
ಕಾಶ್ಮೀರ(ಜ.27): ಕಾಶ್ಮೀರದ ಗುರೇಜ್ ವಲಯದಲ್ಲಿ ಸಂಭವಿಸಿದ ಭಾರಿ ಹಿಮಪಾತದಲ್ಲಿ ಸಿಲುಕಿದ್ದ ಇಬ್ಬರು ಕನ್ನಡಿಗ ಯೋಧರು ಪವಾಡ ಸದೃಶವಾಗಿ ಬದುಕಿ ಬಂದಿದ್ದಾರೆ.
ಬೆಳಗಾವಿಯ ಯೋಧ ಮೇಜರ್ ಶ್ರೀಹರಿ ಕುಗಜಿ ಮತ್ತು ಬಂಡಿವಡ್ಡರ್ ಅವರ ಮೇಲೆ ಟನ್'ಗಟ್ಟಲೆ ಹಿಮದ ಗಡ್ಡೆಗಳು ಬಿದ್ದಿವೆ. ಹಿಮದಲ್ಲಿ ಹೂತು ಹೋಗಿ ಸಾವಿನ ದವಡೆಗೆ ಸಿಲುಕಿದ್ದ ಇಬ್ಬರನ್ನೂ ಯೋಧರು ಕಾರ್ಯಾಚರಣೆ ನಡೆಸಿ ರಕ್ಷಿಸಿ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.
ಬೆಳಗಾವಿಯ ಸೇನಾ ಬೆಟಾಲಿಯನ್'ನ ಮೇಜರ್ ಶ್ರೀಹರಿ ಕುಗಜಿ 115ನೇ ಮಹರ್ ಬೆಟಾಲಿಯನ್ 3 ತಿಂಗಳ ಹಿಂದೆಯಷ್ಟೇ ವರ್ಗಾವಣೆಯಾಗಿದ್ದರು. ಶ್ರೀಹರಿ ಅವರ ತಂದೆಯೂ ಸೇನೆಯಲ್ಲಿ ಸುಬೇದಾರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದು, ಸಹೋದರಿ ಪಂಕಜಾ ಅವರು ಮೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.