ಉಪಹಾರ್ ಅಗ್ನಿ ದುರಂತ: ಪ್ರಮುಖ ಆರೋಪಿ ಗೋಪಾಲ್ ಅನ್ಸಾಲ್ ಗೆ ಒಂದು ವರ್ಷ ಜೈಲು

By Suvarna Web DeskFirst Published Feb 9, 2017, 12:07 PM IST
Highlights

ನವದೆಹಲಿ (ಫೆ.09): ಉಪಹಾರ್ ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ 2015 ರಲ್ಲಿ ನೀಡಿದ್ದ ತೀರ್ಪನ್ನು ಮರುಪರಿಶೀಲಿಸಿದ ಸುಪ್ರೀಂಕೋರ್ಟ್ ಪ್ರಮುಖ ಆರೋಪಿ ಗೋಪಾಲ್ ಅನ್ಸಾಲ್ ಗೆ ಒಂದು ವರ್ಷ ಜೈಲುಶಿಕ್ಷೆಯನ್ನು ವಿಧಿಸಿದೆ.

ನವದೆಹಲಿ (ಫೆ.09): ಉಪಹಾರ್ ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ 2015 ರಲ್ಲಿ ನೀಡಿದ್ದ ತೀರ್ಪನ್ನು ಮರುಪರಿಶೀಲಿಸಿದ ಸುಪ್ರೀಂಕೋರ್ಟ್ ಪ್ರಮುಖ ಆರೋಪಿ ಗೋಪಾಲ್ ಅನ್ಸಾಲ್ ಗೆ ಒಂದು ವರ್ಷ ಜೈಲುಶಿಕ್ಷೆಯನ್ನು ವಿಧಿಸಿದೆ.

ನಾಲ್ಕು ವಾರದೊಳಗೆ ಶರಣಾಗುವಂತೆ ಅನ್ಸಾಲ್ ಗೆ ನ್ಯಾಯಾಲಯ ಹೇಳಿದೆ.

1997 ರಲ್ಲಿ ಗ್ರೀನ್ ಪಾರ್ಕ್ ಸಮೀಪದ ಉಪಹಾರ್ ಚಿತ್ರ ಮಂದಿರದಲ್ಲಿ 'ಬಾರ್ಡರ್' ಚಿತ್ರ ಪ್ರದರ್ಶನದ ವೇಳೆ ಅಗ್ನಿ ದುರಂತ ಸಂಭವಿಸಿ 59 ಮಂದಿ ಮೃತಪಟ್ಟಿದ್ದರು. ಸುಮಾರು 150 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ಗೋಪಾಲ್ ಅನ್ಸಾಲ್ ಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಆದರೆ ಇವರ ಸಹೋದರ ಸುಶೀಲಸ್ ಅನ್ಸಾಲ್ ಗೆ ವಯಸ್ಸಿನ ಆಧಾರದ ಮೇಲೆ ಶಿಕ್ಷೆಯ ಪ್ರಮಾಣವನ್ನು ಕಡಿತಗೊಳಿಸಿದೆ.   

click me!