ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಮಾಸಿಕ 80000 ರು. ಬಂಪರ್‌ ಫೆಲೋಶಿಪ್‌

By Suvarna Web DeskFirst Published Feb 10, 2018, 10:52 AM IST
Highlights

ದೇಶದಲ್ಲಿರುವ ಪ್ರತಿಷ್ಠಿತ ಉನ್ನತ ಶಿಕ್ಷಣ ಸಂಸ್ಥೆಗಳಾದ ಐಐಟಿ, ಐಐಎಸ್‌ಸಿ ಮತ್ತು ಎನ್‌ಐಟಿಗಳಲ್ಲಿ ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಮಾಸಿಕ 80000 ರು.ವರೆಗೆ ಫೆಲೋಶಿಪ್‌ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.

ನವದೆಹಲಿ: ದೇಶದಲ್ಲಿರುವ ಪ್ರತಿಷ್ಠಿತ ಉನ್ನತ ಶಿಕ್ಷಣ ಸಂಸ್ಥೆಗಳಾದ ಐಐಟಿ, ಐಐಎಸ್‌ಸಿ ಮತ್ತು ಎನ್‌ಐಟಿಗಳಲ್ಲಿ ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಮಾಸಿಕ 80000 ರು.ವರೆಗೆ ಫೆಲೋಶಿಪ್‌ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.

ಪ್ರತಿಭಾವಂತ ವಿದ್ಯಾರ್ಥಿಗಳು ಸಂಶೋಧನೆಗೆಂದು ವಿದೇಶಕ್ಕೆ ತೆರಳುವ ಪರಿಪಾಠಕ್ಕೆ ಬ್ರೇಕ್‌ ಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ‘ಪ್ರಧಾನಿ ಸಂಶೋಧನಾ ಫೆಲೋಶಿಪ್‌’ ಯೋಜನೆ ರೂಪಿಸಿದೆ. ಬಜೆಟ್‌ನಲ್ಲಿ ಈ ಘೋಷಿಸಲಾಗಿತ್ತಾದರೂ, ಇದೀಗ ಫೆಲೋಶಿಪ್‌ನ ಮೊತ್ತ ಪ್ರಕಟಿಸಲಾಗಿದೆ.

ಇದರ ಪ್ರಕಾರ ಈ ಪ್ರತಿಷ್ಠಿತ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಪಿಎಚ್‌ಡಿ ಆಕಾಂಕ್ಷಿಗಳಿಗೆ ಪ್ರತಿ ತಿಂಗಳು 70 ಸಾವಿರ ರು.ನಿಂದ 80 ಸಾವಿರ ರು.ವರೆಗೂ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಅಲ್ಲದೆ, ಐದು ವರ್ಷಗಳ ವಿದ್ಯಾಭ್ಯಾಸದ ವೇಳೆ ಯಾವುದೇ ವಿಷಯದ ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಬಂಧ ಮಂಡಿಸಲು ವಿದೇಶಕ್ಕೆ ತೆರಳಲು ಸಂಶೋಧನಾ ವಿದ್ಯಾರ್ಥಿಗಳಿಗೆ 2 ಲಕ್ಷ ರು.ವರೆಗೂ ನೀಡುವ ಪ್ರಸ್ತಾಪನೆಯನ್ನು ಕೇಂದ್ರ ಸರ್ಕಾರ ಅನುಮೋದಿಸಿದೆ.

ಇದಕ್ಕಾಗಿಯೇ ಮುಂದಿನ ಮೂರು ವರ್ಷಗಳ ಕಾಲ ಕೇಂದ್ರ ಸರ್ಕಾರ 1650 ಕೋಟಿ ರು. ಅನ್ನು ಬಿಡುಗಡೆ ಮಾಡಿದೆ.

 

click me!