
ಮಂಡ್ಯ: ಸಭ್ಯತೆಯಿಂದ ವರ್ತಿಸುವಂತೆ ತಿಳಿ ಹೇಳಿದ ಗ್ರಾಮಸ್ಥರ ಮನೆಗೆ ಮಂಗಳಮುಖಿಯರ ತಂಡ ವಾಮಾಚಾರ ಮಾಡಿಸಿರುವ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ರುದ್ರಾಕ್ಷಿ ಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದಲ್ಲಿ ಕೆಲ ದಿನಗಳಿಂದ ಹಿಂದೆ ಇಬ್ಬರು ಮಂಗಳಮುಖಿಯರು ಮನೆಯೊಂದನ್ನು ಬಾಡಿಗೆಗೆ ಪಡೆದು ವಾಸವಿದ್ದು ತದನಂತರ ಇವರ ಜೊತೆಗೆ ಇನ್ನು ಎಂಟು ಹತ್ತು ಮಂಗಳಮುಖಿಯರು ಮತ್ತೆರಡು ಮನೆಗಳನ್ನು ಪಡೆದುವಾಸವಾಗಿದ್ದರು.
ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿರುವ ಈ ಗ್ರಾಮದ ಮುಂಭಾಗವೇ ಇರೋ ರಸ್ತೆಯಲ್ಲಿ ಈ ಮಂಗಳಮುಖಿಯರು ಸಾರ್ವಜನಿಕರಿಂದ ಅಸಭ್ಯವಾಗಿ ವರ್ತಿಸಿ ಹಣ ಕೀಳುತ್ತಿದ್ದರು ಎನ್ನಲಾಗಿದೆ.
ಗ್ರಾಮದ ಮುಂದೆ ಈ ರೀತಿ ಅಸಭ್ಯವಾಗಿ ವರ್ತಿಸಿ ಗ್ರಾಮದ ಮರ್ಯಾದೆ ಕಳೆಯದಂತೆ ಗ್ರಾಮದ ಕೆಲವರು ನಿನ್ನೆ ಮಂಗಳಮುಖಿಯರಿಗೆ ಬುದ್ದಿವಾದ ಹೇಳಿದ್ದರು ಎನ್ನಲಾಗಿದ್ದು, ಇದರಿಂದ ಕುಪಿತರಾದ ಮಂಗಳಮುಖಿಯರು ರಾತ್ರಿ ತಮಗೆ ಬುದ್ದಿವಾದ ಬುದ್ದಿವಾದ ಹೇಳಿದ ಗ್ರಾಮದ ಹಲವು ಗ್ರಾಮಸ್ಥರ ಮನೆಗೆ ವಾಮಾಚಾರ ಮಾಡಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಮನೆಯ ಮುಂದೆ ನಿಂಬೆಹಣ್ಣು, ಕುಂಕುಮ, ಮೊಟ್ಟೆ ಒಡೆದು ವಾಮಾಚಾರ ಮಾಡಿಸಿರೋದನ್ನು ಪ್ರಶ್ನೆ ಮಾಡಿದ್ದಕ್ಕೆ ಗ್ರಾಮಸ್ಥ ರ ಮೇಲೆ ಈ ಮಂಗಳಮುಖಿಯರ ತಂಡ ಜಗಳಗೈದು ದಾಂಧಲೆ ನಡೆಸಿದ್ದಾರೆ.
ಅಲ್ಲದೇ ತಮ್ಮ ತಂಟೆಗೆ ಬಂದರೆ ಸರಿ ಇರುವುದಿಲ್ಲ ಎಂದು ಅಶ್ಲೀಲವಾಗಿ ಬೈಯ್ದು ದಾಂಧಲೆಗೆ ಮುಂದಾಗಿದ್ದಾರೆ. ಮಂಗಳಮುಖಿಯರ ಈ ಹೊಸ ವರಸೆಯಿಂದ ರುದ್ರಾಕ್ಷಿಪುರ ಗ್ರಾಮಸ್ಥರು ಕಂಗಾಲಾಗಿದ್ದಾರೆ.
ಅಲ್ಲದೇ ಇವರ ಈ ವರಸೆಯಿಂದ ಗ್ರಾಮಸ್ಥರಿಗೆ ಹೊಸದೊಂದು ಸಂಕಟ ಶುರುವಾಗಿದೆ. ಮನೆ ಖಾಲಿ ಮಾಡಿ ಎಂದು ಹೇಳಿದರೆ, ಮಾಟ ಮಾಡಿಸುವುದಾಗಿ ಬೆದರಿಕೆ ಹಾಕುತ್ತಿರುವುದು ಈಗ ಮನೆ ಮಾಲೀಕರಿಗೂ ಕೂಡ ಸಂಕಷ್ಟ ತಂದೊಡ್ಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.