ತೃತೀಯ ಲಿಂಗಿಯನ್ನು ವಿವಾಹವಾದ

Published : Jan 27, 2017, 04:26 PM ISTUpdated : Apr 11, 2018, 12:39 PM IST
ತೃತೀಯ ಲಿಂಗಿಯನ್ನು ವಿವಾಹವಾದ

ಸಾರಾಂಶ

'ನನಗೆ ಬಸುದೇವ್ ಅವರನ್ನು ವಿವಾಹ  ಆಗಿರುವುದಕ್ಕೆ ತುಂಬ ಸಂತೋಷವಾಗಿದ್ದು, ನನ್ನಂತಹ ತೃತೀಯ ಲಿಂಗಿಯನ್ನು  ಮದುವೆಯಾಗಲು ಧೈರ್ಯ ತೋರಿದ ಅವರಿಗೆ ಧನ್ಯವಾದ ಹೇಳಬಯಸುತ್ತೇನೆ'

ಮೇಘ ಎಂಬ ತೃತೀಯ ಲಿಂಗಿಯನ್ನ ಬಸುದೇವ ಎಂಬ ಪುರುಷನೊಬ್ಬ  ವಿವಾಹವಾಗಿದ್ದಾನೆ. ಈ ಅಪರೂಪದ ಘಟನೆ ನಡೆದಿರುವುದು ಒಡಿಶಾದ ಭುವನೇಶ್ವರದಲ್ಲಿ. ಎರಡು ಕುಟುಂಬದವರು ಒಪ್ಪಿಗೆ ಸೂಚಿಸಿ ಹಿಂದೂ ಸಂಪ್ರದಾಯದಂತೆ ವಿವಾಹವನ್ನು ನೆರವೇರಿಸಿದರು. ವಿವಾಹ ಸಮಾರಂಭದಲ್ಲಿ  ಹಲವು ಸ್ಥಳೀಯ ಗಣ್ಯರು ಆಗಮಿಸಿ ನವಜೋಡಿಗಳಿಗೆ  ಶುಭ ಕೋರಿದರು.

'ನನಗೆ ಬಸುದೇವ್ ಅವರನ್ನು ವಿವಾಹ  ಆಗಿರುವುದಕ್ಕೆ ತುಂಬ ಸಂತೋಷವಾಗಿದ್ದು, ನನ್ನಂತಹ ತೃತೀಯ ಲಿಂಗಿಯನ್ನು  ಮದುವೆಯಾಗಲು ಧೈರ್ಯ ತೋರಿದ ಅವರಿಗೆ ಧನ್ಯವಾದ ಹೇಳಬಯಸುತ್ತೇನೆ' ಎಂದು ತೃತೀಯ ಲಿಂಗಿ ಮೇಘ ಹೇಳಿದ್ದಾಳೆ. ಮೂರು ವರ್ಷಗಳ ಹಿಂದೆ ಸುಪ್ರೀಂ ಕೋರ್ಟ್'ನ ನ್ಯಾಯಪೀಠ ದೇಶದಲ್ಲಿ ತೃತೀಯ ಲಿಂಗಿಗಳ ಹಕ್ಕುಗಳನ್ನು ಗುರುತಿಸಿ ಅವರಿಗಾಗಿ ಪ್ರತ್ಯೇಕ ಮತದಾನದಲ್ಲಿ ಲಿಂಗದ ಹೆಸರು ನಮೂದು,  ಪಾಸ್'ಪೋರ್ಟ್, ಚಾಲನಾ ಪರವಾನಗಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಮುಂತಾದ ಅವಕಾಶ ನೀಡುವಂತೆ ತೀರ್ಪು ನೀಡಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪ್ರಶಾಂತ್ ನಾತು ಅಂಕಣ | ನಿತಿನ್ ನವೀನ್‌ಗೆ ಬಿಜೆಪಿ ಪಟ್ಟ ಸಿಕ್ಕಿದ್ದೇಗೆ? ಮೋದಿ-ಅಮಿತ್ ಶಾ ಕೊಟ್ಟ ಸಂದೇಶ ಏನು?
ದೇಶದ್ರೋಹಿಗಳಿಂದ ನುಸುಳುಕೋರರಿಗೆ ರಕ್ಷಣೆ : ಮೋದಿ ಕಿಡಿ