ಪ್ರವಾಸಿಗರ ಆಭರಣ ಮರಳಿಸಲು 70 ಕಿ.ಮೀ. ಪ್ರಯಾಣಿಸಿದ Pony keepers!

By Suvarna News  |  First Published Nov 23, 2021, 7:05 PM IST

ಕಾಶ್ಮೀರ ಪ್ರವಾಸದ ವೇಳೆ ಆಭರಣ ಕಳೆದುಕೊಂಡ ಸೂರತ್ ಮೂಲದ ಕುಟುಂಬಕ್ಕೆ ಆಭರಣ ಹಿಂತಿರುಗಿಸಲು ಕುದುರೆ ನೋಡಿಕೊಳ್ಳೋ ಯುವಕರಿಬ್ಬರು 70 ಕಿ.ಮೀ. ಪ್ರಯಾಣಿಸಿರೋ ಘಟನೆ ವರದಿಯಾಗಿದೆ.


ನವದೆಹಲಿ(ನ.23): ಕಳೆದು ಹೋದ ವಸ್ತುಗಳು ಮರಳಿ ಸಿಗುತ್ತವೆ ಎಂಬ ನಿರೀಕ್ಷೆ ಬಹುತೇಕರಿಗೆ ಇರೋದಿಲ್ಲ. ಅದ್ರಲ್ಲೂಆಭರಣಗಳಂತಹ (Ornaments) ಬೆಲೆಬಾಳೋ ವಸ್ತುಗಳು ಕಳೆದುಹೋದ್ರೆ ಮರಳಿ ಸಿಗೋದು ಕನಸಿನ ಮಾತೇ ಸರಿ. ಹೀಗಿರೋವಾಗ ಕಾಶ್ಮೀರ (Kashmir) ಪ್ರವಾಸಕ್ಕೆ (tour) ತೆರಳಿದ ಸೂರತ್(Surat) ಕುಟುಂಬವೊಂದು ಕಳೆದುಕೊಂಡ ಆಭರಣಗಳನ್ನು ಮರಳಿ ಪಡೆದಿದೆ. ಈ ಆಭರಣಗಳನ್ನು ಮರಳಿಸಲು ಕಾಶ್ಮೀರದ ಕುದುರೆ ಸವಾರರಿಬ್ಬರು  (pony  keepers)70 ಕಿ.ಮೀ. ದೂರ ಪ್ರಯಾಣ ಬೆಳೆಸಿರೋದು ವಿಶೇಷ.

ಕಾಶ್ಮೀರದ ಪಹಲ್ಗಂನಲ್ಲಿ ಪ್ರವಾಸಿಗರನ್ನು ತಮ್ಮ ಕುದುರೆಯಲ್ಲಿ ಸವಾರಿ ಮಾಡಿಸೋ ರಫಿಕ್ (Rafiq)ಹಾಗೂ ಅಫ್ರೋಜ್ (Affroz)70 ಕಿ.ಮೀ. ದೂರದಲ್ಲಿರೋ ಶ್ರೀನಗರಕ್ಕೆ (Srinagar) ಪ್ರಯಾಣಿಸಿ ಆಭರಣಗಳನ್ನು ವಾರಸುದಾರರಿಗೆ ಹಿಂತಿರುಗಿಸಿದ್ದಾರೆ. ಇವರಿಬ್ಬರ ಕುದುರೆಯಲ್ಲಿ ಸವಾರಿ (ride) ಮಾಡೋ ಸಂದರ್ಭದಲ್ಲಿ ಸೂರತ್ ಮೂಲದ ಕುಟುಂಬ ಒಡವೆಗಳನ್ನು ಕಳೆದುಕೊಂಡಿತ್ತು. ಆದ್ರೆ ತಕ್ಷಣಕ್ಕೆ ಇದು ಅವರ ಗಮನಕ್ಕೆ ಬಂದಿರಲಿಲ್ಲ. ಬಳಿಕ ಕ್ಯಾಬ್ ಡ್ರೈವರ್ಗಳಾದ ತಹಿರ್(Tahir) ಹಾಗೂ ಬಿಲಾಲ್ (Bilal) ಎಂಬುವರ ನೆರವಿನಿಂದ ಕುಟುಂಬ ಸದಸ್ಯರು ರಫಿಕ್ ಹಾಗೂ ಅಪ್ರೋಜ್ ಮೊಬೈಲ್ ಸಂಖ್ಯೆಗಳನ್ನು ಪತ್ತೆ ಹಚ್ಚುವಲ್ಲಿ ಸಫಲರಾಗಿದ್ದರು. ವಿಷಯ ತಿಳಿದ ತಕ್ಷಣ ರಫಿಕ್ ಹಾಗೂ ಅಪ್ರೋಜ್ ಪಹಲ್ಗಂನಿಂದ ಶ್ರೀನಗರಕ್ಕೆ ತೆರಳಿ ಆಭರಣಗಳನ್ನು ಸಂಬಂಧಪಟ್ಟವರಿಗೆ ಹಿಂತಿರುಗಿಸೋ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಇವರಿಬ್ಬರ ಪ್ರಾಮಾಣಿಕತೆಗೆ ಪ್ರವಾಸಿಗರು ಮೆಚ್ಚುಗೆ ಸೂಚಿಸಿದ್ದಾರೆ.

