ಹಲೋ ಮಿನಿಸ್ಟರ್ : ಸಾರ್ವಜನಿಕರ ಪ್ರಶ್ನೆಗೆ ಸಾರಿಗೆ ಸಚಿವರ ಉತ್ತರ

By Suvarna Web DeskFirst Published Jul 2, 2017, 11:35 PM IST
Highlights

ಕನ್ನಡಪ್ರಭ-ಸುವರ್ಣನ್ಯೂಸ್ಏರ್ಪಡಿಸಿದ್ದಹಲೋಮಿನಿಸ್ಟರ್ಫೋನ್ಇನ್ಕಾರ್ಯಕ್ರಮದಲ್ಲಿಭಾಗವಹಿಸಿ ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸಿದರು

ಬೆಂಗಳೂರು(ಜು.02): ಸಾರಿಗೆ ಬಸ್ಸು ಹಾಗೂ ಭಾರಿ ಸರಕು ಸಾಗಣೆ ವಾಹನಗಳಿಗೆ ಸೀಮಿತವಾಗಿದ್ದ ಸ್ಪೀಡ್ ಗವರ್ನರ್ ಕಡ್ಡಾಯ ನಿಮಯವನ್ನು 9ಕ್ಕಿಂತ ಕಡಿಮೆ ಆಸನದ (ಎಂ-1) ಎಲ್ಲೊ ಬೋರ್ಡ್ ಪ್ಯಾಸೆಂಜರ್ ವಾಹನ ಹಾಗೂ 3.5 ಟನ್‌ಗಿಂತ ಕಡಿಮೆ ಸಾಮರ್ಥ್ಯದ ಸರಕು ಸಾಗಣೆ ವಾಹನಗಳಿಗೂ (ಎನ್-1) ಅನ್ವಯವಾಗುವಂತೆ ಮಾಡಲು ರಾಜ್ಯ ಸಾರಿಗೆ ಇಲಾಖೆ ಪ್ರಸ್ತಾವನೆ ಸಿದ್ದಪಡಿಸಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಭಾನುವಾರ ‘ಕನ್ನಡಪ್ರಭ-ಸುವರ್ಣ ನ್ಯೂಸ್’ ಏರ್ಪಡಿಸಿದ್ದ ‘ಹಲೋ ಮಿನಿಸ್ಟರ್’ ಫೋನ್ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಬೆಂಗಳೂರಿನ ಚಂದ್ರಪ್ಪ ಎಂಬುವವರ ಕರೆಗೆ ಉತ್ತರಿಸಿದ ಅವರು, ಹೈಕೋರ್ಟ್ ಆದೇಶದ ಮೇರೆಗೆ ಸ್ಪೀಡ್ ಗವರ್ನರ್ ಸಾಧನ ಅಳವಡಿಕೆ ಮಾಡಲು ಮುಂದಾಗಿದ್ದೇವೆ. ಇದು ಒಂದು ಸಾಧನವಾಗಿದ್ದು ವೇಗ ಮಿತಿಯನ್ನು ನಿಯಂತ್ರಿಸುತ್ತದೆ. ಇದರಿಂದ ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತದೆ. ಹೀಗಾಗಿ ಕಡ್ಡಾಯ ನಿಯಮ ಜಾರಿಗೆ ಚಿಂತನೆ ನಡೆಸಿದ್ದೇವೆ ಎಂದು ಹೇಳಿದರು.

