'ಗಜ' ಬಳಿಕ ತಮಿಳುನಾಡಿಗೆ ಮತ್ತೆ ಚಂಡಮಾರುತದ ಶಾಕ್‌!

By Web DeskFirst Published Dec 16, 2018, 12:09 PM IST
Highlights

ಈಗಾಗಲೇ ಗಜ ಚಂಡಮಾರುತದಿಂದ ಸಾಕಷ್ಟು ಸಂಕಷ್ಟ ಅನುಭವಿಸಿರುವ ತಮಿಳುನಾಡು ರಾಜ್ಯಕ್ಕೆ ಇದೀಗ ಮತ್ತೊಂದು ಚಂಡ ಮಾರುತದ ಭೀತಿ ಎದುರಾಗಿದೆ.

ಚೆನ್ನೈ[ಡಿ.16]: ಈಗಾಗಲೇ ಗಜ ಚಂಡಮಾರುತದಿಂದ ಸಾಕಷ್ಟುಸಂಕಷ್ಟಅನುಭವಿಸಿರುವ ತಮಿಳುನಾಡು ರಾಜ್ಯಕ್ಕೆ ಇದೀಗ ಮತ್ತೊಂದು ಚಂಡ ಮಾರುತದ ಭೀತಿ ಎದುರಾಗಿದೆ.

ಪೆಥಾಯ್‌ ಹೆಸರಿನ ಈ ಚಂಡಮಾರುತದ ಪರಿಣಾಮ ಆಂಧ್ರಪ್ರದೇಶದ ಕರಾವಳಿ ತೀರ ಹಾಗೂ ಉತ್ತರ ತಮಿಳನಾಡು ಮತ್ತು ಪುದುಚೇರಿ ಕರಾವಳಿ ಪ್ರದೇಶಗಳಲ್ಲಿ ಮುಂದಿನ ಎರಡು ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಅಲ್ಲದೆ, ಆಂಧ್ರಪ್ರದೇಶದ ಒಂಗೊಲೆ ಹಾಗೂ ಕಾಕಿನಾಡ ನಡುವಿನ ಪ್ರದೇಶಗಳಲ್ಲಿ ಭಾರೀ ಭೂಕುಸಿತವಾಗುವ ಭೀತಿ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಸದ್ಯ ಪ್ರತೀ ಗಂಟೆಗೆ 45-65 ಕಿ.ಮೀ ವೇಗವಾಗಿ ಬೀಸುತ್ತಿರುವ ಈ ಚಂಡಮಾರುತವು ಮುಂದಿನ 24 ಗಂಟೆಯಲ್ಲಿ ಮತ್ತಷ್ಟುತೀವ್ರತೆ ಪಡೆಯುವ ಸಾಧ್ಯತೆಯಿದೆ.

click me!