ಉರಿ ದಾಳಿ ಖಂಡಿಸಿದ  ವಿಶ್ವಸಂಸ್ಥೆ

By Internet DeskFirst Published Sep 19, 2016, 4:05 PM IST
Highlights

ನ್ಯೂಯಾರ್ಕ್ (ಸೆ.19): ಜಮ್ಮು-ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ ಸೇನಾ ಪ್ರಧಾನ ಕಚೇರಿ ಮೇಲೆ ನಡೆದಿರುವ ಭಯೋತ್ಪಾದಕ ದಾಳಿಯನ್ನು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾನ್-ಕಿ-ಮೂನ್ ಖಂಡಿಸಿದ್ದಾರೆ.

ಸೈನಿಕರ ಸಾವಿಗೆ ಕಾರಣರಾಗಿರುವ ಭಯೋತ್ಪಾದಕರಿಗೆ ತಕ್ಕ ಶಿಕ್ಷೆ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.

Latest Videos

ಕಾಶ್ಮೀರದಲ್ಲಿ 18 ಸೈನಿಕರ ಹತ್ಯೆಗೆ ಕಾರಣವಾದ ಭಯೋತ್ಪಾದಕ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಸಹ ಖಂಡಿಸಿದ್ದು, ಸೈನಿಕರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ. ದಾಳಿ ನಡೆಸಿದವರಿಗೆ ಸಿಗಬೇಕಾದ ಶಿಕ್ಷೆಯನ್ನು ನೀಡುತ್ತೇವೆ ಎಂಬ ಮಾತುಗಳನ್ನಾಡಿದ್ದಾರೆ.

click me!