ಭಾಸ್ಕರ ಶೆಟ್ಟಿ ಹೋಮಕುಂಡ ಹತ್ಯೆ: ಉಡುಪಿ ಉದ್ಯಮಿ ಭಾಸ್ಕರ ಶೆಟ್ಟಿ ಹತ್ಯೆಗೆ ಮುಂಬೈ ಲಿಂಕ್!

By Internet DeskFirst Published Sep 25, 2016, 4:28 AM IST
Highlights

ಉಡುಪಿ(ಸೆ.25): ಉಡುಪಿಯ ಉದ್ಯಮಿ ಭಾಸ್ಕರ ಶೆಟ್ಟಿ ಹೋಮಕುಂಡ ಹತ್ಯೆ ಪ್ರಕರಣದ ತನಿಖೆಯಲ್ಲಿ ಸಿಐಡಿ ಪೊಲೀಸರು ಮಹತ್ವದ ಸಾಕ್ಷಿ ಕಲೆ ಹಾಕಿದ್ದಾರೆ. ಕೊಲೆ ಪ್ರಕರಣ ಸಂಬಂಧ ಪ್ರಬಲ ಸಾಕ್ಷಿಯಾಗಿ ವ್ಯಕ್ತಿಯೊಬ್ಬನಿಂದ ಹೇಳಿಕೆ ಪಡೆದಿದ್ದಾರೆ. ಈ ನಡುವೆ ಸಾಕ್ಷ್ಯ ನಾಶ ಆರೋಪ ಹೊತ್ತಿರುವ ವ್ಯಕ್ತಿಗಳ ಜಾಮೀನು ಅರ್ಜಿಯ ವಿಚಾರಣೆಯನ್ನು ಉಡುಪಿ ನ್ಯಾಯಾಲಯ ಮುಂದೂಡಿದೆ.

ಪಿಸ್ತೂಲ್ ಪ್ಲಾನ್ ಫ್ಲಾಪ್ ಆದ್ಮೇಲೆ ಹೋಮಕುಂಡ ಹತ್ಯೆ!

Latest Videos

ಬಹುಕೋಟಿ ‍ಒಡೆಯ ಉದ್ಯಮಿ ಭಾಸ್ಕರ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಸಿಐಡಿ ಪೊಲೀಸರಿಗೆ ಮಹತ್ವದ ಸಾಕ್ಷಿಯೊಂದು ಸಿಕ್ಕಿದೆ.. ಈ ಸಾಕ್ಷಿ ಹೋಮಕುಂಡ ಹತ್ಯೆ ಪ್ರಕರಣಕ್ಕೆ ಮುಂಬೈಗೆ ನಂಟು ಬೆಸೆದಿದೆ. ಭಾಸ್ಕರ ಶೆಟ್ಟಿ ಪತ್ನಿ ರಾಜೇಶ್ವರಿಯ ಪ್ರಿಯತಮ ಕಂ ಜ್ಯೋತಿಷಿ ನಿರಂಜನ ಭಟ್ಟ, ಮುಂಬೈನಲ್ಲಿ ನೆಲೆಸಿರುವ ಕಾರ್ಕಳ ಮೂಲದ ಸತೀಶ್ ಎಂಬಾತನನ್ನ ಸಂಪರ್ಕಿಸಿದ್ದ. ಸತೀಶನಿಂದ ಪಿಸ್ತೂಲು ಖರೀದಿಸಿ ಕೊಲ್ಲಲು ಪ್ಲಾನ್ ಮಾಡಿದ್ದ.. ಆದ್ರೆ, ಬಳಿಕ ಈ ಪ್ಲಾನ್ ಕೈಬಿಟ್ಟ ಕೊಲೆಗಾರರು, ಹೋಮಕುಂಡ ಹತ್ಯೆ ಪ್ಲಾನ್ ಮಾಡಿ ಕೊಲೆ ಹೊಣೆ ಹೊತ್ತುಕೊಳ್ಳುವಂತೆ ಬೆನ್ನುಬಿದ್ದಿದ್ದರಂತೆ. ಈ ವಿಷಯ ತನಿಖೆಯ ವೇಳೆ ಗೊತ್ತಾಗಿ, ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಸತೀಶ್ ಎಂಬಾತನಿಂದ ಹೇಳಿಕೆ ಪಡೆದಿದ್ದಾರೆ.

ಸಾಕ್ಷಿಗಳ ಜಾಮೀನು ಅರ್ಜಿ ವಿಚಾರಣೆ ಮುಂದಕ್ಕೆ

ಇನ್ನು, ಈ ಪ್ರಕರಣದಲ್ಲಿ ಸಾಕ್ಷ್ಯನಾಶ ಆರೋಪ ಎದುರಿಸುತ್ತಿರುವ ನಿರಂಜನ ಭಟ್ಟನ ತಂದೆ ಶ್ರೀನಿವಾಸ ಭಟ್ಟ ಮತ್ತು ಕಾರು ಚಾಲಕ ರಾಘವೇಂದ್ರನ ಜಾಮೀನು ಅರ್ಜಿ ವಿಚಾರಣೆಯನ್ನ ನ್ಯಾಯಾಲಯ ಸೆ.27ಕ್ಕೆ ಮುಂದೂಡಿದೆ. ಭಾಸ್ಕರ ಶೆಟ್ಟಿ ಪತ್ನಿ ರಾಜೇಶ್ವರಿಯನ್ನು ಸಿಐಡಿ ಕಸ್ಟಡಿಗೆ ಪಡೆಯಲು ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಈ ಆದೇಶದ ಪ್ರತಿಯನ್ನ ಶನಿವಾರ ಆರೋಪಿ ಪರ ವಕೀಲರು ನ್ಯಾಯಾಲಯಕ್ಕೆ ಮಂಡಿಸಬೇಕಾಗಿತ್ತು. ಆದರೆ, ಪೂರ್ಣ ಪಾಠ ಲಭ್ಯವಾಗದ ಕಾರಣ ಆದೇಶ ಪ್ರತಿ ಸಲ್ಲಿಸಲು ಅಕ್ಟೋಬರ್ 3 ರ ವರೆಗೆ ಅವಕಾಶ ನೀಡಲಾಗಿದೆ.. ಇನ್ನು, ತನಿಖೆ ಆರಂಭದಲ್ಲಿ ಭೃಷ್ಟಾಚಾರದ ಆರೋಪ ಎದುರಿಸಿದ್ದ ಮಣಿಪಾಲ ಇನ್ಸ್ಪೆಕ್ಟರ್ ಗಿರೀಶ್ ಅವರನ್ನು ಉಡುಪಿ ಜಿಲ್ಲೆಯಿಂದ ತುಮಕೂರಿಗೆ ವರ್ಗಾವಣೆ ಮಾಡಿ ಆದೇಶಿಸಲಾಗಿದೆ. ಈ ಮೂಲಕ ಭಾಸ್ಕರ ಶೆಟ್ಟಿ ಕುಟುಂಬದ ಬೇಡಿಕೆಯನ್ನು ಇಲಾಖೆ ಪರಿಗಣಿಸಿದೆ.

click me!