ರಾಜ್ಯದಲ್ಲಿ ಇನ್ನು ಮುಂದೆ ಹೊಸದಾಗಿ ನೋಂದಣಿಯಾಗುವ ಎಲ್ಲಾ ವೈಟ್ ಬೋರ್ಡ್ ಹಾಗೂ ಎಲ್ಲೊ ಬೋರ್ಡ್ ವಾಹನಗಳಿಗೆ ಸ್ಪೀಡ್ ಗವರ್ನರ್ ಅಳವಡಿಕೆ ಕಡ್ಡಾಯ ಮಾಡಿ ಇತ್ತೀಚೆಗಷ್ಟೇ ಸುತ್ತೋಲೆ ಹೊರಡಿಸಲಾಗಿದೆ. ಇದರ ಜತೆಗೆ ಹಳೆಯ ಎಲ್ಲೊ ಬೋರ್ಡ್ ಪ್ಯಾಸೆಂಜರ್ ವಾಹನಗಳಿಗೆ (ಎಂ-1) ಹಾಗೂ 3.5 ಟನ್‌ಗಿಂತ ಕಡಿಮೆ ಸಾಮರ್ಥ್ಯದ ಸರಕು ಸಾಗಣೆ ವಾಹನಗಳಿಗೂ (ಎನ್-1) ಸ್ಪೀಡ್ ಗವರ್ನರ್ ಕಡ್ಡಾಯವಾಗಿ ಅಳವಡಿಕೆ ಮಾಡುವಂತೆ ಹೈಕೋರ್ಟ್ ಆದೇಶ ಮಾಡಿದೆ.

ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪ್ರಸ್ತುತ ಇರುವ 9 ಆಸನಕ್ಕಿಂತ (8 ಮತ್ತು 1) ಕಡಿಮೆ ಸಾಮರ್ಥ್ಯದ ಎಲ್ಲಾ ಪ್ಯಾಸೆಂಜರ್ ವಾಹನಗಳಿಗೂ ಸ್ಪೀಡ್ ಗವರ್ನರ್ ಕಡ್ಡಾಯ ಮಾಡಲು ಪ್ರಸ್ತಾವನೆ ಸಿದ್ದಪಡಿಸಿದ್ದೇವೆ. ಸ್ಪೀಡ್ ಗವರ್ನರ್ ಅಳವಡಿಕೆ ಮಾಡದಿದ್ದರೆ ಎಫ್‌ಸಿ (ಫಿಟ್ನೆಸ್ ಸರ್ಟಿಫಿಕೇಟ್) ನೀಡದಿರಲು ಸದ್ಯದಲ್ಲೇ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದರು.

ಈ ಹಿಂದೆ ಬಸ್ಸುಗಳು, ಭಾರಿ ಸರಕು ಸಾಗಾಣೆ ವಾಹನಗಳಿಗೆ ಮಾತ್ರ ಸ್ಪೀಡ್ ಗವರ್ನರ್ ಕಡ್ಡಾಯವಾಗಿತ್ತು. ಆದರೆ, ಇತ್ತೀಚೆಗೆ ಹೈಕೋರ್ಟ್ ಆದೇಶ ಮಾಡಿ ಎಂ-1 ಹಾಗೂ ಎನ್-1 ವಾಹನಗಳಿಗೂ ಸ್ಪೀಡ್ ಗವರ್ನರ್ ಕಡ್ಡಾಯ ಮಾಡಿ ಇಲ್ಲದಿದ್ದರೆ ಎಫ್‌ಸಿ ನೀಡಬೇಡಿ ಎಂದು ಆದೇಶಿಸಿದೆ. ಈ ಹಿನ್ನೆಲೆಯಲ್ಲಿ 9ಕ್ಕಿಂತ ಕಡಿಮೆ ಪ್ಯಾಸೆಂಜರ್ ಸಾಮರ್ಥ್ಯದ ಎಲ್ಲೊ ಬೋರ್ಡ್ ವಾಹನ, 3.5 ಟನ್‌ಗಿಂತ ಕಡಿಮೆ ಸಾಮರ್ಥ್ಯದ ಸರಕು ಸಾಗಾಣೆ ವಾಹನಗಳಿಗೂ ಸ್ಪೀಡ್ ಗವರ್ನರ್ ಅಳವಡಿಕೆ ಪ್ರಸ್ತಾವನೆ ಸಿದ್ದಪಡಿಸಲಾಗಿದೆ ಎಂದು ಹೇಳಿದ್ದಾರೆ.

click me!