Fact Check: ಕಾಶ್ಮೀರದ ಕಾಡುನಾಶ ಮಾಡಿ, ಪೀಠೋಪಕರಣ ಮಾಡಿಸಿದ್ರಾ ಓಮರ್‌ ಅಬ್ದುಲ್ಲಾ?

By Web DeskFirst Published Sep 20, 2019, 12:31 PM IST
Highlights

ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್‌ ಅಬ್ದುಲ್ಲಾ ಖಾನ್‌ ಕಾಶ್ಮೀರದಲ್ಲಿದ್ದ ಕಾಡನ್ನೆಲ್ಲಾ ಸರ್ವನಾಶ ಮಾಡಿ, ತಮ್ಮ ಮನೆಗೆ ವೈಭವೋಪೇತ ಪೀಠೋಪಕರಣಗಳನ್ನು ಮಾಡಿಸಿಕೊಂಡಿದ್ದಾರೆ ಎನ್ನುವ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.  ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್‌ ಅಬ್ದುಲ್ಲಾ ಖಾನ್‌ ಕಾಶ್ಮೀರದಲ್ಲಿದ್ದ ಕಾಡನ್ನೆಲ್ಲಾ ಸರ್ವನಾಶ ಮಾಡಿ, ತಮ್ಮ ಮನೆಗೆ ವೈಭವೋಪೇತ ಪೀಠೋಪಕರಣಗಳನ್ನು ಮಾಡಿಸಿಕೊಂಡಿದ್ದಾರೆ ಎನ್ನುವ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ತರಹೇವಾರಿ ಶೈಲಿಯ ಮರದ ಡೈನಿಂಗ್‌ ಟೇಬಲ್‌, ಕಪಾಟು ಮತ್ತಿತರ ಫೋಟೋಗಳನ್ನು ಪೋಸ್ಟ್‌ ಮಾಡಲಾಗಿದೆ.

ಮೊದಲಿಗೆ ಫೇಸ್‌ಬುಕ್‌ನಲ್ಲಿ ಈ ಫೋಟೋಗಳನ್ನು ಪೋಸ್ಟ್‌ ಮಾಡಿ, ‘ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್‌ ಅಬ್ದುಲ್ಲಾ ಖಾನ್‌ ಅವರ ನಿವಾಸವಿದು. ಅಕ್ಷರಶಃ ಕಾಶ್ಮೀರದ ಕಾಡು ಪೂರ್ತಿ ಕಡಿದು ಮನೆಯನ್ನು ಅಲಂಕರಿಸಿಕೊಂಡಿದ್ದಾರೆ’ ಎನ್ನಲಾಗಿದೆ. ವಾಟ್ಸ್‌ಆ್ಯಪ್‌ನಲ್ಲೂ ಇದು ವೈರಲ್‌ ಆಗುತ್ತಿದೆ. ಅಲ್ಲದೆ ಓಮರ್‌ ಅಬ್ದುಲ್ಲಾ ಬಂಗ್ಲೋ ಗ್ಯಾನ್ಸ್‌ ಎಂಬ ಬ್ಲಾಗ್‌ನಲ್ಲೂ ಇವೇ ಫೋಟೋಗಳಿವೆ.

ಆದರೆ ನಿಜಕ್ಕೂ ಇವೆಲ್ಲಾ ಕಣಿವೆ ರಾಜ್ಯದ ಮಾಜಿ ಮುಖ್ಯಮಂತ್ರಿ ಮನೆಯವೇ ಎಂದು ಬೂಮ್‌ಲೈವ್‌ ಪರಿಶೀಲಿಸಿದಾಗ ಇದು ಸುಳ್ಳು ಸುದ್ದಿ ಎಂದು ತಿಳಿದುಬಂದಿದೆ. ಪ್ರಪಂಚದ ಅತ್ಯುತ್ತಮ ವಿನ್ಯಾಸದ ಪೀಠೋಪಕರಣಗಳನ್ನು ಎಂದು ಹಲವಾರು ವೆಬ್‌ಸೈಟ್‌ಗಳಲ್ಲಿ ಈ ರೀತಿಯ ಫೋಟೋಗಳಿವೆ.

ಇದರಲ್ಲಿ ಕೆಲವು ಅಮೆರಿಕ ಮೂಲದ ವಿನ್ಯಾಸಗಳಾಗಿವೆ. ಹೀಗೆ ಲಭ್ಯವಿರುವ ಅತ್ಯುತ್ತಮ ಪೀಠೋಪಕರಣಗಳ ವಿನ್ಯಾಸದ ಫೋಟೋಗಳನ್ನು ಬಳಸಿ ಅವು ಓಮರ್‌ ಅಬ್ದುಲ್ಲಾ ನಿವಾಸದ್ದು ಎಂದು ಸುಳ್ಳು ಸುದ್ದಿ ಹರಡಲಾಗುತ್ತಿದೆ.

 

ಜಮ್ಮು-ಕಾಶ್ಮೀರಕ್ಕೆ ಸಂವಿಧಾನದ ಕಲಂ-370 ಅಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಆಗಸ್ಟ್‌ 5ರಂದು ಕೇಂದ್ರ ಸರ್ಕಾರ ನಿಷ್ಕಿ್ರಯ ಮಾಡಿದೆ. ಅಲ್ಲಿನ ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಓಮರ್‌ ಅಬ್ದುಲ್ಲಾ ಸೇರಿದಂತೆ ಹಲವು ಪ್ರಮುಖ ರಾಜಕಾರಣಿಗಳನ್ನು ಕೇಂದ್ರ ಸರ್ಕಾರ ನ್ಯಾಯಾಂಗ ಬಂಧನದಲ್ಲಿಟ್ಟಿದೆ.

click me!