Tap to resize

Latest Videos

undefined

ಚಲಿಸ್ತಿರೋ ರೈಲಿನ ಜೊತೆಗೊಂದು ಸೆಲ್ಫೀ, ಹುಚ್ಚಾಟಕ್ಕೆ ಜೀವ ಕಳೆದುಕೊಂಡ ಬಾಲಕ!

ಆಭರಣ ಮರಳಿಸಿದ ತರಕಾರಿ ವ್ಯಾಪಾರಿ
ಈ ಹಿಂದೆ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರದಲ್ಲಿ ತರಕಾರಿ ವ್ಯಾಪಾರಿಯೊಬ್ಬರು ತಮಗೆ ಸಿಕ್ಕ 2 ಲಕ್ಷ ರೂ. ಮೌಲ್ಯದ ಆಭರಣಗಳನ್ನು ಪೊಲೀಸರಿಗೆ ನೀಡೋ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದರು. ಸಿದ್ದಾಪುರ ತಾಲೂಕಿನ ಹಾಳದಕಟ್ಟಾ ನಿವಾಸಿ ಸನ್ಮತಿ ವಿದ್ಯಾಧರ ಕೊಚೇರಿ ಬೈಕ್ ಮೇಲೆ ತೆರಳುತ್ತಿದ್ದಾಗ ಸಂತೆ ಮಾರುಕಟ್ಟೆ ಬಳಿ ಆಭರಣಗಳನ್ನು ಕಳೆದುಕೊಂಡಿದ್ದಾರೆ. ಈ ಬಗ್ಗೆ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಆಭರಣಗಳನ್ನು ಹುಡುಕುತ್ತಿದ್ದಾಗ ತರಕಾರಿ ವ್ಯಾಪಾರಿ ಅವರಗುಪ್ಪದ ಗಣಪತಿ ಬಾಳ ನಾಯ್ಕ ತಮಗೆ ಸಿಕ್ಕ ಆಭರಣಗಳನ್ನು ಪೊಲೀಸರಿಗೆ ನೀಡಿದ್ದರು. ಪೊಲೀಸರು ಆಭರಣಗಳನ್ನು ವಾರಸುದಾರರಿಗೆ ಮರಳಿಸಿದ್ದಾರೆ. ಗಣಪತಿ ನಾಯ್ಕ ಅವರ ಪ್ರಾಮಾಣಿಕತೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. 

