ಬಿಜೆಪಿಯೊಂದಿಗೆ ಟಿಆರ್ ಎಸ್ ಮೈತ್ರಿ.?

By Web DeskFirst Published Aug 5, 2018, 2:35 PM IST
Highlights

ಇತ್ತೀಚೆಗಷ್ಟೇ ಟಿಡಿಪಿ ಎನ್ ಡಿಎ ಜೊತೆಗೆ ಮೈತ್ರಿ ಕಡಿದುಕೊಂಡಿದ್ದು ಇದೀಗ ತೆಲಂಗಾಣ ರಾಷ್ಟ್ರ ಸಮಿತಿ ಎನ್ ಡಿಎ ಜೊತೆ ಮೈತ್ರಿ ಮಾಡಿಕೊಳ್ಳಲಿದೆ ಎನ್ನಲಾಗಿದೆ. 

ತೆಲಂಗಾಣ :  ತೆಲಂಗಾಣ ರಾಷ್ಟ್ರ ಸಮಿತಿ [ಟಿಆರ್ ಎಸ್ ] ಲೋಕಸಭಾ ಚುನಾವಣೆಯ ಬಳಿಕ ಬಿಜೆಪಿಗೆ ಬೆಂಬಲ ನೀಡುವ ಸಾಧ್ಯತೆ ಇದೆ ಎನ್ನುವ ಮಾತುಗಳು ಕೇಳಿ ಬಂದಿದೆ.  

ಶನಿವಾರ ದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಟಿಆರ್ ಎಸ್ ಮುಖಂಡ ಕೆ. ಚಂದ್ರಶೇಖರ್ ರಾವ್ ಅವರ ನಡುವೆ ಒಂದು ಗಂಟೆಗೂ ಅಧಿಕ ಕಾಲ ಮಾತುಕತೆ ನಡೆದಿದ್ದು, ಈ ಅನುಮಾನಕ್ಕೆ ಕಾರಣವಾಗಿದೆ. ಇದರಿಂದ ಈ ಎರಡೂ ಪಕ್ಷಗಳೂ ಕೂಡ  ಮೈತ್ರಿ ಮಾಡಕೊಳ್ಳಬಹುದು ಎನ್ನಲಾಗಿದೆ. 

ಇತ್ತೀಚೆಗಷ್ಟೇ ಎನ್ ಡಿಎ ಒಕ್ಕೂಟದಿಂದ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಹೊರ ಬಂದು ಲೋಕಸಭೆಯಲ್ಲಿ ಕಳೆದ 2 ವಾರಗಳ ಹಿಂದೆ ಅವಿಶ್ವಾಸ ನಿರ್ಣಯವನ್ನು ಮಂಡಿಸಿತ್ತು. 

ಇದೀಗ ಎನ್ ಡಿಎ ಭಾಗವಾಗಿರದ ಟಿಆರ್ ಎಸ್ ಚುನಾವಣೆ ಬಳಿಕ ಬಿಜೆಪಿ ನೇತೃತ್ವದ ಎನ್ ಡಿಎ ಜೊತೆ ಸೇರಲಿದೆ. ಈ ಮೂಲಕ ಎನ್ ಡಿಎ ಬಲವು ಹೆಚ್ಚಳವಾಗಲಿದೆ ಎನ್ನುವ ಬಗ್ಗೆ ಮಾತುಗಳು ಕೇಳಿ ಬಂದಿದೆ. 

click me!