ಇಲ್ಲಿಗೂ ಬಂತು ಭೀಕರ ಚಂಡಮಾರುತ : ಜನಜೀವನ ತತ್ತರ

By Web DeskFirst Published Sep 17, 2018, 10:46 AM IST
Highlights

ಈ ವರ್ಷದಲ್ಲೇ ಅತ್ಯಂತ ಪ್ರಬಲ ಚಂಡ ಮಾರುತ ಇದೀಗ ಇಲ್ಲಿಯೂ ತನ್ನ ರುದ್ರ ನರ್ತನವನ್ನು ಆರಂಭಿಸಿದೆ. ಭಾರೀ ಚಂಡಮಾರುತದಿಂದ ಚೀನಾದಲ್ಲಿ 25 ಲಕ್ಷ ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿದೆ. 

ಬೀಜಿಂಗ್: ಈ ವರ್ಷದಲ್ಲೇ ಅತ್ಯಂತ ಪ್ರಬಲ ಚಂಡಮಾರುತ ಎಂದು ಪರಿಗಣಿಸಲ್ಪಟ್ಟಿರುವ ಮಂಗ್‌ಖೂಟ್ ಸೂಪರ್ ಟೈಫೂನ್, ಫಿಲಿಪ್ಪೀನ್ಸ್ ಬಳಿಕ ಈಗ ಚೀನಾ ತಲುಪಿದೆ. 

ಫಿಲಿಪ್ಪೀನ್‌ನಲ್ಲಿ 49 ಮಂದಿಯನ್ನು ಬಲಿ ಪಡೆದು, ಹಾಂಕಾಂಗ್‌ನಲ್ಲಿ ಸಾಕಷ್ಟು ನಷ್ಟವ ನ್ನುಂಟು ಮಾಡಿ, ದಕ್ಷಿಣ ಗುವಾಂಗ್‌ಡಂಗ್ ಪ್ರಾಂತ್ಯ ಪ್ರವೇಶಿಸಿರುವ ಚಂಡಮಾರುತಕ್ಕೆ ಚೀನಾ ತತ್ತರಿಸು ವಂತಾಗಿದೆ. ಈಗಾಗಲೇ ಪ್ರದೇಶದ 25 ಲಕ್ಷ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಸುಮಾರು 400 ವಿಮಾನಗಳ ಹಾರಾಟ ರದ್ದುಪಡಿಸ ಲಾಗಿದೆ. ಗುವಾಂಗ್‌ಡಂಗ್ ಪ್ರಾಂತ್ಯದ ಕರಾವಳಿ ನಗರ ಜಿಯಾಂಗ್‌ಮೆನ್‌ಗೆ ಭಾನು ವಾರ ಸಂಜೆ ಗಂಟೆಗೆ 162 ಕಿ.ಮೀ. ವೇಗದ ಚಂಡಮಾ ರುತ ಅಪ್ಪಳಿಸಿದೆ. ಹೀಗಾಗಿ ಸುಮಾರು 48,000 ಮೀನು ಗಾರಿಕೆಯ ದೋಣಿಗಳನ್ನು ದಡಕ್ಕೆ ವಾಪಾಸ್ ಕರೆಸಿಕೊ ಳ್ಳಲಾಗಿದೆ. ಸುಮಾರು 29,000 ಕನ್ಸ್‌ಟ್ರಕ್ಷನ್ ತಾಣಗಳಲ್ಲಿ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. 

click me!