
ಬೆಂಗಳೂರು (ಫೆ.10): ಮಠಗಳನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳುವ ಬಗ್ಗೆ ಸುತ್ತೋಲೆ ಹೊರಡಿಸಿ ದ ಮುಜರಾಯಿ ಸಚಿವರ ವಿರುದ್ಧ ಸ್ವತಃ ಮುಖ್ಯಮಂತ್ರಿಯವರೇ ಅಸಮಾಧಾನ ವ್ಯಕ್ತಪಡಿಸಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ನಾವೇ ಮಠಗಳನ್ನು ಸ್ಥಾಪಿಸಿದವರು. ಅಂಥದರಲ್ಲಿ ಮಠ, ದೇವಸ್ಥಾನಗಳನ್ನು ನಾವ್ಯಾಕೆ ಸ್ವಾಧೀನಪಡಿಸಿಕೊಳ್ಳೋಣ? ನನ್ನ ವಿರುದ್ಧ ಬಿಜೆಪಿಯವರು ವ್ಯವಸ್ಥಿತ ಅಪಪ್ರಚಾರ ನಡೆಸಿದ್ದಾರೆ. ಮುಜ ರಾಯಿ ಸಚಿವರ ಕೆಲಸದಿಂದ ಸರ್ಕಾರ ಮುಜುಗರಕ್ಕೀಡಾಗುವಂತಾಗಿದೆ ಎಂದರು. ಈ ವೇಳೆ ಎದ್ದು ನಿಂತ ಮುಜರಾಯಿ ಸಚಿವರು ರುದ್ರಪ್ಪ ಲಮಾಣಿಗೆ ‘ಕೂತ್ಕೋ... ಕೂತ್ಕೋ...’ ಎಂದು ಸಿದ್ದರಾಮಯ್ಯ ಅವರು ಕೈ ಸಂಜ್ಞೆ ಮಾಡಿದರು.
ಬಿಜೆಪಿ-ಜೆಡಿಎಸ್ ದೋಸ್ತಿ ಸರ್ಕಾರದಲ್ಲಿ ಮುಜರಾಯಿ ಸಚಿವರೂ ಆಗಿದ್ದ ಡಾ.ವಿ.ಎಸ್ ಆಚಾರ್ಯ ಇದೇ ರೀತಿಯ ಪ್ರಕಟಣೆ ಹೊರಡಿಸಿದರು. ಅದೇ ಪ್ರಕಟಣೆಯನ್ನು ಈಗ ಮುಜರಾಯಿ ಸಚಿವ ರು ದ್ರಪ೩ ಲಮಾಣಿ ಹೊರಡಿಸಿ, ಸಾರ್ವಜನಿಕರ ಅಭಿಪ್ರಾಯ ಕೇಳಿ ಮುಜುಗರ ತಂದಿಟ್ಟಿದ್ದಾರೆ. ದಿವಂಗತ ಎಸ್. ನಿಜಲಿಂಗಪ್ಪ, ದೇವರಾಜ ಅರಸು ನಂತರ 5 ವರ್ಷದ ಅವಧಿ ಪೂರೈಸುತ್ತಿರುವ ಏಕೈಕ ಮುಖ್ಯಮಂತ್ರಿ ನಾನೇ. ಇದನ್ನು ಸಹಿಸಿಕೊಳ್ಳಲಾಗದ ಬಿಜೆಪಿಯವರು ತಮ್ಮ ವಿರುದ್ಧ ಮಿಥ್ಯಾರೋಪ, ಅಪಪ್ರಚಾರ ನಡೆಸಿದ್ದಾರೆ. ಮಠ ಸ್ಥಾಪಿಸಿ ವನೇ ನಾನು. ನಾನು ಮಠಗಳನ್ನು, ದೇವಸ್ಥಾನಗಳನ್ನು ಸ್ವಾಧೀನಪಡಿಸಿಕೊಳ್ಳುತ್ತೀನಾ ಎಂದು ಜನರಿಗೆ ಪ್ರಶ್ನಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.