ಏಕರೂಪ ನಾಗರಿಕ ಸಂಹಿತೆ ಅಸಾಧ್ಯ: ದೇವೆಗೌಡ

By Suvarna Web DeskFirst Published Oct 31, 2016, 7:05 AM IST
Highlights

ಭಾರತದಲ್ಲಿ ಎಲ್ಲರೂ ಅವರವರ ಧರ್ಮಗಳ ಅನುಸಾರ ಜೀವನ ನಡೆಸುತ್ತಿದ್ದು, ಸಂಹಿತೆ ಜಾರಿಗೆ ತರವುದು ಸರಿಯಲ್ಲ ಎಂದು ದೇವೆಗೌಡ ಹೇಳಿದರು.

ಬೆಂಗಳೂರು (ಅ.31):  ಬಹುಸಂಸ್ಕೃತಿಗಳನ್ನು ಒಳಗೊಂಡಿರುವ ನಮ್ಮ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲು ಸಾಧ್ಯವಿಲ್ಲ. ಇದನ್ನು ಜಾರಿಗೆ ತರಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೆಗೌಡ ಸ್ಪಷ್ಟವಾಗಿ ತಿಳಿಸಿದ್ದಾರೆ.

ಬ್ಯಾರೀಸ್‌ ವೆಲ್ಪೇರ್‌ ಅಸೋಸಿಯೇಷನ್‌ ಶನಿವಾರ ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ವರ್ಷದ ಬ್ಯಾರಿ ಪ್ರಶಸ್ತಿ ಪ್ರದಾನ ಸಮಾರಂಭ ದಲ್ಲಿ ಮಾತನಾಡಿ, ಭಾರತದಲ್ಲಿ ಎಲ್ಲರೂ ಅವರವರ ಧರ್ಮಗಳ ಅನುಸಾರ ಜೀವನ ನಡೆಸುತ್ತಿದ್ದು, ಸಂಹಿತೆ ಜಾರಿಗೆ ತರವುದು ಸರಿಯಲ್ಲ ಎಂದು ಹೇಳಿದರು.

ಬ್ಯಾರಿ ಮುಸ್ಲಿಮರು ಶಿಕ್ಷಣ, ವ್ಯಾಪಾರ ಸೇರಿ ಹಲ​ವಾರು ಕ್ಷೇತ್ರಗಳಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದಾರೆ. ವಿಶೇಷವಾಗಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿ​ರುವುದು ಸ್ವಾಗ​ತಾ​ರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

click me!