
ಒಡಿಶಾ(ಜ.11): ದಶರಥ ಮಾಂಝೀ ಎಂಬ ಬಿಹಾರದ ಸಾಹಸಿಯೊಬ್ಬರು ತನ್ನ ಹೆಂಡತಿಗೆ ಬಂದ ಸಾವು ಇನ್ಯಾರಿಗೂ ಬರದೇ ಇರಲಿ ಎನ್ನುವ ಕಾರಣಕ್ಕೆ ಸತತ 22 ವರ್ಷಗಳ ಕಾಲ ಬೆಟ್ಟವೊಂದು ಕಡಿದು ಗ್ರಾಮಕ್ಕೆ ರಸ್ತೆ ಮಾಡಿ ದೇಶಾದ್ಯಂತ ಸುದ್ದಿಯಾಗಿದ್ದರು.
ಇದೀಗ ಒಡಿಶಾದಲ್ಲಿ ಬಡ ಕಾರ್ಮಿಕನೊಬ್ಬ, ತನ್ನ ಮೂವರು ಮಕ್ಕಳು ಸುಲಭವಾಗಿ ಶಾಲೆಗೆ ಹೋಗಿ ಬರಲು ಅನುಕೂಲವಾಗಲಿ ಎಂಬುದಕ್ಕಾಗಿ ಗುಡ್ಡವೊಂದನ್ನು ಕಡಿದು 15 ಕಿ.ಮೀ ರಸ್ತೆ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ.
ಹೌದು, ಒಡಿಶಾದ ಗುಮ್ಸಾಹಿ ಗ್ರಾಮದಲ್ಲಿ ವಾಸವಾಗಿ ರುವ ಜಲಂದರ್ ನಾಯಕ್(45)ರ ಊರಲ್ಲಿ ಯಾವುದೇ ಶಾಲೆಗಳಿಲ್ಲ. ಕಂದಮಹಲ್ ಜಿಲ್ಲೆಯ ಫೂಲ್‌ಬನಿ ಪಟ್ಟಣದಲ್ಲಿ ಶಾಲೆಯಿದ್ದು, ಅಲ್ಲಿಗೆ ಹೋಗಲು 15ಕೀ.ಮೀ ಗುಡ್ಡಗಾಡು ಪ್ರದೇಶ ದಾಟಿ ಹೋಗಬೇಕು. ಆದರೆ ಅಲ್ಲಿಗೆ ತೆರಳಲು ಸೂಕ್ತ ರಸ್ತೆ ಅಥವಾ ಸಾರಿಗೆ ಸೌಲಭ್ಯಗಳಿಲ್ಲ. ಹೀಗಾಗಿ ತಮ್ಮ ಗ್ರಾಮದ ಮಕ್ಕಳು ಶಾಲೆಗೆ ಹೋಗಲು ನೆರವಾಗುವಂತೆ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ಅದಕ್ಕಾಗಿ ಕಳೆದ ಎರಡು ವರ್ಷಗಳಿಂದ ಸುತ್ತಿಗೆ ಮತ್ತು ಉಳಿ ಹಿಡಿದು ದಿನದ 8 ಗಂಟೆ ದುಡಿದು, ಬೆಟ್ಟದಲ್ಲಿ 8 ಕಿ.ಮೀ ರಸ್ತೆ ನಿರ್ಮಾಣ ಮಾಡಿದ್ದಾರೆ. ಜಲಂದರ್ ನಾಯಕ್ ಅವರ ನಿಸ್ವಾರ್ಥ ಕಾರ್ಯವೈಖರಿಗೆ ಇಲ್ಲಿನ ಜಿಲ್ಲಾಡಳಿತ ಮೆಚ್ಚುಗೆ ವ್ಯಕ್ತಪಡಿಸಿದೆ. ಅಲ್ಲದೆ, ಕಳೆದ ಎರಡು ವರ್ಷಗಳ ಕಾಲ ರಸ್ತೆ ನಿರ್ಮಾಣಕ್ಕಾಗಿ ದುಡಿದ ನಾಯಕ್‌ಗೆ ಎಂಜಿಎನ್‌ಆರ್‌ಇಜಿಎಸ್ ಯೋಜನೆಯಡಿ ಹಣ ಪಾವತಿಸಲಾಗುತ್ತದೆ ಎಂದು ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.