ಉಡುಪಿ ಪೇಜಾವರ ಮಠದ ಗೌರವ ಕಾರ್ಯದರ್ಶಿ ಹಾಗೂ ಎರಡೂವರೆ ದಶಕದಿಂದ ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕರ್ನಾಟಕದ ಡಿ.ಪಿ. ಅನಂತ ಅವರು ವಿಶ್ವಪ್ರಸಿದ್ಧ ತಿರುಮಲ ತಿರುಪತಿ ದೇವಸ್ಥಾನ ಮಂಡಳಿಯ ಸದಸ್ಯರಾಗಿ ನೇಮಕಗೊಂಡಿದ್ದಾರೆ.
ಬೆಂಗಳೂರು (ಸೆ. 20): ಉಡುಪಿ ಪೇಜಾವರ ಮಠದ ಗೌರವ ಕಾರ್ಯದರ್ಶಿ ಹಾಗೂ ಎರಡೂವರೆ ದಶಕದಿಂದ ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕರ್ನಾಟಕದ ಡಿ.ಪಿ. ಅನಂತ ಅವರು ವಿಶ್ವಪ್ರಸಿದ್ಧ ತಿರುಮಲ ತಿರುಪತಿ ದೇವಸ್ಥಾನ ಮಂಡಳಿಯ ಸದಸ್ಯರಾಗಿ ನೇಮಕಗೊಂಡಿದ್ದಾರೆ.
ಆಂಧ್ರಪ್ರದೇಶ ಸರ್ಕಾರವು ತಿರುಮಲ ತಿರುಪತಿ ದೇವಸ್ಥಾನ ಮಂಡಳಿಗೆ (ಟಿಟಿಡಿ) ನೂತನ ಸದಸ್ಯರನ್ನು ನೇಮಕ ಮಾಡಿ ಸೆ.18ರಂದು ಬುಧವಾರ ಆದೇಶ ಹೊರಡಿಸಿದೆ. ವೈ.ವಿ. ಸುಬ್ಬಾರೆಡ್ಡಿ ಅವರ ಅಧ್ಯಕ್ಷತೆಯ ಬೋರ್ಡ್ ಆಫ್ ಟ್ರಸ್ಟಿಯ ಸದಸ್ಯರಾಗಿ ಬೆಂಗಳೂರಿನ ಡಿ.ಪಿ. ಅನಂತ ಅವರು ಎರಡನೇ ಬಾರಿಗೆ ನೇಮಕಗೊಂಡಿದ್ದಾರೆ. ಅನಂತ ಅವರು 2015-17ರ ಅವಧಿಯಲ್ಲೂ ಟಿಟಿಡಿ ಮಂಡಳಿ ಸದಸ್ಯರಾಗಿದ್ದರು.
ಶ್ರೀ ರಂಗಪಟ್ಟಣ : ಅವಸಾನದ ಅಂಚಿಗೆ ಐತಿಹಾಸಿಕ ಕೋಟೆ
ತಿರುಪತಿಯ ರಾಷ್ಟ್ರೀಯ ಸಂಸ್ಕೃತಿ ವಿದ್ಯಾಪೀಠದ ವಿಶ್ರಾಂತ ಕುಲಪತಿ ಪ್ರೊ.ಡಿ.ಪ್ರಹ್ಲಾದಾಚಾರ್ ಅವರ ಪುತ್ರರಾದ ಡಿ.ಪಿ. ಅನಂತ ಅವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂ.ಎ. ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಿದರು. ಬಳಿಕ ಯಶಸ್ವಿ ಉದ್ಯಮಿಯಾಗಿಯೂ ಗುರುತಿಸಿಕೊಂಡಿರುವ ಅವರು ಪೇಜಾವರ ಸ್ವಾಮೀಜಿ ಅವರ ಆಧ್ಯಾತ್ಮಿಕ ಶಿಷ್ಯರು.
ಬಳಿಕ ಆಧ್ಯಾತ್ಮಿಕ ಕ್ಷೇತ್ರದಲ್ಲಿ ವಿಶಿಷ್ಟಕೊಡುಗೆ ಸಲ್ಲಿಸುತ್ತಿರುವ ಅವರು ಹಲವು ಮಹತ್ವದ ಹುದ್ದೆಗಳಲ್ಲಿ, ಸಮಿತಿಗಳಲ್ಲಿ ಜವಾಬ್ದಾರಿ ನಿಭಾಯಿಸಿದ್ದರು. ಪ್ರಸ್ತುತ ಪೇಜಾವರ ಮಠದ ಗೌರವ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಪೇಜಾವರ ಶ್ರೀಗಳಿಗೆ ರಾಷ್ಟ್ರಪತಿ, ಪ್ರಧಾನಮಂತ್ರಿ ಸೇರಿದಂತೆ ಗಣ್ಯ ವ್ಯಕ್ತಿಗಳ ಭೇಟಿ ಆಯೋಜನೆ ಹಾಗೂ ಉಸ್ತುವಾರಿಯನ್ನು ಡಿ.ಪಿ. ಅನಂತ ಅವರು ನಿರ್ವಹಿಸುತ್ತಾರೆ.
ಶಿವಮೊಗ್ಗ : ಲೈಂಗಿಕ ಶೋಷಿತರ ಮಕ್ಕಳಿಗೆ ವಿವಿಯಲ್ಲಿ ಮೀಸಲಾತಿ
ಸುಧಾಮೂರ್ತಿ ಸೇರಿ 4 ಮಂದಿ ನೇಮಕ:
ರಾಜ್ಯದಿಂದ ಒಟ್ಟು ನಾಲ್ಕು ಮಂದಿ ಟಿಟಿಡಿ ಮಂಡಳಿಗೆ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಡಿ.ಪಿ. ಅನಂತ ಜತೆಗೆ ಇಸ್ಫೋಸಿಸ್ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರು ಹಾಗೂ ಲೇಖಕರಾದ ಸುಧಾ ನಾರಾಯಣಮೂರ್ತಿ ಹಾಗೂ ಸಂಪತ್ ರವಿ ನಾರಾಯಣ್, ರಮೇಶ ಶೆಟ್ಟಿಎಂಬುವರನ್ನು ನೇಮಕ ಮಾಡಿ ಆಂಧ್ರಪ್ರದೇಶ ಸರ್ಕಾರ ಆದೇಶ ಹೊರಡಿಸಿದೆ.