
ರಾಯ್ಪುರ[ಸೆ.22]: ಆತ ಪ್ರತಿದಿನವೂ ವ್ಯಾನಿನಲ್ಲಿ ಎಟಿಎಂಗೆ ಹಣ ಸಾಗಿಸುತ್ತಿದ್ದ. ಕಂತೆಗಟ್ಟಲೆ ಹಣ ಕಣ್ಣಿಗೆ ಕಂಡರೂ ಕೈಗೆ ಬಿಡಿಗಾಸು ಸಿಗುತ್ತಿರಲಿಲ್ಲ. ನಾಲ್ಕು ತಿಂಗಳಿನಿಂದ ಸಂಬಳ ನೀಡದೇ ಇದ್ದಿದ್ದರಿಂದ ಸಿಟ್ಟಾಗಿದ್ದ ಆತ ಹಣ ತುಂಬಿದ್ದ ವ್ಯಾನ್ ಅನ್ನೇ ಮನೆಗೆ ಒಯ್ದಿದ್ದಾನೆ. ಇಂಥದ್ದೊಂದು ವಿಚಿತ್ರ ಘಟನೆ ರಾಯ್ಪುರದಲ್ಲಿ ನಡೆದಿದೆ.
ಎಟಿಎಂಗೆ ಹಣ ಹಾಕುವ ಸಿಸ್ ಸಿಸ್ಕೋ ಸಂಸ್ಥೆಯ ವಾಹನ ಚಾಲಕನಾದ ಪೀತಾಂಬರ್ ದೇವಾಂಗನ್ ಎಂಬಾತ ಹಣದ ವ್ಯಾನ್ ಅಪಹರಿಸಿ, ಬಾಕಿ ಇರುವ ವೇತನ ಪಾವತಿಸಿದರೆ ವ್ಯಾನಿನ ಸಮೇತ ವಾಪಸ್ ಬರುವುದಾಗಿ ಬೆದರಿಕೆ ಹಾಕಿ ಮೊಬೈಲ್ ಸ್ವಿಚ್ ಆಫ್ ಮಾಡಿದ್ದ.
ಆದರೆ, ಜಿಪಿಎಸ್ ಅಳವಡಿಸಿದ್ದ ವ್ಯಾನ್ ಅನ್ನು ಸುಲಭವಾಗಿ ಪತ್ತೆ ಹಚ್ಚಿದ ಪೊಲೀಸರು ಆತನನ್ನು ಸೆರೆ ಹಿಡಿದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.