ಪ್ರಯೋಗಾಲಯದಲ್ಲಿ ಮಾನವ ಅಂಡಾಣು ಬೆಳೆದ ವಿಜ್ಞಾನಿಗಳು!

By Suvarna Web DeskFirst Published Feb 10, 2018, 10:39 AM IST
Highlights

ಇದೇ ಮೊದಲ ಬಾರಿ ಪ್ರಯೋಗಾಲಯದಲ್ಲಿ ಮಾನವ ಅಂಡಾಣು ಬೆಳೆಯುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಎಡಿನ್‌ಬರ್ಗ್‌ ವಿಶ್ವವಿದ್ಯಾಲಯದ ವಿಜ್ಞಾನಿಗಳು ತಿಳಿಸಿದ್ದಾರೆ.

ಲಂಡನ್‌: ಇದೇ ಮೊದಲ ಬಾರಿ ಪ್ರಯೋಗಾಲಯದಲ್ಲಿ ಮಾನವ ಅಂಡಾಣು ಬೆಳೆಯುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಎಡಿನ್‌ಬರ್ಗ್‌ ವಿಶ್ವವಿದ್ಯಾಲಯದ ವಿಜ್ಞಾನಿಗಳು ತಿಳಿಸಿದ್ದಾರೆ. ಇದು ಗರ್ಭಧಾರಣೆಗೆ ಸಂಬಂಧಿಸಿದ ಚಿಕಿತ್ಸೆಗೆ ಹೆಚ್ಚಿನ ಅನುಕೂಲವನ್ನುಂಟು ಮಾಡಿಕೊಡಲಿದೆ ಎಂದು ನಿರೀಕ್ಷಿಸಲಾಗಿದೆ. ಮಾನವ ಅಂಡಾಣು ಹೇಗೆ ಅಭಿವೃದ್ಧಿ ಹೊಂದುತ್ತದೆ? ಎಂಬ ಬಗ್ಗೆ ತಿಳಿಯಲು ಇದು ಸಹಾಯ ಮಾಡುತ್ತದೆ.

ಅಲ್ಲದೆ, ಅಕಾಲಿಕ ಗರ್ಭಪಾತದ ಅಪಾಯವನ್ನು ಎದುರಿಸುವ ಮಹಿಳೆಯರಿಗೆ ಅಂಡಾಣು ಸಂರಕ್ಷಿಸಿಡುವ ಹೊಸ ವಿಧಾನವನ್ನು ಕಂಡುಕೊಳ್ಳುವುದಕ್ಕೆ ಸಾಧ್ಯವಾಗಲಿದೆ ಎಂದು ತಜ್ಞರು ಹೇಳಿದ್ದಾರೆ.

ಇದಕ್ಕೂ ಮೊದಲು ಇಲಿಗಳಲ್ಲಿ ಇದನ್ನು ಯಶಸ್ವಿಯಾಗಿ ಸಾಧಿಸಲಾಗಿತ್ತು, ಆದರೆ ಮಾನವ ಅಂಡಾಣುವಿನ ವಿಷಯದಲ್ಲಿ ಕಷ್ಟವಾಗಿತ್ತು. ಗುಣಮಟ್ಟದ ವಿಚಾರ ಪರೀಕ್ಷೆಗೊಳಪಡಬೇಕಾಗಿದೆ. ಆದರೆ, ವೈದ್ಯಕೀಯ ಬಳಕೆಯ ಹೊರತಾಗಿ, ಮಾನವ ಅಂಡಾಣು ಅಭಿವೃದ್ಧಿಯನ್ನು ಅರ್ಥೈಸಿಕೊಳ್ಳುವಲ್ಲಿ ಇದೊಂದು ಮಹತ್ವದ ಮೈಲಿಗಲ್ಲು ಎಂದು ಸಂಶೋಧಕ ಪ್ರೊ. ಎವ್ಲಿನ್‌ ಟೆಲ್ಫರ್‌ ತಿಳಿಸಿದ್ದಾರೆ.

 

click me!