ಕರುಣಾನಿಧಿ ಪ್ರತಿಮೆ ಲೋಕಾರ್ಪಣೆಗೊಳಿಸಿದ ಸೋನಿಯಾ ಗಾಂಧಿ

By Web DeskFirst Published 16, Dec 2018, 6:32 PM IST
Highlights

ಚೆನ್ನೈನ ಅರಿವಳಯಂನಲ್ಲಿರುವ ಪಕ್ಷದ ಪ್ರಧಾನ ಕಚೇರಿ ಆವರಣದಲ್ಲಿ ಅನಾವರಣ  ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಅವರು ಕರುಣಾನಿಧಿ ಪ್ರತಿಮೆ ಲೋಕಾರ್ಪಣೆ ಮಾಡಿದರು. 

ಚೆನ್ನೈ, [ಡಿ.16] ಮಾಜಿ ಮುಖ್ಯಮಂತ್ರಿ, ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) ಸ್ಥಾಪಕ ಎಂ ಕರುಣಾನಿಧಿ ಅವರ ಪ್ರತಿಮೆಯನ್ನು ಇಂದು [ಭಾನುವಾರ] ಅನಾವರಣಗೊಂಡಿದೆ.

ಚೆನ್ನೈನ ಅರಿವಳಯಂನಲ್ಲಿರುವ ಪಕ್ಷದ ಪ್ರಧಾನ ಕಚೇರಿ ಆವರಣದಲ್ಲಿ ಅನಾವರಣ  ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಕರುಣಾನಿಧಿ  ಪ್ರತಿಮೆ ಲೋಕಾರ್ಪಣೆ ಮಾಡಿದರು. 

ಕಳೆದ ಆಗಸ್ಟ್​ನಲ್ಲಿ 94 ವರ್ಷದ ಕರುಣಾನಿಧಿ ಇಹಲೋಕ ತ್ಯಜಿಸಿದ್ದರು. ಪ್ರತಿಮೆ ಲೋಕಾರ್ಪಣೆ  ಸಂದರ್ಭದಲ್ಲಿ ಕರುಣಾನಿಧಿ ಅವರ ಪುತ್ರ, ಪಕ್ಷದ ಹಾಲಿ ಅಧ್ಯಕ್ಷ ಸ್ಟಾಲಿನ್​ ಸೇರಿದಂತೆ ಅನೇಕ ರಾಜಕೀಯ ನಾಯಕರು, ಮತ್ತು ಚಿತ್ರ ತಾರೆಯರು ಉಪಸ್ಥಿತರಿದ್ದರು.

ಮುಖ್ಯವಾಗಿ ಮಹಾಘಟಬಂಧನ್​ ನ ಬಹುತೇಕ ಎಲ್ಲ ಪ್ರಮುಖ ನಾಯಕರು ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು

ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ವಿರೋಧಿ ಬಣಗಳನ್ನು ಒಗ್ಗೂಡಿಸಿ ಮಹಾಘಟಬಂಧನ್ ನಿರ್ಮಿಸಿರುವ ಕಾಂಗ್ರೆಸ್ ಗೆ ಡಿಎಂಕೆ ಕೂಡಾ ಬೆಂಬಲ ವ್ಯಕ್ತಪಡಿಸಿದೆ.

Last Updated 16, Dec 2018, 6:39 PM IST