ಹೆಂಡತಿ ಇಷ್ಟವಾಗಲಿಲ್ಲ ಎಂದು ಬೇರೊಬ್ಬನಿಗೆ ಮಾರಿದ ಗಂಡ, ಅಪ್ರಾಪ್ತೆಯ ಗ್ಯಾಂಗ್‌ರೇಪ್!

ಚಿನ್ನಾಭರಣ ಹೊಂದಿದ್ದ ಸೂಟ್ಕೇಸ್ ಮರಳಿಸಿದ ಯುವಕ 
ಕುಶಾಲನಗರದಲ್ಲಿಹೆದ್ದಾರಿ ಬದಿಯಲ್ಲಿ ಬಿದ್ದಿದ್ದ 4.5ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನೊಳಗೊಂಡಿದ್ದ ಸೂಟ್ಕೇಸನ್ನು ಯುವಕನೊಬ್ಬ ಪೊಲೀಸರ ಮೂಲಕ ಮಾಲೀಕರಿಗೆ ತಲುಪಿಸಿದ ಘಟನೆ ನಡೆದಿತ್ತು.ಕುಶಾಲನಗರದ ಟಾಟಾ ಪೆಟ್ರೋಲ್ ಬಂಕ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸೋಮಶೇಖರ್ ಎಂಬ ಯುವಕ ಹೆದ್ದಾರಿ ಬದಿಯಲ್ಲಿ ಸೂಟ್ಕೇಸ್ ಕಂಡ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಸೂಟ್ಕೇಸ್ ಪರಿಶೀಲಿಸಿದಾಗ ಅದರಲ್ಲಿ ಚಿನ್ನಾಭರಣ ಹಾಗೂ ನಗದು ಪತ್ತೆಯಾಗಿತ್ತು. ಅದರಲ್ಲಿದ್ದ ದಾಖಲೆಗಳನ್ನು ಪರಿಶೀಲಿಸಿದಾಗ ಬೆಂಗಳೂರಿನ ಮಹಿಳೆಗೆ ಸೇರಿದ ಸೂಟ್ಕೇಸ್ ಎಂಬುದು ತಿಳಿದು ಬಂದಿತ್ತು. ತಕ್ಷಣ ಅವರನ್ನು ಸಂಪರ್ಕಿಸಿದ ಪೊಲೀಸರು ಸೂಟ್ಕೇಸ್ ಹಿಂತಿರುಗಿಸಿದ್ದಾರೆ. ಬೆಂಗಳೂರು ಮೂಲದ ತಾಯಿ ಮತ್ತು ಮಗಳು ಕುಶಾಲನಗರಕ್ಕೆ ಬಂದಿದ್ದ ಸಂದರ್ಭದಲ್ಲಿ ಸೂಟ್ಕೇಸ್ ಕಳೆದುಕೊಂಡಿದ್ದರು. ಅನಾಥ ಸೂಟ್ಕೇಸ್ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದ ಸೋಮಶೇಖರ್  ಅವರ ಪ್ರಾಮಾಣಿಕತೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ಸೋಮಶೇಖರ್ ಅವರನ್ನು ಠಾಣೆಗೆ ಕರೆಸಿದ ಪೊಲೀಸರು ಅವರಿಗೆ ನಗದು ಬಹುಮಾನ ನೀಡಿ ಗೌರವಿಸಿದ್ದಾರೆ ಕೂಡ. ಈ ಘಟನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ಬೆಲೆಬಾಳೋ ವಸ್ತುಗಳು ಸಿಕ್ಕಿದ ತಕ್ಷಣ ಯಾರಿಗೂ ತಿಳಿಸದೆ ತಾವೇ ಇಟ್ಟುಕೊಳ್ಳೋ ಈ ಕಾಲದಲ್ಲಿ ಇಂಥ ಪ್ರಾಮಾಣಿಕ ವ್ಯಕ್ತಿಗಳು ಸಿಗೋದು ತುಂಬಾನೇ ವಿರಳ. 
 

click me!