಿನಿಂದ ವೃದ್ದಾಪ್ಯ ವೇತನವನ್ನೂ ಸ್ವೀಕರಿಸಿಲ್ಲ. ಮುಂದೆಯೂ ವೃದ್ದಾಪ್ಯ ವೇತನದ ಅವಶ್ಯಕತೆಯಿಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.   

click me!